ಈ ಪುಟವನ್ನು ಪರಿಶೀಲಿಸಲಾಗಿದೆ
ಕರ್ಣಾಟಕ ಕವಿಚರಿತೆ.[15 ನೆಯ ಈ ಶತಕಗಳಲ್ಲಿ
ಶಿವಾಧವಶತಕ. ಇದರಲ್ಲಿ 101 ವೃತ್ತಗಳಿವೆ; ಪ್ರತಿಪದ್ಯವೂ ಶಿವಾಧವ ಎಂದು ಮುಗಿ ಯುತ್ತದೆ ಆರಂಭದಲ್ಲಿ ಬಸವ, ಚೆನ್ನಬಸವ, ಪ್ರಭುದೇವ ಇವರುಗಳ ಸ್ತುತಿ ಇದೆ. ಈ ಗ್ರಂಥವನ್ನು “ಷಟ್ಸಲಾತ್ಮಕವಿಶಿಷ್ಟಮಹತ್ತರಭಕ್ತಿ ಯೋಗವಿದ್ಯಾಪರಮಾರ್ಥತತ್ವ ಮಯಮಪ್ಪ ಲಸಚ್ಛತಕಪ್ರಬಂಧಂ"ಎಂದ ಕವಿ ವಿಶೇಷಿಸಿ ಹೇಳಿದ್ದಾನೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ... ನೋಡದಮುನ್ನ ದರ್ಪಣವ ದರ್ಪಣಭಾವಮದುಂಟು ವಿಭ್ರಮಂ | ಗೂಡಿ ವಿರಾಜಿಸುತ್ತಭಿಮುಖಾಸ್ಪದವಾದ ನಿಜಸ್ವರೂಪಮಂ || ನೋಡಿದನಂತರಂ ಮರಳಿ ದರ್ಪಣಭಾವಮದುಂಟೆ ತತ್ವಮಂ | ನೋಡದಮುನ್ನ ಮಾಯೆ ಬಲಕೆಲ್ಲಿಯ ಮಾಯೆ ಬಿಡಾ ಶಿವಾಧವಾ|| ಲಿಂಗಮೆ ತತ್ಪದಂ ತ್ವಮಿತಿಶಬ್ದ ಪದಂ ವಿಮಳಾಂಗಮಾದ್ವಿಧಾ | ಸಂಗಮಸಿಪ್ರಮಾಣಪದವೆಂದು ವಿವೇಕಪರಾನುಭೂತಿಯಿಂ || ದಂ ಗುರು ಪೇಟ್ದಿ ತತ್ವಮಸಿವಾಕ್ಯಪದಾರ್ಧಮನಿಂತು ಯೋಚಿಪಾ | ತಂಗುದಾಗಮಂ ಬಯಲ ಮಾತಿನ ಮಾಲೆ ಕಣಾ ಶಿವಾಧವಾ || ಸ್ಪಟಿಕಮಣಿ ಸ್ವಭಾವವಿಮಲಂ ಪರಮಾರ್ಧದಿನೀಕ್ಷಿಸಲ್ಲಿ ಸಂ | ಘಟಿಸಿದುಪಾಧಿಯಿಂ ಮಲಿನವಾಸನೆಯಾದೊಡೆ ದೋಷಮೇಂ ಪರಿ | ಸ್ಪುಟತರಚಿತ್ರಕಾಶಘನಮೂರ್ತಿಯೆನಿಪ್ಪ ಶಿವಾತ್ಮಯೋಗಿಯಂ | ಪಟುಒಹಿರಾವೃತಪ್ರಚುರಸಂಶ್ರುತಿ ಪೊರ್ದಿದೊಡೇಂ ಶಿವಾಧವಾ ||
ಶಿವಾವಲ್ಲಭಶತಕ ಇದರಲ್ಲಿ 103 ವೃತ್ತಗಳಿವೆ; ಪ್ರತಿಪದ್ಯವೂ ಶಿವಾವಲ್ಲಭ ಎಂದ ಮುಗಿಯುತ್ತದೆ. ಆರಂಭದಲ್ಲಿ ಐಪುರದ ಸೋಮೇಶ್ವರದೇವರ ಸ್ತುತಿಯೂ, ಬಸವ, ಚೆನ್ನಬಸವ, ಪ್ರಭುದೇವ ಇವರುಗಳ ಸ್ತುತಿಯೂ ಇವೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ... ಮಲಮೂತ್ರಕ್ರಿಮಿಮಾಂಸಶೋಣಿತಮಯಾಪೂತಾಂಗಮಂ ಪೂತನಿ | ರ್ಮಲತೀರ್ಥೋದಕದೊಳ್ ಮುಯಿಂಗಿಸಿ ವ್ಯಧಾ ತತ್ತಿಚರ್ಧಮಂ ದಷ್ಟದು||