ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಧರಣೋಜ, 49 ಗರುವತನ ಹಿಂಗುವುದು ಧೈರದ| ಶರಧಿ ನೆಳೆ ಬತ್ತುವುದು ಕುಲ ಪೈ | ಸರಿಸುವುದು ಸಂದೇಹವಿಲ್ಲದಕರಸ ಕೇಳೆಂದ || ಧರಣೋಜ, 1424 ಈತನು ದಾವಣಗೆರೆಯ 29 ನೆಯ ಶಾಸನವನ್ನು ಬರೆದಂತೆ ಆ ಶಾ ಸನದ ಕೊನೆಯಲ್ಲಿರುವ | ಹರಿಹರದೇವರ ವರದಿಂ | ವರಗದ್ಯಂ ಪದ್ಯ.. ವಂ ಶಾಸನದೊಳ್ | ಬರೆದಂ ಮನುಕುಲರತ್ನಾ | ಕರಚಂದ್ರಂ ಮಾಚಿದೇವಸುತಧರಣೋಜಂ || ಎಂಬ ಪದ್ಯದಿಂದ ತಿಳಿಯುತ್ತದೆ. " ಹರಿಹರದೇವರ ವರದಿಂ ” ಎಂಬು ದರಿಂದ ಇವನು ಕವಿತ್ವವನ್ನು ಮಾಡಿರಬಹುದು ಎಂದು ತೋರುತ್ತದೆ. ಈ ಶಾಸನವು 1424 ರಲ್ಲಿ ಬರೆದುದು.ಇದರಲ್ಲಿ ವಿಜಯನಗರದ ದೊರೆ ದೇವರಾಯನ (1419-1446) ಆಳಿಕೆಯಲ್ಲಿ ಬುಳ್ಳನೃಪನು ಹರಿದ್ರಾನದಿಗೆ ಕಟ್ಟೆಯನ್ನು ಹಾಕಿ ಕಾಲುವೆಯನ್ನು ತೆಗೆದಂತೆ ಹೇಳಿದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಹರಿಹರ ಸ್ಮರಕರಿವರಮುಖಸಪಿತನಂ | ಮುರಪುರಹರನಂ ನಗೇಂದುಧರನಂ ವಿಲಸ | ದ್ವರದಾಭಯಕರನಂ ಹರಿ | ಹರನಂ ಭಜಿಸೆಂ ಕೃಪಾಸುಧಾಸಾಗರನಂ || ಚಾಮರಾಜಸ್ತುತಿ ಪಿರಿದುಂ ಸದ್ಧರ್ಮಮೇ ಮೂರ್ತಿಯನನುಕರಿಸಿತ್ತೋ ಘನಜ್ಞಾನಮೇ ಭಾ | ಸುರಗಾತ್ರಂಬೆತ್ತುದೋ ಸತ್ಕಲೆಗಳೆ ಪುರುಷಾಕಾರಮಂ ತಾಳ್ದುವೋ ಭೂ ||

ಸುರರುತ್ಸಹಂ ಶರೀರಂಬಡೆದುದೊ ದಿಟಮೆಂಬಂದಿಂ ರಾಜಿಪಂ ಸಂ | 

ಗರಧೀರಂ ಚಾಮರಾಜಂ ಕೃತಸುಕೃತಸಮಾಜಂ ಧರಾಕಲ್ಪಭೂಜಂ ||

ಗಂಡರಗೂಳಿವರಾನ್ವಯ | ಮಂಡನಕಲಿಚಾಮನೃಪತಿ ನಿಜಕೀರ್ತಿ ತರಂ | 

ಗೊಂಡಿಡಿದಿರೆ ಕರ್ಪೂರಕ | ರಂಡಕಮೆನೆ ಚೆಲ್ವುವೆತ್ತು ದಬ್ಬಭವಾಂಡಂ || - ಬುಳ್ಳ ನೃವಸ್ತುತಿ. ವೀರಭಗೀರಧಂ ಗಗನಗಂಗೆಯನುರ್ವಿಗೆ ತಂದನಂತದೇಂ| ಪೌರುಷಮಲ್ತು ಕೇಳ್ ಗಗನದಿಂ ಕೆರಿಗಿರ್ದು ಹರಿದ್ರೆಯೆತ್ತಲುಂ || ಬಾರದಿರಲ್ಕೆ ಕಟ್ಟಿ ಸಿಡಿದಟ್ಟಿ ಹರೀಶಪುರಕ್ಕೆ ಕೊಂಡು ಬಂ ||