ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಮಗ್ಗೆಯ ಮಾಯಿದೇವ ಸುಮಾರು (1430) ಆಗಬಹುದು, ಶಾಂತಲಿಂಗದೇಶಿಕನು (1672) ತನ್ನ ಭೈರವೇಶ್ವರಕಾವ್ಯದ ಕಥಾಸೂತ್ರರತ್ನಾಕರದಲ್ಲಿ ಈಕವಿಯವಿಷಯವಾಗಿ ಹೀಗೆ ಬರೆದಿದ್ದಾನೆ... ಮಗ್ಗೆ ಯೆಂಬ ಪುರದಲ್ಲಿ ಮಾಯಿದೇವಾಚಾತ್ಯ ಪ್ರಭುಗಳು ವಿಶೇಷಾರ್ಧವನು ಭಾವಸೂತ್ರವಂ ಕಲ್ಪಿಸಿ ಪ್ರಭುಗೀತಿ ಷಟ್ಟಿದರೂಪವಾದ ಏಕೋತ್ತರಶತಸ್ಥಲವಂ ನಿರೂಪಿಸಿ ಭಕ್ತಿ ಜ್ಞಾನವೈರಾಗ್ಯಸ್ವರೂಪನಾದ ಶತಕತ್ರಯಪ್ರಬಂಧಮಂ ಪೇ ಷಟೈಲಗದ್ಯಮಂ ನಿರೂಪಿಸಿ ಕುಮತವಿಭೇದಿ ಷಟೂಲಬ್ರಹ್ಮವಾದಿಯೆಂದು ಹೊಗ8 ಸಿಕೊಳ್ಳುತ್ತಿರಲು ವೆಂಕಟಪತಿರಾಯನಳಿಯನು ಶ್ರೀರಂಗರಾಯನು ನಾರಸಿಂಹಪುರಕ್ಕೆ ವಾದಕ್ಕೆ ಕರಸಲು ಬಂದು ಜಯಸ್ತಂಭವನು ನೆಟ್ಟು ಹೋದರು ಏಪುರದ ಸೋಮ ನಾಧನೆಂಬ ತಮ್ಮಿಷ್ಟಲಿಂಗದಲ್ಲಿ ಐಕ್ಯವಾದರು ಪ್ರೌಢದೇವರಾಯನಿಗೂ ವೆಂಕಟಪತಿರಾಯನಿಗೂ ಸುಮಾರು 200 ವರ್ಷ ಅಂತರವಿರುವುದರಿಂದ ಶಾಂತಲಿಂಗದೇಶಿಕನು ಹೇಳಿರುವ ದೊರೆಯ ಹೆಸರು ತಪ್ಪಾಗಿರ ಬೇಕು. ಸಿದ್ಧ ನಂಜೇಶನ (ಸು, 1650) ತನ್ನ ಗುರುರಾಜಚಾರಿತ್ರದಲ್ಲಿ..-ಮಗ್ಗೆ ಯಮಾಯಿದೇವಂ ಲಿಂಗವಂತರಿಗೆ ನರಕವಿಲ್ಲೆಂದು ವಿದ್ಯಾನಗರದಲ್ಲಿ ನಟಲಿಲ್ಲದ ಜಯ ಸ್ತಂಭವಂ ನಿಲಿಸಿದಂ -ಎಂದು ಹೇಳಿದ್ದಾನೆ. ಇದೇವಿಷಯವನ್ನು ವಿರಕ್ತತೋಂಟ ದಾರನೂ (ಸು. 1560) ತನ್ನ ಪಾಲ್ಕುರಿಕೆಸೋಮೇಶ್ವರಪುರಾಣದಲ್ಲಿ ಹೇಳಿದ್ದಾನೆ. ವೀರಶೈವಗ್ರಂಥಗಳಲ್ಲಿ ಈ ಕವಿಯನ್ನು ಪ್ರಭು, ವಿಭು ಎಂದು ವಿಶೇ ಸಿನಿ ಹೇಳಿರುವುದರಿಂದ ಈತನು ದೊಡ್ಡ ಪದವಿಯಲ್ಲಿದ್ದಂತೆ ತೋರುತ್ತದೆ. ಇವನ ಗ್ರಂಥಗಳಲ್ಲಿ ಶತಕತ್ರಯ ಇದು ಶಿವಾಧವಕತಕ, ಶಿವಾವಲ್ಲಭಶತಕ, ಐಪುರೀಶ್ವರಶತಕ ಎಂಬ ಮೂರು ಶತಕಗಳನ್ನು ಒಳಗೊಂಡಿದೆ, ಈ ಶತಕಗಳು ವೃತ್ತದಲ್ಲಿ ಬರೆ ದಿವೆ; ವೀರಶೈವಸಿದ್ಧಾಂತಕ್ಕೆ ಅನುಸಾರವಾಗಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಬೋಧಿಸುತ್ತವೆ. ಇವಕ್ಕೆ ವಿರಕ್ತತೊಂಟದಾನ (ಸು, 1560) ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ.