ಪುಟ:ಕನ್ನಡದ ಬಾವುಟ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ ರತ್ನಾಕರ: ೧೫೫೭ ಭರತೇಶವೈಭವ ಬಳಿಕ ಮೂರನೆಯ ಜಾವದೊಳವನೀಶನು ನಳಿನಾಕ್ಷಿಯರು ಸಹವಾಗಿ ನೆಲಮಾಡವೇರಿ ಮೇಲ್ಮನೆಯೊಳು ಕುಳಿತು ಸೆಂ ಗಳಿಗಂಬುನಿಧಿಯ ತೋರಿದನು ಕಡಲ ಮುನ್ನ ರಿಯದ ಸೆಂಗಳಚ್ಚರಿವಟ್ಟು ನಿಡು ಬೆರಳಿಟ್ಟು ನಾಸಿಕಕೆ ಮುಡಿಯೋಲೆದೋಲೆದು ನೋಡಿದರದರೊಂದು ಬ ಲೈಡಣೆಗೆ ಬಗೆಯೊಳು ಮೆಚ್ಚಿ ದಿಟ್ಟಗೆ ಮಿಗೆ ಹಾಯ್ದು ತೋರ್ಪ ಸಮುದ್ರದ ಕಟ್ಟಳಲಿಗೆ ಚೋದ್ಯವಟ್ಟು, ಅಟ್ಟಹಾಸವ ಮಾಡುತೊಬ್ಬರೊಬ್ಬರ ಮೈಯ

  • ತಟ್ಟುತ ತೋರಿ ನುಡಿದರು ಅಟ್ಟುವ ತೆರೆಯ ಮುಂದೋಡುವ ತೆರೆಯ ಸೆ

ರ್ಬೆಟ್ನದಂತೇಳ ತೆರೆಗಳಾ ತೊಟ್ಟನೆ ಬಯಲಹ ತೆರೆಗಳನವರು ಕ ಣ್ಣಿಟ್ಟು ನೋಡಿದರರ್ತಿವಡುತ ಎಡೆಗುಗಳನಲ್ಲಿಗಲ್ಲಿ ನಿಂದದ್ರಿಯ ನಿಡುಗಲ್ಲುಗಳನದರೊಳಗೆ ಎಡೆಯಾಡುತಿಹ ದೋಣಿ ದುಗ್ಗಿ ಕಪ್ಪಲು ದೊಡ್ಡ ಹಡಗುಗಳಿರವ ನೋಡಿದರು ತುಂತುರು ತೆರೆ ನೊರೆ ಸುಳಿ ಘುಳು ಘುಳು ರವ ತೂಂತಿಟ್ಟು ಹೊಳೆವ ವಾರಿಧಿಯ ಕಾಂತೆಯರೆಲ್ಲರೀಕ್ಷಿಸಿದರು. . . . . . . . 'ಸರ್ವಜ್ಞ: ಸು. ೧೭೦೦ ವಚನಗಳು ಜೋಳದಾ ಬೋನಕ್ಕೆ ಬೇಳೆಯಾ ತೊಗೆಯಾಗಿ ಕಾಳೆಮ್ಮೆ ಕರೆದ- ಹೈನಾಗಿ ಬೆಳವಲದ ಮೇಳ ನೋಡೆಂದ ಸರ್ವಜ್ಞ ಕಿಚ್ಚು೦ಟು ಕೆಸರುಂಟು ಬೆಚ್ಚನಾ ಮನೆಯುಂಟು ಇಚ್ಚೆಗೆ ಬರುವ- ಸತಿಯುಂಟು ಮಲೆನಾಡ ಮೆಚ್ಚು ನೋಡೆಂದ ಸರ್ವಜ್ಞ