ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ, ಸಲೆಮಾರುವೋದೆನೆಂದರೆ, ತನುವ ನಲ್ಲಾಡಿಸಿ ನೋಡುವೆ ನೀನು, ಮನವನಲ್ಲಾಡಿಸಿ ನೋಡುವೆ ನೀನು, ಧನವನಲ್ಲಾಡಿಸಿ ನೋಡುವೆ ನೀನು, ಇವೆಲ್ಲಕ್ಕಂಜದಿದ್ದರೆ, ಭಕ್ತಿ ಕ೦ಪಿತ ನಮ್ಮ ಕೂಡಲಸಂಗಮದೇವ.

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ. ಒರೆಗೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ. ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡಿಯಾಣಿಯ ಮಾಡಿ, ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು ಕೂಡಲ ಸಂಗಮದೇವ.

ಇರಿಸಿಕೊಂಡು ಭಕ್ತರಾದರೆಮ್ಮವರು. ತರಿಸಿಕೊಂಡು ಭಕ್ತರಾದರೆಮ್ಮ ವರು. ಜರಿಸಿಕೊಂಡು ಭಕ್ತರಾದರೆಮ್ಮವರು. ಕೊರಸಿಕೊಂಡು ಭಕ್ತರಾದರೆಮ್ಮವರು. ಕೂಡಲಸಂಗನ ಶರಣರಿಗೆ ಮುನಿಸ ತಾಳಿ ಎನ್ನ ಭಕ್ತಿ ಅರೆಯಾಯಿತ್ತು.

ಜಲವ ತಪ್ಪಿದ ಮತ್ತ್ವ ಬದುಕುವುದೇ ಸೋಜಿಗ. ಗಣ ತಿoತಿಣಿಯೊಳ ಗಿರಿಸೆನ್ನ ಲಿಂಗವೇ, ಶಿವ ಶಿವ ಕೂಡಲಸಂಗಮದೇವ ಸೆರಗೊಡ್ಡಿ ಬೇಡುವೆನು.

ಊರಮುಂದೆ ಹಾಲ ಹಳ್ಳ ಹರಿಯುತ್ತಿರಲಿ, ಓರೆಯಾವಿನ ಬೆನ್ನ ಹರಿಯಲದೇಕಯ್ಯ? ಲಜ್ಜೆಗೆಡಲೇಕೆ? ನಾಣುಗೆಡಲೇಕೆ? ಕೂಡಲಸಂಗಮ ದೇವಯ್ಯನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯ?

ದಯವಿಲ್ಲದ ಧರ್ಮವಾವುದಯ್ಯ? ದಯವೇ ಬೇಕು ಸಕಲ ಪ್ರಾಣಿ ಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯ, ಕೂಡಲಸಂಗಯ್ಯನಂತಲ್ಲ ದೊಲ್ಲನಯ್ಯ,

ಆನೆ ಅಂಕುಶಕ್ಕಲ್ಲದೆ ಅಂಜುವುದೇ ಅಯ್ಯ? ಮಾಣದೆ ಸಿಂಹದ ನಖ ವೆಂದು ಅಂಜುವುದಲ್ಲದೆ? ಆನೀ ಬಿಜ್ಜಳಂಗಂಜುವೆನೆ ಅಯ್ಯ? ಕೂಡಲ ಸಂಗಮದೇವ, ನೀನು ಸರ್ವಜೀವದಯಾಪಾರಿಯಾದ ಕಾರಣ ನಿಮಗಂಜುವೆ ನಲ್ಲದೆ?

ಜೋಳವಳೆಯುವವ ನಾನಲ್ಲಯ್ಯ, ವೇಳೆಯಳೆಯುವವ ನಾನಲ್ಲಯ್ಯ, ಹಾಳುಗೆಟ್ಟೋಡುವ ಆಳು ನಾನಲ್ಲಯ್ಯ, ಕೇಳು ಕೂಡಲಸಂಗಮದೇವ ಮರಣವೇ ಮಹಾನವಮಿಯೆನಗೆ,

ಆಯುಷ್ಯ ತೀರಿದಲ್ಲದೆ ಮರಣವಿಲ್ಲ. ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲೇಕೋ ಲೋಕವಿಗುರ್ಬಣೆಗೆ? ಅ೦ಜಲೇಕೊ ಕೂಡಲಸಂಗಮದೇವ ನಿಮ್ಮಾಳಾಗಿ?

ಕಲಿಯ ಕೈಯ ಕೈ ದುವಿನ೦ತಿರಬೇಕಯ್ಯ, ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯ, ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಡಲದಕ್ಕೆ ಒಲಿವ ಕೂಡಲಸಂಗಮದೇವ.