ಪುಟ:ಕಮ್ಯೂನಿಸಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P ೫೪ ವೈಜ್ಞಾನಿಕ ಸಮಾಜವಾದ - ಗೆಣಸುಗಳನ್ನು ತಿಂದು ಅಥವಾ ಬೇಟೆಯಾಡುವುದರ ಮೂಲಕ ನಡಸು ತಿದ್ದ ಜೀವನವೆಲ್ಲಿ ? ವ್ಯವಸಾಯ ಮತ್ತು ಕೈಗಾರಿಕೆ ಮೂಲಕ ಇಂದು ನಡೆಯುತ್ತಿರುವ ಜೀವನವೆಲ್ಲಿ ? ಆರ್ಥಿಕವಾಗಿ- ಜೀವನ ಕ್ರಮದಲ್ಲಿ ಉತ್ಪಾದನೆಮಾಡುವ ರೀತಿ ನೀತಿಗಳಲ್ಲಿ ಉಪಯೋಗಿಸುವ ಉಪಕರಣ ಗಳಲ್ಲಿ ಪದಾರ್ಥಗಳನ್ನು ಅದಲುಬದಲು ಮಾಡಿಕೊಳ್ಳುವುದರಲ್ಲಿ ಹಂಚಿಕೆ ಯಲ್ಲಿ ಉಗ್ರ ಬದಲಾವಣೆಗಳು ಕಾಣುತ್ತವೆ. ಈ ಆರ್ಥಿಕರಂಗದಲ್ಲಿ ಬದಲಾವಣೆ ಮಾತ್ರವಲ್ಲದೆ ನಮ್ಮ ಜೀವನದ ಪ್ರತಿಯೊಂದು ಅಂಗದಲ್ಲೂ ಬದಲಾವಣೆಗಳನ್ನು ಕಾಣುತ್ತೇವೆ. ನಿರಂಕುಶ ರಾಜಪ್ರಭುತ್ವಗಳೆಲ್ಲಿ ? ಗುಲಾಮತನವನ್ನು ಸಂರಕ್ಷಿಸುವ ಕಾನೂನುಗಳೆಲ್ಲಿ ? ಅವುಗಳಿಗೆ ಪುಷ್ಟಿ ಕೊಡುವ ರೀತಿಯಲ್ಲಿದ್ದ ಭಾವನೆಗಳೆಲ್ಲಿ ? ವಿಜ್ಞಾನ ನಮ್ಮ ಜೀವನದ ಪ್ರತಿಯೊಂದು ಪದರವನ್ನೂ ಹೊಕ್ಕು ಮಾರ್ಪಾಡುಮಾಡುತ್ತಿದೆ. ಪ್ರಪಂಚ ಭಾವನೆಯೇ ಬದಲಾವಣೆಯಾಗಿದೆ. ಪ್ರಕೃತಿಯ ಆಗುಹೋಗುಗಳನ್ನು ಬೇರೊಂದು ವಿಧದಲ್ಲಿ ವಿವರಿಸಲಾಗಿದೆ. ಇವಕ್ಕೆಲ್ಲಾ ಮಾನಸಿಕ ಪ್ರೇರಣೆ ಅಥವಾ ಬುದ್ಧಿಶಕ್ತಿಯ ಊಹೆ ಕಾರಣವಾಗಿದೆಯೇ ? ಆರ್ಥಿಕ ಬದಲಾವಣೆಗಳು, ಸಂಶೋಧನೆಗಳು ಮತ್ತು ಇತರ ಘಟನೆಗಳು ಕೆಲವು ಕಾಲಗಳಲ್ಲಿ ಮಾತ್ರ ಆಗಿರುವುದಕ್ಕೂ ಇನ್ನು ಇತರ ಕಾಲದಲ್ಲಿ ಆಗದೇ ಇರುವುದಕ್ಕೂ ಮಾನಸಿಕ ಅಥವಾ ದೈವ ಪ್ರೇರಣೆ ಯಿಂದಾಗಲೀ ಅಥವಾ ಬುದ್ದಿ ಶಕ್ತಿಯ ಊಹೆಯಿಂದಾಗಲೀ ಸಮಂಜಸ ವಾದ ಉತ್ತರ ಸಿಗುವುದಿಲ್ಲ. ಬುದ್ಧಿಯ ಊಹಾ ಶಕ್ತಿಯಿಂದ ಆಗುವು ದಾದರೆ ಆದಿಮಾನವನು ಈಗ ನಾವು ಗಳಿಸಿರುವ ಸಾಧನಗಳನ್ನೆಲ್ಲಾ ಐದು ಸಾವಿರ ವರ್ಷಗಳ ಹಿಂದೆಯೇ ಊಹೆಮಾಡಿ ನಿರ್ಮಿಸಬಹುದಾಗಿತ್ತು! ಊಹೆ ಯಿಂದ ಪ್ರೇರೇಪಣೆ ಪಡೆದು, ಇತಿಹಾಸದ ಉದ್ದಕ್ಕೂ ಉಂಟಾಗಿರುವ ಯುದ್ಧಗಳು, ಶೋಷಣೆ ಇತ್ಯಾದಿ ಎಲ್ಲವನ್ನೂ ನೀಗಿಸಿ, ಕಲ್ಯಾಣ ಸಮಾಜ ವನ್ನು ಎಂದೂ ನಿರ್ಮಿಸಬಹುದಾಗಿತ್ತು ! ಆದರೆ ಇತಿಹಾಸದ ಮುಂದೋಟ ಆ ರೀತಿ ಸಾಗಿಲ್ಲ. ಒಂದು ಕ್ರಮವರಿತು ಸಾಗಿದೆ. ಒಂದು ಘಟನೆ ಮತ್ತೊಂದು ಘಟನೆಗೆ ಪ್ರಚೋದನಕಾರಿಯಾಗಿದೆ. ಆದುದರಿಂದ ಆರ್ಥಿಕ ಮತ್ತು ಇತರ ಸನ್ನಿವೇಶಗಳಿಂದ ಬುದ್ದಿ ಬಲ ಬಂಧಿಸಲ್ಪಟ್ಟು, ಅನುಕೂಲ ಗಳು ಒದಗಿದಹಾಗೆ, ಪ್ರಚೋದನೆ ದೊರಕಿದಹಾಗೆ, ಆವಶ್ಯಕತೆ ಕಾಣಿಸಿ ಕೊಂಡಹಾಗೆ ಬುದ್ಧಿ ಶಕ್ತಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ.