ಪುಟ:ಕನ್ನಡದ ಬಾವುಟ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಕಟಕಟ, ಶಿವ ನಿನಗಿನಿತು ಕರುಣವಿಲ್ಲ. ಅಕಟಕಟ, ಶಿವ ನಿನಗಿನಿತು ಕೃಪೆಯಿಲ್ಲ. ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ, ಪರಲೋಕದೂರನ? ಏಕೆ ಹುಟ್ಟಿಸಿದೆ, ಕೂಡಲಸಂಗಮದೇವ ಕೇಳಯ್ಯಾ, ಎನಗಾಗಿ ಮತ್ತೊಂದು ತರುಗಾದಿಗಳಿದ್ದಿಲ್ಲವೇ ? * ತಂದೆ ತಾಯಿ ನೀನು, ಬಂಧು ನೀನು, ಬಳಗ ನೀನು. ನೀನಲ್ಲದೆ ಮತ್ತಾರು ಇಲ್ಲವಯ್ಯಾ, ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು. ಎನಿಸುಕಾಲ ಕಲ್ಲು ನೀರೊಳಗಿದ್ದರೇನು ? ನೆನೆದು ಮೃದುವಾಗಬಲ್ಲುದೆ ? ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ, ಮನದಲ್ಲಿ ದೃಢವಿಲ್ಲದನ್ನಕ್ಕ? ನಿಧಾನವ ಕಾಯ್ತಿದ್ದ ಬೆಂತರನಂತೆ ಅದರ ವಿಧಿ ಎನಗಾಯಿತ್ತು ಕೂಡಲ ಸಂಗಮದೇವ. ಆರಾಧ್ಯ ಪ್ರಾಣಲಿಂಗವೆಂದರಿದು, ಪೂರ್ವಗುಣವಳಿದು, ಪುನರ್ಜಾತ ನಾದ ಬಳಿಕ, ಸಂಸಾರ ಬಂಧುಗಳೆನ್ನ ವರೆ೦ದರೆ, ನಂಟುಭಕ್ತಿ, ನಾಯಕನರಕ ಇಂತೆಂದುದು ಕೂಡಲಸಂಗನ ವಚನ. ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟ ತನದ ಹೊರೆಯ ಹೊರಿಸದಿರಯ್ಯ. ಕಕ್ಕಯ್ಯನೊಕ್ಕು ದನಿಕ್ಕ ನೋಡಯ್ಯಾ, ದಾಸಯ್ಯ ಶಿವದಾನವನೆರೆಯ ನೋಡಯ್ಯಾ ! ಮನ್ನಣೆಯ ಚೆನ್ನಯ್ಯನೆನ್ನ ಮನ್ನಿಸ, ಉನ್ನತ ಮಹಿಮ, ಕೂಡಲಸಂಗಮದೇವ, ಶಿವಧೋ ಶಿವಧೋ. ಅಪ್ಪನು ಡೋಹರ ಕಕ್ಕಯ್ಯನಾಗಿ, ಮುತ್ತಯ್ಯ ಚೆನ್ನಯ್ಯನಾದರೆ, ಆನು ಬದುಕುವೆನು. ಮತ್ತಾ ಶ್ವಪಚಯ್ಯನ ಸನ್ನಿ ಧಿಯಿಂದ ಭಕ್ತಿಯ ಸದ್ದು ಣವ ನಾನರಿವೆನಯ್ಯ, ಕಷ್ಟ ಜಾತಿ ಜನ್ಮದಲಿ ಜನಿಸಿದೆ. ಎನಗಿದು ವಿಧಿಯೇ ಕೂಡಲಸಂಗಮದೇವಾ? " ಸೆಟ್ಟ ಎಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ ? ಡೋಹರ ನೆಂಬೆನೆ ಕಕ್ಕಯ್ಯನ ? ಮಾದಾರನೆಂಬೆನೆ ಚೆನ್ನಯ್ಯನ ? ಆನು ಹಾರುವ ನೆಂದಡೆ ಕೂಡಲಸಂಗಯ್ಯ ನಗುವನಯ್ಯ, ಆರು ಮುನಿದು ಎಮ್ಮನೇನು ಮಾಡುವರು ? ಊರು ಮುನಿದು ಎಮ್ಮ ನೆಂತು ಮಾಡುವರು.? ನಮ್ಮ ಕುನ್ನಿ ಗೆ ಕೂಸ ಕೊಡಬೇಡ. ನಮ್ಮ ಸೊಣಗಂಗೆ ತಳಿಗೆಯಲಿಕ್ಕ ಬೇಡ, ಆನೆಯಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ, ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ? ಕೊಲ್ಲುವನೇ ಮಾದಿಗನು, ಹೊಲಸು ತಿ೦ಬುವನೇ ಹೊಲೆಯ. ಕುಲ ವೇನೋ, ಅವಂದಿರ ಕುಲವೇನೋ ? ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು. ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ! ಉಂಬ ಜಂಗಮ ಬಂದರೆ ನಡೆ ಎಂಬರು, ಉಣ್ಣದ