ಪುಟ:ಕಮ್ಯೂನಿಸಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ ನಾಮಾಂಕಿತ ಇತರ ಸಮಾಜವಾದಗಳಿಗಿಂತ ಉಗ್ರನಿಲುವನ್ನು ಸೂಚಿಸುವ ಶಬ್ದ ವಾಗಿ ಇದ್ದಿತು. ಮಾರ್ಕ್ಸ್-ಏಂಗೆಲ್ಸ್ರಿಗೆ ತಮ್ಮ ವಾದವನ್ನು ಇತರ ಸಮಾಜವಾದಗಳಿಂದ ಪ್ರತ್ಯೇಕಿಸುವುದಕ್ಕೆ ' ಕಮ್ಯೂನಿಸ್ಟ್ ' ಎಂಬ ಶಬ್ದ ಪ್ರಯೋಗ ಸೂಕ್ತವಾಗಿ ಕಂಡಿತು. ಆದ್ದರಿಂದ ತಮ್ಮ ಪ್ರಣಾಳಿಕೆಯನ್ನು ( ಕಮ್ಯೂನಿಸ್ಟ್ ' ಎಂದು ಕರೆದರು. ಇಷ್ಟು ವಿನಃ ಬೇರೆ ಇನ್ನಾವ ಅರ್ಥ ದಲ್ಲ ಕಮ್ಯೂನಿಸ್ಟ್ ' ಎಂಬ ಶಬ್ದವನ್ನು ಪ್ರಯೋಗಿಸಿಲ್ಲ. ಕಮ್ಯೂನಿಸಂ ಎಂದರೆ ಸಮಾಜವಾದ ; ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ವಾದವನ್ನು ಸಹ ಸಮಾಜವಾದ' (ವೈಜ್ಞಾನಿಕ ಅಥವಾ ಆಧುನಿಕ) ಎಂದು ಕರೆದಿದ್ದಾರೆ. ಆದರೆ ಬಳಕೆಯಲ್ಲಿ (Usage) ಮಾಕ್ಸ್‌ ವಾದವನ್ನು, ಅದನ್ನು ಅನು ಸರಿಸಿದ ಕಾರ್ಮಿಕವರ್ಗದ ಚಳವಳಿಯನ್ನು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ರಚನೆಯಾದ ಕಾರ್ಮಿಕವರ್ಗದ ರಾಜಕೀಯ ಪಕ್ಷಗಳನ್ನು ಕಮ್ಯುನಿಸ್ಟ್ ' ಎಂದು ಕರೆಯುವುದು ವಾಡಿಕೆಗೆ ಬಂದಿದೆ. 3 ಮಾರ್ಕ್ಸ್-ಏಂಗೆಲ್ಸ್ ರು ತಾವು ಪ್ರತಿಪಾದಿಸಿದ ಹೊಸ ಸಮಾಜವಾದ ತತ್ತ್ವವನ್ನು ವೈಜ್ಞಾನಿಕ ಸಮಾಜವಾದವೆಂದು ಕರೆದರು (Scientific Socialism). ಇತು ಸಮಾಜವಾದಗಳನ್ನೆಲ್ಲಾ ಕಲ್ಪನಾ ಅಥವಾ ಬಂದಿತು, ಈ ತರುವಾಯ ಪ್ರಕೃತಿ ನಿಯಮ ಮತ್ತು ವಿವೇಕ ಬುದ್ದಿ ವಾಸ್ತವಿಕ ಸಮಾಜವನ್ನು ಅಳೆಯಲು ಅಳತೆಗೋಲಾದವು. ಆದರ್ಶ ಸಮಾಜ ಸಮಾಜ ಹಿತ ಚಿಂತಕರಿಗೆ ಚಳವಳಿಗಾರರಿಗೆ ಸ್ಫೂರ್ತಿದಾಯಕವಾಗಿ ನಿಂತಿತು. ಸ್ವಾಮ್ಯವಿಲ್ಲದ ಸಮಾನ ಅನುಭವವನ್ನು ವಾದಿಸುವವರೆಲ್ಲರೂ ಕಮ್ಯೂನಿಸಂ ಧೈಯವಾದಿಗಳು ಅಥವ ಸಮಾಜವಾದಿಗಳಾದರು. ಆದರೂ 1836 ರ ಹೊತ್ತಿಗೆ ಸಮಾಜವಾದಿಗಳಲ್ಲಿ ಒಂದು ಪಂಗಡ ಉಗ್ರ ಕ್ರಾಂತಿಕಾರ ಚಳುವಳಿಯ ಮೂಲಕ ಸಮಾಜ ವ್ಯವಸ್ಥೆ ಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರುವುದು ತಮ್ಮ ಕಾರ್ಯಕ್ರಮವೆಂದರು. ಇತರ ಸಮಾಜವಾದಿಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಸಮವಾದಿಗಳೆಂದು (ಕಮ್ಯೂನಿಸ್ಟ್) ಎಂದು ಕರೆದುಕೊಂಡರು,

  • 2. ಕಮ್ಯೂನಿಸಂ ಎಂಬ ಶಬ್ದವನ್ನು ಮಾರ್ಕ್ಸ್-ಏಂಗೆಲ್ಸ್ರು ಸಮಾಜ

ವಾದ ಆಗಮಿಸಿ, ಮೊದಲು ವ್ಯವಸ್ಥೆ ಹೊಂದುವ ಸಮಾಜವನ್ನು ' ಸಮಾಜವಾದೀ ಸಮಾಜ' (Socialist Society) ಎಂದೂ, ತರುವಾಯ ರೂಪಗೊಳ್ಳುವ ವ್ಯವಸ್ಥೆ 1 ಸಮನಾದೀ ಸಮಾಜ' (Communist Society) ಎಂದೂ ಇನ್ನೊಂದು ಅರ್ಥದಲ್ಲಿಯೂ ಸಹ ಪ್ರಯೋಗವಾಗಿದ್ದಾರೆ...