ಪುಟ:ಕಮ್ಯೂನಿಸಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದದ ಆಧಾರ ೫೩ ಉತ್ಪಾದನೆ ಮಾಡುವ ರೀತಿ ಮತ್ತು ಹೇಗೆ ಮಾಡುವಾಗ ಉಂಟಾಗುವ ಪರಸ್ಪರ ಸಂಬಂಧ ಇವು ಅವರ ಆರ್ಥಿಕ ವ್ಯವಸ್ಥೆಯಾಗಿದೆ, ಆದುದರಿಂದ ಸಮಾಜದ ನೈಜಸ್ವರೂಪವನ್ನು ತಿಳಿಯಬೇಕಾದರೆ ಅದರ ಆರ್ಥಿಕ ವ್ಯವಸ್ಥೆಯನ್ನು ಮೊದಲು ಪರೀಕ್ಷೆಮಾಡಬೇಕು. ಇಷ್ಟೇ ಅಲ್ಲ ಬದುಕಿಗೆ ಆರ್ಥಿಕ ವ್ಯವಸ್ಥೆ ಆಸರೆಯಾಗಿ ತಳಹದಿಯಾಗುತ್ತದೆ. ಇದರ ಸಂರಕ್ಷಣಾರ್ಥವಾಗಿ ಸಾಮಾಜಿಕ, ರಾಜಕೀಯ, ನ್ಯಾಯ ವ್ಯವಸ್ಥೆಗಳು ಮತ್ತು ಧರ್ಮ ಮೂಡುತ್ತವೆ. ಆರ್ಥಿಕ ವ್ಯವಸ್ಥೆ ಮೂಲವಾಗಿ ನಿಲ್ಲುತ್ತದೆ, ಮತ್ತು ತನ್ನ ಸಂರಕ್ಷಣೆಯನ್ನು ಕೇಳುತ್ತದೆ. ರಾಜಕೀಯ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಮತ್ತು ಧರ್ಮ ಇವುಗಳು ಅದಕ್ಕೆ ಸಂರಕ್ಷಣೆಯನ್ನು ಕೊಡುತ್ತವೆ. ಇದನ್ನು ಅನುಸರಿಸಿ “ಭಾವನೆ' ಗಳು ಮೂಡುತ್ತವೆ, ಭಾವನೆಗಳ ಕೆಲಸವೆಂದರೆ ಉಂಟಾಗಿರುವ ವ್ಯವಸ್ಥೆಗಳಿಗೆ ತಪುಷ್ಟಿಯನ್ನು (Theoretical Justification or explanation) ಕೊಡುವುದು. ಆದ್ದರಿಂದ ಒಂದು ಸಮಾಜದ ರಾಜಕೀಯ ವ್ಯವಸ್ಥೆ ನ್ಯಾಯ ವ್ಯವಸ್ಥೆ, ಧರ್ಮ ಮತ್ತು ಭಾವನೆ ಗಳು ಪ್ರತ್ಯೇಕವಾಗಿ ಜನಿಸಿಲ್ಲ. ಅವುಗಳ ಹುಟ್ಟು ಆರ್ಥಿಕ ವ್ಯವಸ್ಥೆಯಲ್ಲಿ ಅಡಗಿದೆ. ಕ್ರಮೇಣ ಈ ರಾಜಕೀಯ ವ್ಯವಸ್ಥೆ ನ್ಯಾಯ ವ್ಯವಸ್ಥೆ, ಧರ್ಮ ಮತ್ತು ಭಾವನೆಗಳು ತಮ್ಮ ಹುಟ್ಟಿನಿಂದ ಪ್ರತ್ಯೇಕಹೊಂದಿ ಸ್ವತಂತ್ರವಾಗು ವುವು. ಅನೇಕವೇಳೆ ಆರ್ಥಿಕ ವ್ಯವಸ್ಥೆಗೂ ಭಾವನೆಗಳಿಗೂ ಆರ್ಥಿಕ ಸಂಬಂಧ ಇಲ್ಲದ ಹಾಗೆ ಕಾಣುತ್ತದೆ. ಎಲ್ಲೋ ಬುದ್ಧಿಶಕ್ತಿಯಿಂದ ಜನಿಸಿದವುಗಳಾಗಿ ತೋರುತ್ತವೆ. ಕಾರಣ ಆರ್ಥಿಕ ಆಧಾರದ ಮೇಲೆ ಜನ್ಮ ತಾಳಿದ ಭಾವನೆ ಗಳು ಕ್ರಮೇಣ ಪ್ರತ್ಯೇಕ ಹೊಂದುತ್ತವೆ; ಭಾವನೆಗಳು ತಾತ್ವಿಕ ರೂಪ ವನ್ನು ತಾಳಿವೆ; ತಮ್ಮದೇ ಆದ ತಾತ್ವಿಕ ಬೆಳವಣಿಗೆಯನ್ನು ಹೊಂದುತ್ತವೆ ; ಬುದ್ದಿ ಶಕ್ತಿಯಿಂದ ಅವು ಬೃಹದ್ ಸ್ವರೂಪವನ್ನು ತಾಳುತ್ತವೆ. ಭಾವನೆ ಯಿಂದಲೇ ವಸ್ತು ಪ್ರಪಂಚ ನಿರ್ಮಿತವಾದಹಾಗೆ ತೋರುತ್ತವೆ. - ಮೂಲಭೂತವಾದ ಆರ್ಥಿಕ ವ್ಯವಸ್ಥೆ ಇತಿಹಾಸದ ರಂಗದಲ್ಲಿ ಆದಿ ಯಿಂದ ಇಲ್ಲಿಯವರೆಗೆ ಒಂದೇ ತರನಾಗಿಲ್ಲ. ಇದು ವಾಸ್ತವಾಂಶ. ಇದು ನಮ್ಮ ಜೀವನಕ್ಕೂ ಸಾವಿರ ವರ್ಷಗಳ ಹಿಂದೆ ನಮ್ಮ ಹಿರಿಯರು ನಡಸು ತಿದ್ದ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕಾಡಿನಲ್ಲಿ ಗೆಡ್ಡೆ