ಪುಟ:ಕನ್ನಡದ ಬಾವುಟ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಣಗಿರುವ ಶಾಖೆಗಳ ಶಾಖೆಯುಪಶಾಖೆಗಳ ನಾಳನಾಳದಿ ಹರಿದು ಎಳೆಗೆಂಪು ಮೋಸುಗಳು ಕುಡಿಯಿಟ್ಟವೇನು ? ಹಸುಳೆಕುಡಿ ಮೈಗಂಧ ನೀ ಸವಿದೆಯೇನು ? ಶಿಶಿರವಳಿವುದು ಚೈತ್ರ ಬಹುದೆಂಬೆಯೇನು ? ವಿ. ಸೀ. (ವಿ. ಸೀತಾರಾಮಯ್ಯ) ೪೪, ಅಭೀಃ ಕಾಡ ಮೌನವ ಸೀಳಿ ಹಬ್ಬುತಿದೆ ಕೇಳುತಿದೆ ಬಿತ್ತರದ ದಿಕ್ತಟಗಳಡ್ಡಿ ದಾಟುತಿದೆ ! ಉಳಿದೆಲ್ಲ ನುಡಿಗಳನ್ನು ಮುಳುಗಿಸುತೆ ಮೊಳಗುತಿದೆ ಬಾಳ ಹೆದ್ದಾರಿಯನು ಹಿಡಿದೆತ್ತಿ ತೋರುತಿದೆ - ಅಭೀ... ! ಅಭೀಃ ! ಅಭೀಃ ! ಎಂಬಮ್ಮತವಾಣಿಯಿದು ಮೂವತ್ತು ಶತಮಾನಗಳ ಮೆಟ್ಟಿ ಕೇಳುತಿದೆ ಕಾಲದಾ ಕರೆಯಂಚಿನಾಚೆಯಿಂದ. ಯಜ್ಞಶಾಲೆಗಳಿ೦ದ ಬಲಿಯಿಂದ ಸೆರೆಯಿಂದ ತೋಂಡು ಮಲೆತೆಲ್ಲವನು ತುಳಿದತ್ತಣಿಂದ ಕಲ್ಲುಗಾಣಗಳಿಂದ ಸಿಲುಬೆಗಳ ನೋವಿಂದ ವಿಷ ಪಾತ್ರೆಯೊಡಲಿಂದ ಸುಡುವುರಿಯ ಮಡಿಲಿಂದ - ಅ ಭೀಃ ! ಅಭೀ... ! ಅಭೀಃ ! ಎಂಬ ನುಡಿ ಏಳುತಿದೆ ಹೇಡಿತನದಳುಕುಗಳ ಓಡಿಸಿದೆ ಚೆದರಿಸಿದೆ ವೀರಸಂಜೀವನವ ಊಡಿಸುತಿದೆ ! ಬಲಹೀನರೆಂದೆತ್ತಲಾತ್ಮವನು ಗಳಿಸಿದರು ? ಬಲಕಾಗಿ ಕಾಯ್ದವರು ಏಗೈವರು ? ಚಲಿತ ಅಧಿಕಾರದ೦ಡಲೆಗೆ ಬೆದರುವರು ಎಂದೇನ ಸಾಧಿಸುವರೆಂದೆನ್ನ ಕೇಳುತಿದೆ - ಅಭೀಃ ! ಅಭೀಃ ! ಅಭೀಃ ! ಎಂಬ ಸಗ್ಯದ ಬಿತ್ತು ನರರ ಎದೆವೊಲಗಳಲಿ ಬೇರಿಟ್ಟು ಮೊಳೆಯುತಿದೆ ! ಬಲದ ತಿರುಳನು ಬಲಿಸಿ ಬೆಳಸುತ್ತಿದೆ ! ನಿಲ್ಲಿಸದು ಕೂಡಿಸದು ಮಲಗಿಸದು ಕೆರಳಿಪುದು ಆಡುವಾಟದ ನಡುವೆ ಕೂಟಗಳ ನಡುವೆ!