ಪುಟ:ಕನ್ನಡದ ಬಾವುಟ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೯ ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ ತಾನೆಲೆಯ ಸಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ಉಪಕಾರಿ ನಾನು ಎ ನ್ನು ಪಕೃತಿಯು ಜಗಕೆಂಬ ವಿಪರೀತ ಮತಿಯನುಳಿದ ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ ದಪದಂತೆ ನೈಜವಾದೊಳ್ಳಿನಿಂ ಬಾಳ್ವೊಲು ಡಿ. ವಿ. ಗುಂಡಪ್ಪ ೪೧. ತೆಂಗಾಳಿ ಬಾರ ಮು೦ಬೇಸಗೆಯ ಮೆಲುನಡೆಯ ಮಾರುತ ಬಾರಯ್ಯ ಮಧುಮಾಸ ತರವ ಸಾರುತ ಬಾರ ಲೋಕಕೆ ಹರಿಸದೈಸಿರಿಯ ಬೀರುತ ಬಾರ ಸೊಗಸಿನ ತೆರನ ಜನಕೆಲ್ಲ ತೋರುತ. ಮೊದಲ ವತ್ಸರದ ಹಣ್ಣೆಲೆ ಬಣ್ಣ ಮಾಸಿ ಉದುರ್ವ ದಿನ ಬಹುದನರೆಭಯದಿ ಹಾರೈಸಿ ಇದಿರ್ನೊಳ್ಳುದರ ಮೇಲೆ ಮೆಲುಮೆಲನೆ ಬೀಸಿ ಸದಯ ಬೆಸುಗೆಯ ಬಿಡಿಸಿ ಅದನು ಕಡೆಹಾಯ್ತು. ತರುಲತಾರಾಜಿಗಳ ಬಾಡಿರುವ ಮೆಯ್ಯ ಕರುಣಿ ಕೂರ್ಮೆಯ ತೋರುವೀ ನಿನ್ನ ಕೈ ಯ ಸರಸ ಸಂಪರ್ಕದಿಂ ನಲಿಸುತಕ್ಷಯ್ಯ ಪರಸತ್ವ ಲ್ಲಿ ತಳಿರ್ವಂತೆ ಹರಸಯ್ಯ ಎಲ್ಲ ಲತೆಗಳ ನೋ೬ ಮೊದಲಿಲ್ಲಿ ಬಂದು ನಲ್ಲ ನೀ ಮರೆದಿರಲು ವಿರಹದಲಿ ನೊಂದು ತಲ್ಲಣಿಸುವೀ ಮಲ್ಲಿಗೆಯನು ತರಿಸಂದು ಲಲ್ಲೆ ಯಿಂ ಸಂತೈಸಿ ಪೊರೆ ದೀನಬಂಧು.