ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

168 ಕರ್ನಾಟಕ ಕವಿಚರಿತೆ [15ನೆಯ

ರಬಹುದೋ ಏನೋ ತಿಳಿಯದು. ಇವುಗಳಿಂದ ಒಂದೆರಡು ಪದ್ಯಗಳನ್ನು
ತಗೆದು ಬರೆಯುತ್ತೇವೆ_
                          ಉಮಾಸ್ತೋತ್ರಷಟ್ಟದ (ಪದ್ಯ109)
   ಕುಳಿರ್ವೆಟ್ಟೆವಯನ ಕುವರಿಯನೈಮೊಗ|ನೊಲವೆನಿಸ೦ಬುಜಕೆಳಗುವ ಬಮರಿಯ| 
   ನಲರ್ಗಣ್ಣಂ ಪೂಜಿಪ ಚರಣದ ರವಿಶತಕಿರಣದ ಸೊಂಪಂ || 
   ಪಳುವೊಡಲಬಲೆಯನನುಪಮವಿಭವೆಯ | ಬಲವಂದಭಿನಮಿಪೆಂ ಬಗೆಯೊಳು ನೆಲೆ|
   ಗೊಳೆ ಮಾಹೇಶ್ವರಿಯನು ಶಂಕರಿಯನು ಶಿವತತ್ವದ ಸಿರಿಯ || 
   ಕೆ೦ಬಾಯ್ದೆರೆಯ ಕೆಂಕಮಂ ಕಣ್ಣಬೆಳರ್ವಣ್ಣ | ಮಂ ಬವರಿದಲೆಯ ಕಪ೯೦
                                                ಶಂಕರನ ಜಡೆದು | 
   ರು೦ಬಿಂಗೆ ತನುಲತೆಗೆ ಕಂಬುಕಂಧರಕೆ ರಾಗಂಬಡೆದು ಬಿಡದೆ ಕಡಿನಾ || 
   ಇಂಬಿನಿಂದೀವಂತೆಳಸುವಗಜೆ ಸಲಹುಗನಿ|ಶಂ ಬೆಂಬಿಡದೆ ಗಿರೀಶಾಂಬಕಾಂಬುಜಕೆ ರೋ 
   ಲಂಬೆ ಯುಗಸಪ್ತ ಜಗದಂಬೆ ತತಸದ್ಗುಣಕದಂಬೆ ಕರುಣಾವಲಂಬೆ ||
                         ಅಷ್ಟಾವರಣಸ್ತೋತ್ರಷಟ್ಟದ (ಪದ್ಯ 113) 
   ಶಿವಗೆ ನೆಲ ಜಲ ಮರುತಗಗನ ಶಿಖಿ ಶಶಿಯಾತ್ಮ | ರವಿಯೆಂಬಿವೆಂಟಂಗವಹುವು
                                                     ಭಕ್ತಂಗೆ ಗುರು | 
   ಭವವಿಮೋಚನಲಿಂಗ ಚರ ಭೂತಿ ರುದ್ರಾಕ್ಷಿ ಶಿವಮಂತ್ರ ಪಾದೋದಕ ||
   ತವೆ ಸುಪ್ರಸಾದವಪ್ಪಾವರಣವಷ್ಟಾಂಗ | ವಿವರ೦ ಪ್ರಪಂಚಮಂ ಪೆರ್ಚಿಸುವ
                                                     ನಾಶಿವಂ | 
   ಶಿವನ ಭಕ್ತಂ ಪ್ರಪಂಚಾವಹನಹಂ ಭಕ್ತನಧಿಕಂ ಮಹೇಶನಿಂದ ||
                         ನೀಲಕಂಠಾರಾಧ್ಯ.ಸು. 1500
            ಈತನು ವರವಾದಿಗಜಾಂಕುಶತಾರಾವಳಿಯನ್ನು ಬರೆದಿದ್ದಾನೆ. ಇ
       ವನು ವೀರಶೈವಕವಿ. ಗ್ರಂಥಾಂತ್ಯದಲ್ಲಿರುವ ಇದು ಸಮಸ್ತಹರಿಸುರವಿಸರವಿ 
       ರಾಜನ್ಮಸ್ತಕನ್ಯಸ್ತನೂತ್ನರತ್ನಗಭಸ್ತಿ ವಿಸೃತಸರಃಪದ್ಮಾಯಮಾನಪನ್ನಗಜಾವಲ್ಲಭಪಾದ 
       ಪಂಕಜಲಸದ್ರೊಲಂಬನಪ್ಪ ಹರಗುರುಚರಚರಣಸೇವಾಧುರಂಧರನಪ್ಪ ಪರಮತವೇ 
       ಶ್ಯಾಭುಜಂಗಬಿರುದಾಂಕನಾದ ಸತ್ಯವಿನೀಲಕಂರಾರಾಧ್ಯದೇವ ಎಂಬ ಗದ್ಯಭಾಗ 
       ದಿಂದ ಇವನಿಗೆ ಪರಮತವೇಶ್ಯಾಭುಜಂಗ ಎಂಬ ಬಿರುದಿದ್ದಂತೆ ತಿಳಿಯು
       ತ್ತದೆ. ಇವನ ಕಾಲವು ಸುಮಾರು 1500 ಆಗಿರಬಹುದೆಂದು ತೋರುತ್ತದೆ.