ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಕರ್ಣಾಟಕ ಕವಿಚರಿತೆ [15 ನೆಯ ಪಂಚಪರಮೇಪಿಗಳ-ಎಂದರೆ ಅರ್ಹಂತರು, ನಿದ್ದರು, ಆಚಾರರು, ಉಪಾಧ್ಯಾಯರು, ಸಾಧುಗಳು ಇವರುಗಳ ಸ್ತುತಿರೂಪವಾದ ಗದ್ಯ ಗ್ರಂಥ, ಆದಿಯಲ್ಲಿ ದ್ರವ್ಯಗುಣಪರ ಯಂಗಳ | ನವ್ಯಗ್ರಕುಶಾಗ್ರಬುದ್ದಿಯಿಂ ಭಾವಿಸುವಂ | ಗವ್ಯವಹಿತನಿಜತತ್ವ೦ | ಶ್ರವ್ಯ ಮೆನಲ್ ಪಂಚಗುರುಪದಂ ಶ್ರಮಣೀಯಂ || : ಎಂಬ ಪದ್ಯವಿದೆ. ಅಂತ್ಯದಲ್ಲಿ ಈ ಪದ್ಯಗಳಿವೆ--- ಸದಸಂಚಕಮಕ್ಷಯಸಂ | ಸದಹೇತುಕಮೆಂದು ನಂಬಿ ಭಾವಿಸುವಂಗ | ಬ್ಲ್ಯುದಯಾದಿಕಮೇಂ ಗಹನಮೆ | ವಿದಿತಂ ಬಾಲೇಂದುಬುಧನಿರೂಪಿತವಿಧದಿ೦|| ಸಿದ್ದಾಂತವೇದ್ಯ ಭಯಚಂದ್ರಸದಾರವಿಂದೇ | ಆರಾಧ್ಯ ಪಂಚಗುರುಮೋಕ್ಷಪದ ಸ್ವರೂಪಂ | ಬಾಲೇಂದುನಾ ನಿಗದಿತಂ ಸುಜನೋತ್ರಮಾ ಯೇ | ತೇ ಭಾವಯಂತು ತರಸಾ ಸಮತಾಂ ಲಭಂತೇ || ನರಹರಿತೀರ್ಧ, 1281 ಈತನು ವಿಷ್ಣು ಸ್ತುತಿರೂಪವಾದ ಹಾಡುಗಳನ್ನು ಬರೆದಿದ್ದಾನೆ. ಇವನು ಮಾಧ್ವ ಕವಿ; ಮಧ್ವಗುರುವಿನಿಂದ ಮೂರನೆಯ ಪಟ್ಟ ದಸ್ವಾಮಿಯಾ ಗಿದ್ದನು. ಸನ್ಯಾಸಿಯಾಗುವುದಕ್ಕೆ ಮುಂದೆ ಗಂಜಾಂ ಪ್ರಾಂತದಲ್ಲಿ ಅಧಿಕಾರಿ ಯಾಗಿದ್ದನು. ಚಿಕಾಕೋಲಿನಲ್ಲಿ 1231, 1293 ರಲ್ಲಿ ಹುಟ್ಟಿದ ಈತನ ಶಿಲಾಶಾಸನಗಳು ದೊರೆಯುತ್ತವೆ, 1 ಈತನು 1333 ರಲ್ಲಿ ಗತಿಸಿದನೆಂದ ಹೇಳುತ್ತಾರೆ. ಈತನ ಹಾಡುಗಳಲ್ಲಿ ಒಂದನ್ನು ತೆಗೆದು ಬರೆಯುತ್ತೇವ ರಾಗ ಆನಂದಭೈರವಿ, ಅಟತಾಳ ಪಲ್ಲವಿ| ಇಂತು ಮರುಳಾದೆ || ಅನುಪಲ್ಲವಿ || ಇಂತು ಮರುಳಾಗಿ ಬಯಲಿಗೆ ಬತಿಲಿದೆ ರಕ್ಷಿಸಯ್ಯ ರಘು ಕುಲತಿಲಕ | ಮಾತಿನಲ್ಲಿ ಹರಿದಾಸತನ | ನೀತಿಯಲ್ಲಿ ಬಲುಪ್ರೌಢತನ | ಪ್ರೀತಿ ಧನದುರ್ವಿಷಯದಲ್ಲಿ ನಿ | ರ್ಭಿತಿ ದೈವಗುರುದ್ರೋಹದಲಿ ||111 - I Madras Epigraphical Repo1 ts to1 i896 and I900.