ಪುಟ:ಕಮ್ಯೂನಿಸಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಷ್ಯಾದಲ್ಲಿ ಸಮಾಜವಾದ ಅಧ್ಯಾಯ 6 ಆಧುನಿಕ ಸಮಾಜವಾದದ ( ಮಾರ್ಕ್ಸ್ ವಾದ) ಇತಿಹಾಸದಲ್ಲಿ 1917 ನೇ ವರ್ಷ ಬಹಳ ಮುಖ್ಯವಾದದ್ದು. ಈ ವರ್ಷ ರಷ್ಯಾದೇಶದ ಕಾರ್ಮಿಕವರ್ಗ ಕಮ್ಯೂನಿಸ್ಟ್ ಪಕ್ಷದ ಮುಖಂಡತ್ವದಲ್ಲಿ ಜಯಪ್ರದವಾಗಿ ಸಮಾಜಕ್ರಾಂತಿಯನ್ನು ನಡೆಸಿತು. ಬಂಡವಾಳಶಾಹಿ ವ್ಯವಸ್ಥೆ ಮತ್ತು ವರ್ಗ ಗಳು ಮೂಲೋತ್ಪಾಟನೆ ಹೊಂದಿದವು. ಸಮಾಜವಾದೀ ಆರ್ಥಿಕವ್ಯವಸ್ಥೆ ಸ್ಥಾಪನೆಯಾಯಿತು. ರಷ್ಯಾ ದೇಶದಲ್ಲಿ ಕ್ರಾಂತಿಯು ನಡೆದಂತೆ ಇತರ ದೇಶಗಳಲ್ಲೂ ಕ್ರಾಂತಿ ನಡೆದಿದೆ, ಆದರೆ ಇತರ ದೇಶಗಳಲ್ಲಿ ಆಗಿರುವ ಯಾವ ಕ್ರಾಂತಿಯೂ ಸಹ ರಷ್ಯಾ ದೇಶದ ಕ್ರಾಂತಿಯ ಸ್ವರೂಪವನ್ನಾಗಲೀ ಅಥವಾ ರಷ್ಯಾದ ಕ್ರಾಂತಿಯ ವೈಶಿಷ್ಟ್ಯವನ್ನಾಗಲೀ ಹೊಂದಿಲ್ಲ. ಇತರ ದೇಶಗಳ ಕ್ರಾಂತಿಗಳು ಕೊನೆಗೊಂಡಂತೆ ರಷ್ಯಾ ದೇಶವ ಕ್ರಾಂತಿಯನ್ನೂ ಸಹ ಸಾಂಕುಶ ಪ್ರಭುತ್ವದ ಸ್ಥಾಪನೆಯಲ್ಲಿ ಮತ್ತು ಸೌರ ಮತ್ತು ರಾಜಕೀಯ ಹಕ್ಕುಗಳ ಘೋಷಣೆಯಲ್ಲಿ ಮುಕ್ತಾಯಗೊಳಿಸಲು ಸ್ವಾಮ್ಯವರ್ಗ ಯತ್ನಿ ಸಿತು (Bourgeoisie Revolution), ಆದರೆ ಸಂಘಟನೆ ಹೊಂದಿದ್ದ ಕಾರ್ಮಿಕವರ್ಗ ಆರ್ಥಿಕ ಪ್ರಶ್ನೆಯನ್ನು ಮುಂದಿಟ್ಟು ಬಂಡವಾಳಶಾಹಿ ವ್ಯವಸ್ಥೆ ಯನ್ನು ಚ್ಯುತಿಗೊಳಿಸಲು ಚಳವಳಿ ಹೂಡಿತು, ಬಂಡವಾಳ ಆರ್ಥಿಕ ವ್ಯವಸ್ಥೆಯ ವಿನಾಶ ಮತ್ತು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯದ ನಾಶ ಇವು ಆಗುವವರೆಗೂ ಕಾರ್ಮಿಕವರ್ಗ ಕ್ರಾಂತಿಯನ್ನು ಮುಂದುವರಿಸಿತು (Proletarian Revolution) ಆರ್ಥಿಕ ಪ್ರಶ್ನೆಯನ್ನು ಮುಂದಿಟ್ಟು, ಆರ್ಥಿಕ ಸಮಾನತೆಗಾಗಿ ಪಣತೊಟ್ಟು, ಮೊಟ್ಟ ಮೊದಲನೆಯ ಬಾರಿಗೆ ರಷ್ಯಾದ ಕಾರ್ಮಿಕರು ದಿಗ್ವಿಜಯವನ್ನು ಗಳಿಸಿದರು.

  • ರಷ್ಯಾ ದೇಶದಲ್ಲಿ ವಿಜಯಿ ಪ್ರದವಾದ ಕಾರ್ಮಿಕರ ಕ್ರಾಂತಿಯಲ್ಲಿ ಕಾರ್ಮಿಕವರ್ಗದ ಮತ್ತು ಕಮ್ಯೂನಿಸ್ಟ್ ಪಕ್ಷದ ಮುಖಂಡನಾಗಿ ನಿಂತ ಲೆನಿನ್ನನ ಪಾತ್ರ ಅತಿ ಮಹತ್ವವಾದದ್ದು, ಕ್ರಾಂತಿಕಾರಕ ಮಾರ್ಕ್ವಾದ ಕಮ್ಯೂನಿಸ್ಟ್ ಪಕ್ಷದ ಪತಾಕೆಯಾಯಿತು. ಶೋಷಿತವರ್ಗದ ಬೇಡಿಕೆ