ಪುಟ:ಕಮ್ಯೂನಿಸಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧d೨ ವೈಜ್ಞಾನಿಕ ಸಮಾಜವಾದ ವಿಕ್ರಯಮಾಡಲೂ ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ. ಈ ಬಗೆಯ ಸ್ವಾತಂತ್ರ ಆರ್ಥಿಕ ರಂಗದಲ್ಲಿ ವರ್ಗ ವಿರಸ, ಶೋಷಣೆ, ನಿರುದ್ಯೋಗಗಳನ್ನು ತರುವುದರಿಂದಲೂ, ಸಮಾಜವನ್ನು ಇಬ್ಬಾಗವಾಗಿ- ಸ್ವಾಮ್ಯವುಳ್ಳವರ್ಗ ಮತ್ತು ಸ್ವಾಮ್ಯವಿಲ್ಲದವರ್ಗ-ಒಡೆಯುವುದರಿಂದಲೂ, ಐಶ್ವರ್ಯವಂತರಾದವರು ಇನ್ನೂ ಐಶ್ವರ್ಯವಂತರಾಗುವಂತೆ ಮತ್ತು ಸ್ವಾಮ್ಯವಿಲ್ಲದವರು ಇನ್ನೂ ದುಃಸ್ಥಿತಿಯ ಜೀವನ ನಡೆಸುವಂತೆ ಮಾಡು ವುದರಿಂದಲೂ ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದರ ಪ್ರತಿನಿಧಿ ಬಂಡ ವಾಳವರ್ಗವನ್ನು ತೊಡೆದು ಹಾಕಲಾಗಿದೆ. ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿರುವುದು ಸಮಾಜಕ್ಕೆ ಕಂಟಕವೆಂದು ಬಗೆದ ಅವು ಗಳನ್ನು ಸಮಾಜೀಕರಣ ಮಾಡಲಾಗಿದೆ. ದುಡಿಮೆ ಮಾಡಲು ಮತ್ತು ದುಡಿಮೆಗೆ ತಕ್ಕ ಪ್ರತಿಫಲ ಪಡೆಯಲು ಹಕ್ಕು ಇದೆ, ಶೋಷಣೆಗೆ ಅವಕಾಶ ವಿಲ್ಲದಿರುವ ಹೊಸ ಬಗೆಯ ಸಮಾಜವಾದೀ ಸ್ವಾತಂತ್ರ್ಯವನ್ನೂ ಸಮಾನತೆ ಯನ್ನೂ ವ್ಯಕ್ತಿಗಳು ಹೊಂದಿದ್ದಾರೆ. ಉತ್ಪಾದನಾ ಸಾಧನಗಳಲ್ಲಿ ಸ್ವಾಮ್ಯ, ಸಮಾಜದ ಏಳಿಗೆಗೆ ಮತ್ತು ವ್ಯಕ್ತಿಗಳ ಅಭಿವೃದ್ದಿಗೆ ಅಡ್ಡಿ ಬರುವ ಆರ್ಥಿಕ ಸ್ವಾತಂತ್ರ್ಯ ಇವುಗಳು ಹೊರತು, ಮಿಕ್ಕ ಎಲ್ಲ ವಿಧದ ಸ್ವಾತಂತ್ರ್ಯಗಳನ್ನು ವ್ಯಕ್ತಿಗಳು ಅನುಭವಿಸಲು ಬಾಧ್ಯರಿದ್ದಾರೆ.

  • ರಷ್ಯಾದಲ್ಲಿ ಸಮಾಜವಾದೀ ವ್ಯವಸ್ಥೆ ಆರ್ಥಿಕವಾಗಿ ವರ್ಗರಹಿತ

ಸಮಾಜವನ್ನು ಉದ್ಯೋಷಿಸಿದ್ದರೆ ರಾಜಕೀಯ ರಂಗದಲ್ಲಿ ಪ್ರಜಾಸತ್ತಾತ್ಮಕ ಧೈಯಗಳಿಗೆ ಮಾನ್ಯತೆ ಕೊಟ್ಟಿದೆ. 1 (1) ಸೋವಿಯಟ್ ಪ್ರಜಾಪ್ರಭುತ್ವಕ್ಕೂ ಬಂಡವಾಳಶಾಹಿ ಪ್ರಜಾಪ್ರಭು 3ಕ್ಕೂ ಹಲವು ವ್ಯತ್ಯಾಸಗಳಿವೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾ ಮ್ಯ, ಕೂಲಿಯವರನ್ನು ನೇಮಿಸಿಕೊಂಡು ಲಾಭಕ್ಕಾಗಿ ನಡೆಯುವ ಉತ್ಪಾದನೆ, ಖಾಸಗಿ ಆರ್ಥಿಕ ವ್ಯವಹಾರೈ ಉದ್ಯಮಗಳಲ್ಲಿ ಸರ್ಕಾರ ಪ್ರವೇಶಿಸದಿರುವುದು, ಇವು ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯಾಗಿದೆ, ಇದಕ್ಕೆ ಪ್ರತಿಯಾಗಿ ಸಮಾಜವಾದೀ ಆರ್ಥಿಕವ್ಯವಸ್ಥೆ ಸೋವಿಯಟ್ ಪ್ರಜಾಸತ್ತೆಯ ಆಧಾರವಾಗಿದೆ ಆರ್ಥಿಕ ವ್ಯವಸ್ಥೆಗೂ ರಾಜ್ಯ ವ್ಯವಸ್ಥೆಗೂ ನಿಕಟ ಸಂಬಂಧವಿದೆ ಎಂದು ಸೋವಿಯಟ್ ಪ್ರಜಾಸತ್ತೆ ತಿಳಿಸುತ್ತದೆ, ಬಂಡವಾಳ ಆರ್ಥಿಕವ್ಯವಸ್ಥೆಯ