ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ. [15 ನೆಯ ದೀರಸೆಯೊಳ್ ಪೆಸವ್ವಳಡೆದ ಬುಳ್ಳ ಚಮೂಪನಿದೇಂ ಸಭಾಗ್ಯನೋ || ಓರಂತೆ ತೀವಿ ಬಹಕೆ ೩ರಿಂ ಪರಿಕಾಲ್ ವಿರಾಜೆಕುಂ ಬುಳ್ಳನೃಪಂ | ಧಾರಿಣಿಗೆ ರಚಿಸಿದಾ ವಿ | ಸ್ವಾರದ ಸೀಮಂತದಗ್ರಸಿಂದೂರದವೋಲ್ |! ಮಹಾಲಿಂಗದೇವ ಸು 1425 ಈತನು ಏಕೋತ್ತರಶತಸ್ಥಲ, ಪ್ರಭುದೇವರ ಪಟ್ಟಅಜ್ಞಾನತಾ ರಿತ್ರವಚನದ ಟೀಕೆ ಇವುಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ. ಇವನ “ಅನಾದಿಗುರುಕುಲದನ್ವಯವು” ಹೀಗೆ ಹೇಳಿದೆ. (1) ಸೋಮಶಂಭುದೇಶಿಕ, (2) ಸಕಲಾಗಮಾಚಾರ್, (3) ಶಿವಲೆಂಕಮಂಚ ”, (4) ಉರಿಲಿಂಗದೇವ, 1 (5) ಉರಿಲಿಂಗಪೆದ್ದಣ್ಣ, (6) ಸರ್ವೆಶ್ವರದೇವ, (7) ವಿಶ್ವೇಶ್ವರಪೆದ್ದಣ್ಣ, (8) ಸಂಹಿತೆಯ ಕಾಳಿದಾಸಭಟ್ಟ, (9) ಸದಾಶಿವದೇವ, (10) ಪ್ರಣಮಿದೇವ, (1) ಈಶಾನದೇವ, (12) ಮನಿವಾಸದೇವ, (13) ಚೆನ್ನ ಸೋಮೇಶ್ವರ, (14) ಬಾಗೆಬಂಕನಾಧ, (15) ಶಂಕರದೇವ, (16) ಗಂಗಾ ಧರದೇವ, (17) ಬಂಕನಾಧದೇವ, (18) ಪುರಾಣದ ಮಾಯಿದೇವ, (19) ಬಂ ಕಯ್ಯ, (20) ಮಹಾಲಿಂಗದೇವ (ಕವಿ), ಇವನ ಶಿಷ್ಯ (21) ಕುಮಾರಬಂಕನಾಧ, ಅವನ ಕರಜಾತ ಜಕ್ಕಣಾರ್. ಈ ಜಕ್ಕಣಾರನು ಬ್ರೌಢದೇವರಾಯನಲ್ಲಿ (1419-1446) ದಂಡೇ ಕನಾಗಿದ್ದಂತೆ ತಿಳಿಯುತ್ತದೆ. ಇವನಿಗೋಸ್ಕರ ಮಹಾಲಿಂಗದೇವನ ಮೇಲೆ ಹೇಳಿದ ಗ್ರಂಥಗಳನ್ನು ಬರೆದುದಾಗಿ ತಿಳಿವುದರಿಂದ ಈತನ ಕಾಲವು ಸುಮಾರು 1425 ಆಗಬಹುದು, ಇವನಿಗೆ « ಪುಲಿಗೆರೆಯ ಪುರವರಾಧೀ ಶ್ವರ, ಅಪೂರ್ವಸ್ವಯಂಭುಪ್ರಸನ್ನಚೆನ್ನದಕ್ಷಿಣಶ್ರೀಸೋಮನಾಥದೇವರ ದಿವ್ಯಶ್ರೀ ಪಾದಪದ್ಮಾರಾಧಕ, ತ್ರಿಕಾಂಡನಿಸ್ಥ, ಪರಮವೀರಶೈವಾಗಮಾ ಚಾರ” ಎಂಬ ವಿಶೇಷಣಗಳು ಹೇಳಿವೆ. ಇವನಿಗೆ ವಾರಾಣಸೀಂದ್ರ ಎಂಬ ಹೆಸರೂ ಇದ್ದಂತೆ ತೋರುತ್ತದೆ. - 1 ಒಂದು ಪ್ರತಿಯಲ್ಲಿ ಮೊದಲು ನಾಲ್ಕು ಹೆಸರುಗಳು ಹೀಗೆ ಕೊಟ್ಟಿವೆ:-(1) ದರ ಕಿವ, (2) ನಂದಿಕೇಶ್ವರ, (3) ದುರ್ವಾಸದೇವ, (4) ದ್ವಿತೀಯಸ್ವಯಂಭು ತ್ರಿಣೇತ್ರದೆ ವ್ಯ 6 ನೆಯದು ವಿಶ್ವೇಶ್ವರಪೆದ್ದಣ್ಣ; 7 ನೆಯದು ಸದಾಶಿವದೇವ