ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ಣಾಟಕ ಕವಿಚರಿತೆ.[15 ನೆಯ ಈ ಶತಕಗಳಲ್ಲಿ

                   ಶಿವಾಧವಶತಕ.
   ಇದರಲ್ಲಿ 101 ವೃತ್ತಗಳಿವೆ; ಪ್ರತಿಪದ್ಯವೂ ಶಿವಾಧವ ಎಂದು ಮುಗಿ ಯುತ್ತದೆ ಆರಂಭದಲ್ಲಿ ಬಸವ, ಚೆನ್ನಬಸವ, ಪ್ರಭುದೇವ ಇವರುಗಳ ಸ್ತುತಿ ಇದೆ. ಈ ಗ್ರಂಥವನ್ನು “ಷಟ್ಸಲಾತ್ಮಕವಿಶಿಷ್ಟಮಹತ್ತರಭಕ್ತಿ ಯೋಗವಿದ್ಯಾಪರಮಾರ್ಥತತ್ವ ಮಯಮಪ್ಪ ಲಸಚ್ಛತಕಪ್ರಬಂಧಂ"ಎಂದ ಕವಿ ವಿಶೇಷಿಸಿ ಹೇಳಿದ್ದಾನೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ...
 ನೋಡದಮುನ್ನ ದರ್ಪಣವ ದರ್ಪಣಭಾವಮದುಂಟು ವಿಭ್ರಮಂ |
 ಗೂಡಿ ವಿರಾಜಿಸುತ್ತಭಿಮುಖಾಸ್ಪದವಾದ ನಿಜಸ್ವರೂಪಮಂ || 
 ನೋಡಿದನಂತರಂ ಮರಳಿ ದರ್ಪಣಭಾವಮದುಂಟೆ ತತ್ವಮಂ | 
 ನೋಡದಮುನ್ನ ಮಾಯೆ ಬಲಕೆಲ್ಲಿಯ ಮಾಯೆ ಬಿಡಾ ಶಿವಾಧವಾ||
 ಲಿಂಗಮೆ ತತ್ಪದಂ ತ್ವಮಿತಿಶಬ್ದ ಪದಂ ವಿಮಳಾಂಗಮಾದ್ವಿಧಾ | 
 ಸಂಗಮಸಿಪ್ರಮಾಣಪದವೆಂದು ವಿವೇಕಪರಾನುಭೂತಿಯಿಂ ||
 ದಂ ಗುರು ಪೇಟ್ದಿ ತತ್ವಮಸಿವಾಕ್ಯಪದಾರ್ಧಮನಿಂತು ಯೋಚಿಪಾ |
 ತಂಗುದಾಗಮಂ ಬಯಲ ಮಾತಿನ ಮಾಲೆ ಕಣಾ ಶಿವಾಧವಾ || 
 ಸ್ಪಟಿಕಮಣಿ ಸ್ವಭಾವವಿಮಲಂ ಪರಮಾರ್ಧದಿನೀಕ್ಷಿಸಲ್ಲಿ ಸಂ | 
 ಘಟಿಸಿದುಪಾಧಿಯಿಂ ಮಲಿನವಾಸನೆಯಾದೊಡೆ ದೋಷಮೇಂ ಪರಿ | 
 ಸ್ಪುಟತರಚಿತ್ರಕಾಶಘನಮೂರ್ತಿಯೆನಿಪ್ಪ ಶಿವಾತ್ಮಯೋಗಿಯಂ | 
 ಪಟುಒಹಿರಾವೃತಪ್ರಚುರಸಂಶ್ರುತಿ ಪೊರ್ದಿದೊಡೇಂ ಶಿವಾಧವಾ ||
                 ಶಿವಾವಲ್ಲಭಶತಕ
 ಇದರಲ್ಲಿ 103 ವೃತ್ತಗಳಿವೆ; ಪ್ರತಿಪದ್ಯವೂ ಶಿವಾವಲ್ಲಭ ಎಂದ ಮುಗಿಯುತ್ತದೆ. ಆರಂಭದಲ್ಲಿ ಐಪುರದ ಸೋಮೇಶ್ವರದೇವರ ಸ್ತುತಿಯೂ, ಬಸವ, ಚೆನ್ನಬಸವ, ಪ್ರಭುದೇವ ಇವರುಗಳ ಸ್ತುತಿಯೂ ಇವೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...
 ಮಲಮೂತ್ರಕ್ರಿಮಿಮಾಂಸಶೋಣಿತಮಯಾಪೂತಾಂಗಮಂ ಪೂತನಿ | 
 ರ್ಮಲತೀರ್ಥೋದಕದೊಳ್ ಮುಯಿಂಗಿಸಿ ವ್ಯಧಾ ತತ್ತಿಚರ್ಧಮಂ ದಷ್ಟದು||