ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಕರ್ಣಾಟಕ ಕವಿಚರಿತ. [35ನೆಯ ಶ್ರೀಧರದೇವ, ಸು. 1500. ಈತನು ವೈದ್ಯಾಮೃತವನ್ನು ಬರೆದಿದ್ದಾನೆ. ಇವನು ಜೈನಕವಿ; ಜಗದೇಕಮಹಾಮಂತ್ರವಾದಿ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿ ಪ್ಲಾನೆ, ಮುನಿಚಂದ್ರದೇವನ ಇಚ್ಛಾನುಸಾರವಾಗಿ ಈ ಗ್ರಂಥವನ್ನು ರಚಿದಂತ ತಿಳಿಯುತ್ತದೆ. ಕವಿಯ ವಿಷಯವಾಗಿ ಈ ಗ್ರಂಥದಿಂದ ಇನ್ನೇನೂ ತಿಳಿವುದಿಲ್ಲ ಇವನು ಸುಮಾರು 1500 ರಲ್ಲಿ ಇದ್ದಿರಬಹು ದೆಂದು ತೋರುತ್ತದೆ. ಇವನ ಗ್ರಂಥ ವೈದ್ಯಾಮೃತ. ಇದು ಚಂಪೂರೂಪವಾಗಿದೆ; ಗದ್ಯಭಾಗವೇ ಹೆಚ್ಚು, ಅಲ್ಲಲ್ಲಿ ಒಂದೊಂದು ಕಂದವೂ ಇದೆ , 24 ಅಧಿಕಾರಗಳಾಗಿ ಭಾಗಿಸಲ್ಪಟ್ಟರು ವಂತೆ ತೋರುತ್ತದೆ. ಹಲವುಕಡೆ ಚಿಕಿತ್ಸಾ ವಿಧಾನದಲ್ಲಿ ಮಂತ್ರಗಳೂ ಹೇಳಿವೆ. ಗ್ರಂಥಾದಿಯಲ್ಲಿ ಈ ಪದ್ಯವಿದೆ ಶ್ರೀಧರದೇವಂ ಕರುಣದಿ | ಸೀಧರೆಯೊಳ ಮಾನಿಸರ್ಗ ಸುಖಮುಪ್ಪಿನೆಗಂ ! ವ್ಯಾಧಿಹರಮಪ್ಪ ತೆಅನಂ | ಸಾದಿಸಿ ಪೇಟಪನಿದೊಂದು ವೈದ್ಯಾಮೃತಮಂ || ಕೆಲವು ಅಧಿಕರಣಗಳ ಕೊನೆಯಲ್ಲಿ ಈ ಗದ್ಯವಿದೆ ಇದು ಜಗದೇಕಮಹಾಮಂತ್ರವಾದಿ ಶ್ರೀಧರದೇವವಿರಚಿತಮಪ್ಪ ವೈದ್ರಾ ಮೃತದೊಳ್. ಈ ಗ್ರಂಥದಿಂದ ಸ್ವಲ್ಪ ಗದ್ಯಭಾಗವನ್ನು ಉದ್ಧರಿಸಿ ಬರೆಯುತ್ತೇವೆ: ಪಂಚಗುಲ್ಕ ಅತಿಚಾರ, ಸೂರಣ, ಮಂಗುರವಳ್ಳಿ, ಚಿತ್ರಮೂಲ, ಕುಸ್ತುಂಬರಿ ಇನಿತುಮಂ ಅಳೆಯ ಲಾಗಲಿ ಅಂಬಿಲದಲಾಗಲಿ ಅಷ್ಟಾವಶೇಷಂಮಾಡಿ ಕೊಳಲೊಡಂ ಪಂಚಗುಲ್ಕ ಅತಿಚಾರಂ ಕೆಡುಗು ಮೂಲವ್ಯಾಧಿ. ವಿಷಮವಾದ ಕಠಿನಾಸನದಿಂದಂ ಮಲನಿರೋಧದಿಂದಂ ಮಂದಾಗ್ನಿ ಯಮೇಲೆ ಭೋಜನವ ಮಾಡುವುದರಿಂದಂ ಮೂಲವ್ಯಾಧಿ ಪುಟ್ಟು ಗುಂ, ಅದು ಆಯಿಪ್ರಕಾರ ಮಕ್ಕು: ಇದೆಸೆಯ ರಕ್ತಂ ಅಪಾನಕ್ಕಿಂದು ಬದ್ಧವಾಗಿ ಸ ... ಅಂತರ್ವಳಯಮೆಂ ಬೆರಡುಪ್ರಕಾರಮಕ್ಕು.ರಕ್ತ ವೊಡೆಯದೆ ದೇಹದೊಳಗೆ ಗಂಟಾಗಿ ಅಂತರ್ವಳಯಮಕ್ಕು