ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ಗುಮ್ಮಟಾರ್ಯ 169

       ಇವನ ಗ್ರಂಥ
                 ಸರವಾದಿಗಜಾಂಕುಶತಾರಾವಳಿ
       ಈ ಗದ್ಯಗ್ರ೦ಥವನ್ನು ಸಕಲವೇದಲವೇದಶಾಸ್ತ್ರೊಪನಿಸದರ್ಥಮಮ೦ ಗರ್ಭೀ
  ಕರಿಸಿ ಜೈನಚಾರ್ವಾಕಮಾಯಾವಾದಿವೈಸ್ಮವರೆಂಬ ಮದಗಜಕ್ಕೆ ಅಂಕು
  ಶವಾಗಿ ರಚಿಸಿದಂತೆ ಕವಿ ಹೇಳುತ್ತಾನೆ. ಗ್ರಂಥಾದಿಯಲ್ಲಿ
  ಶ್ರೀಗಿರಿಜಾಕುಚಕುಂಕುಮ | ರಾಗಾಂಕಿತವಕ್ಷನಕ್ಷಯಂ ಸರ್ವೇಶಂ |
  ಯೋಗಿಜನಹೃನ್ನಿವಾಸಂ | ಭೋಗೀಂದ್ರಾಭರಣನೊಲ್ದು ಸಲಹಲಿ ಜಗಮಂ || 
  ಎಂಬ ಪದ್ಯವೂ ಗ್ರಂಥಾಂತ್ಯದಲ್ಲಿ 
  ಪರವಾದಿಗಜಾಂಕುಶಮೆಂ | ಬುರುತಾರಾವಳಿಯ ನೀಲಕಂರಾರಾಧ್ಯಂ | 
  ವಿರಚಿಸಿದನೋದುವುದಿದಂ | ಪರಿಭವಮಿಲ್ಲಮಮ ನೋಡಲಿದುವೆ ಯಧಾರ್ಧo ||
  ಎಂಬ ಪದ್ಯವೂ ಇವೆ.
                         ಚೆನ್ನವೀರ. ಸು. 1500 
             ಈತನು ಸಾರಸ್ವತವ್ಯಾಕರಣ, ಪುರುಷಸೂಕ್ತ, ನಮಕಚಮಕ
    ಇವುಗಳಿಗೆ ಕನ್ನಡಟೀಕೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ, 
    ಯಾಗಂಟಿಶರಭಲಿಂಗಭಕ್ತನು, ತೃತ್ತೀರೀಯಯಜುಶ್ಚಾಖಾಧ್ಯಾಯ, ಅತ್ರಿ 
    ಗೋತ್ರದವನು, ವೀರಮಾಹೇಶ್ವರತಂತ್ರಸೂತ್ರದವನು, ಶಿವಲೆಂಕಮಂಚಣ 
    ಪಂಡಿತಾರಾಧ್ಯವಂಶೋದ್ಭವನು ; ಇವನ ತಂದೆ ಕಕಿಲಾಕುಂಡ ಸಂಗನ 
    ಗುರುಲಿಂಗ, ತಾಯಿ ನಂದ್ಯಂಬೆ, ಗುರು ಪಿತೃವ್ಯಸಂಬಣ್ಣ, ಸ್ಥಳ ಸಹ್ಯಾದ್ರಿ 
    ಯ ತಪ್ಪಲಲ್ಲಿರುವ ಕುಂಟಿಕಾಪುರ. ಇವನಿಗೆ ಕಾಶೀಕಾಂಡಚೆನ್ನವೀರಕವಿ
    ಎಂದೂ ಹೆಸರಿರುವಂತೆ ತೋರುತ್ತದೆ. ಇವನ ಕಾಲವು ಸುಮಾರು 1500 
    ಆಗಿರಬದು. ಈ ವ್ಯಾಖ್ಯಾನಗಳನ್ನು ನೋಡಿದರೆ ಈತನು ದೊಡ್ಡ ಪಂಡಿ
    ತನು ಎಂಬುದಕ್ಕೆ ಅಡ್ಡಿಯಿಲ್ಲ. ಇವನ ಸಾರಸ್ವತವ್ಯಾಕರಣಟೀಕೆಗೆ 
    ಶಬ್ದಮಣಿ ಎಂದು ಹೆಸರು.
                            ಗುಮ್ಮಟಾರ್ಯ. ಸು. 1500
         ಈತನು ಅರ್ಧೆಂದುಳಿಶತಕವನ್ನು ಬರೆದಂತೆ ಆ ಶತಕದ 
    ಒಂದು ಪ್ರತಿಯ ಕೊನೆಯ ಪದ್ಯದ
          22