ಪುಟ:ಕನ್ನಡದ ಬಾವುಟ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂತರದಿ ಸುತರೊಡನೆ ರುಚಿಯಾಗಿ ಭುಂಜಿಸಿದ ನಂತರದೊಳಾ ಸತಿಯು ಭೋಜನಂಗೈದ ಬಳಿ ಕಂತರ ಹಿತಾಹ್ಲಾದದಿಂದ ಜನರಲ್ ಸುರಟ ನೋಡಿ ಪೊರಮಟ್ಟನು ಬಂದು ಸತಿಸುತರೊಡನೆಯರಮನೆಯ ಬಾಗಿಲೊಳ್ ನಿಂದಿರುವ ಗಜ ಹಯ ವರೂಥಾದಿ ರೋಹಕರ ಸಂದಣಿಯ ಬಾಯ ಭಲ್ಲೆಗಳ ಪಿಡಿದಿರ್ಪವರನಿಂಗ್ಲೀಷು ವಾದ್ಯದವರ ಚೆಂದದಿಂ ಶ್ರುತಿವಾರಿಕೊಳಲುಗಳ ನುಡಿಸುವರ ಬಂದುರದಿ ಕಹಳೆ ತುತ್ತೂರಿಗಳನೂದುವರ| ನಿಂದು ಸಾನಂದದಿಂ ಭೇರೀನಗಾರಿಗಳ ಬಡಿವವರ ತೋರಿಸಿದನು ಬಳಿಕ ಕೃಷ್ಟೆ೦ದ್ರನೃಪನಂಬಾವಿಲಾಸದೊಳ್ ತಳತಳಿಸುತಿರುವ ನವರತ್ನ ಭದ್ರಾಸನದಿ ಕಲಿತ ಸಂತೋಷದಿಂ ಕುಳಿತಿರಲು ಸಕಲಾಧಿಕಾರಿಗಳ್ ಭಕ್ತಿಯಿಂದ ನೆಲತನಕ ತಲೆಗಳಂ ಬಾಗಿಸುತ ಮುಜುರೆಯಂ ಕಲಿಕಾಲ ಕೃಷ್ಣನಾದೀ ಕೃಷ್ಣರಾಜಂಗೆ | ನಿಲವಿಲ್ಲದೇಗೈದರೀ ಮಹಾವಿಭು ಸದೃಶರಾರುಂಟು ಲೋಕದೊಳಗೆ ಇಂತು ಸಂಭ್ರಮದಿಂದ ಕೃಷ್ಣರಾಜೇಂದ್ರನೊ ಡ೦ತಿಯುತವವ ಕವಿ ಸತಿ ಸಹಿತ ನೋಡುತ ಸಂತಸದಿ ಪೊಗಳುತ್ತ ನಲಿದು ಕುಣಿದಾಡುತ್ತ ಮಕ್ಕಳಿಗೆ ತೋರಿಸುತ್ತ ಸಂತೋಷವಾಯಿತೇ ನಿಮಗೆಂದು ಕೇಳುತ್ತ ಕಂತುಸನ ಕೃಪ್ಲೇ೦ದ್ರ ದರ್ಶನದ ಪುಣ್ಯ ಮೆನು ಗಂತವಿಲ್ಲದ ಸಕಲ ಸಂಪತ್ತುಗಳ ಕೊಡುವುದೆಂದು ತಾ ಪೇಳ ಸತಿಗೆ ೧೭. ಅಯ್ಯಶಾಸ್ತ್ರಿ ೧೮೫೩-೧೯೩೪ ನಾಲ್ವಡಿ ಕೃಷ್ಣರಾಜ ಒಡೆಯರವರು ರಾಜ್ಯಭಾರ ವಹಿಸಿದ್ದು ಘನ ತೇಜೋನಿಧಿ ಕರ್ಜನೆಂದೆನಿಸಿದಾ ಆ೦ಗ್ಲೆಯ ಸರ್ವಾಧಿಕಾ ರಿ ನಿಜಾನೀಕ ಸಮೇತನಾಗಿ ಮುದದಿಂ ಶ್ರೀಮನ್ಮಹೀಶೂರ ಸ ತನಮಂ ಸಾರ್ತರೆ ರಾಯವನ್ನ ಣೆಗಳ ಮಾರಾಣಿಯಾತಂಗೆ ನಂ ದನನಿಂ ಮಾಡಿಸಿದಳ್ ಮಹಾವಿಭವದಿಂ ಶ್ರೀಕೃಷ್ಣ ರಾಜೇಂದ್ರನಿಂ ಅಂತಾತಂ ಬಂದಾಂಗೇಯ ಮಹಾಧಿಕಾರಿ ನಿವಾಸಾರ್ಥಮಪ್ಪ ಮಹಾ ಸೌಧದೊಳ್ ಬೀಡಂ ಬಿಟ್ಟ ಸಮನಂತರಮೆ ಶಾಲಿವಾಹನ ಶಕದ ಶರ ನೇತ್ರ ವಸು ಚಂದ್ರ ಮಿತ ಶುಭಕೃದ್ವತ್ಸರ ಶ್ರಾವಣ ಶುಕ್ಲ ಪಂಚಮಿಯ ಪೊಡಮೆ ನಿಜ ವೈಭವ ಪರಾಜಿತ ವೈಜಯಂತಮಪ್ಪ ರಾಜಸಭಾಮಂಟಪದೊಳ್ ಪಲಬರ್