ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

N ಶತಮಾನಕ್ಕೆ ಹಿಂದೆ] ಬಾಳಚಂದ್ರಕವಿಕಂದರ್ಪ


       ಶುಭಚಂದ್ರ ಸು 1200 

ಈತನು ಕಾರ್ತಿಕೇಯಾನುಪ್ರೇಕ್ಷೆಗೆ ಟೀಕೆಯನ್ನು ಬರೆದಿದ್ದಾನೆ. ಇವನು ಜೈನಕವಿ; ಡ್ರೈವಿದ್ಯವಿದ್ಯಾಧರ, ಷಡ್ಬಾ ಪಷಾಕವಿಚಕ್ರವರ್ತಿ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ಇವನ ಕಾಲವು ಸುಮಾರು 1200 ಆಗಿರಬಹುದು.

                         ------------
         ಬಾಳಚಂದ್ರಕವಿಕಂದರ್ವ 1 1204 

ಈ ಜೈನಕವಿ ಬಾಂಬೆಪ್ರೆಸಿಡೆನ್ಸಿಗೆ ಸೇರಿದ ಬೆಳಗಾಮಿನಲ್ಲಿ ಇದ್ದ : ಎರಡು ಶಿಲಾಶಾಸನಗಳನ್ನು ಬರೆದುದಾಗಿ ಆ ಶಾಸನಗಳ ಅಂತ್ಯದ ಲ್ಲಿರುವ ಈ ಭಾಗಗಳಿಂದ ತಿಳಿಯುತ್ತದೆ--

     ದೋಷವ್ಯತೀತಮರ್ಧವಿ | ಶೇಷಮಿದೆನೆ ಸೇಚ್ಡಿನೊಲ್ದು ಶಾಸನಮಂ ಪೀ ||
    ಯೂಷಸಮಸೂಕ್ತಿ ಚಾತು| ರ್ಭಾಷಾಕವಿಚಕ್ರವರ್ತಿ ಕವಿಕಂದಸ೯೦ ||

ಶ್ರೀಮನ್ಮಾಧವಚಂದ್ರತ್ರೈವಿದ್ಯಚಕ್ರವರ್ತಿವಾಕ್ಸುಧಾರಸನಾಭ್ಯುದಿತನಿತ್ಯಸಾ ಹಿತ್ಯ ವನಕಮಲಮರಾಳಂ ಬಾಳಚಂದ್ರದೇವಂ ಪೇಹ್ದ ಶಾಸನಂ

         ಪ್ರಹತಾರಿಬ್ರಜಕಾರ್ತವೀರ ಸಚಿವಂ ಶ್ರೀಬೀಚಿರಾಜಂ ಯಶೋ | 
    ಮಹಿತಂ ಪೇರುಮೆನಲ್ಕೆ ಶಾಸನಮ ರೊಸ್ಸೆಂ ಬಾಳಚಂದ್ರಂ ಗುಣಾ || 

ಗ್ರಹಿವಿದ್ವಜ್ಜನಸಮ್ಮ ತಸ್ಫು ಳಪದಾರ್ಧಾಳಂಕ್ರಿಯಾಸಂಕುಳಾ | ವಹಮಪ್ಪಂತಿರೆ ಪೇಳ್ದನಿಂತು ಕವಿಕಂದರ್ಪಂ ಬುಧಾಧೀಶ್ವರಂ || ಈ ಶಾಸನಗಳು 1204ರಲ್ಲಿ ಹುಟ್ಟಿದುವು. ಇವುಗಳಲ್ಲಿ ಸೌಂದತ್ತಿ ಯ ರಟ್ಟ ರಾಜರಲ್ಲಿ ಒಬ್ಬನಾದ ಕಾರ್ತವೀರ್(IV)ನ ಶ್ರೀಕರಣಾಗ್ರಗಣ್ಯ ಬೀಚಿರಾಜನು ಬೆಳಗಾಮಿನಲ್ಲಿ ಕಟ್ಟಿಸಿದ ರಟ್ಟ ಜಿನಾಲಯಕ್ಕೆ ಕಾರ್ತವೀರ್ಯನು ಇತರರೂ ದತ್ತಿಯನ್ನು ಬಿಟ್ಟಂತೆ ಹೇಳಿದೆ. ಈ ಶಾಸನಗಳಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ. -

                      ಜನಸಮಯ
ಶ್ರೀಜಿನಸಮಯನವಾಂಬುಧಿ | ರಾಜಿಸುತಿರ್ಕ್ಕಮಧನೋರ್ಜಿ ತಾಮೃತರತ್ನ | ಶ್ರೀಜನನಗೃಹಂ ಸತ್ವದ | ಯಾಜೀವನಮಪರಿಮಿತಗಭೀರಮಸಾರಂ || _I, Vol. I, 244 2, ಈಗ ಈ ಶಾಸನಗಳು ಬ್ರಿಟಿಷ್ ಮ್ಯೂಜಿಯಮಿನಲ್ಲಿ ಇವೆ E?!g aphtca Indica XIII, I5-36