ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ) ಸಂಪಾದನೆಯ ಚೆನ್ನಂಜೆದೇವವ 214

ವಯ್ಯಾ; ಧನ ದೊರಕದೆ ನಿಸ್ಫೃಹನಲ್ಲದೆ ಧನ ದೊರಕಿ ನಿಸ್ಫೃಹನಲ್ಲವಯ್ಯಾ; ಏಕಾಂತದ್ರೋಹಿ ಗುಪ್ತಪಾತಕಿ ಯುಕ್ತಿಶೂನ್ಯಂಗೆ ಸಕಳೇಶ್ವರದೇವ ಒಲಿ ಒಲಿ ಎಂದೊಡೆ ಎಂತೊಲಿವನಯ್ಯಾ.

                  _____________________
                        ಲಿಂಗಮಂತ್ರಿ, ಸು. 1530  
        ಈತನು ಕಬ್ಬಿಗರ ಕೈಪಿಡಿಯನ್ನು ಬರೆದಿದ್ದಾನೆ. ಇವನು ವೀರಶೈವಕವಿ; ವಿರೂಪಾಕ್ಷನ ಮಗನು, ನುಗ್ಗೆಹಳ್ಳಿಯ ರಾಯಭೂವರನ ಪ್ರಧಾನಿ. ಸಂಗೀತನಿಪುಣ, ಬಹುಲಿಪಿಜ್ಞ ಎಂದು ಹೇಳಿಕೊಂಡಿದ್ದಾನೆ.
        ಹಾಸನದ 117ನೆಯ ಶಾಸನದಿಂದ (1573) ವಿಜಯನಗರದ ರಾಜನಾದ ವೀರಪ್ರತಾಪಪ್ರೌಢದೇವಮಹಾರಾಯನ (1419-1446) ಅಳಿಯನಾದ ಆತ್ರೇಯ ಗೋತ್ರದ ಆಪಸ್ತಂಬಸೂತ್ರದ ಶಾವಾಶ್ವಪ್ರವರದ ಯಜುಶ್ಶಾಖೆಯ ಸೋಮವಂಶದ ತಿರುಮಲರಾಜನಿಗೆ ನುಗ್ಗೆಹಳ್ಳಿಯ ರಾಯೊಡೆಯನೆಂಬ ಮಗನಿದ್ದಂತೆ ತಿಳಿಯುತ್ತದೆ. ಮತ್ತೊಂದು ಶಾಸನದಲ್ಲಿ ನುಗ್ಗೆಹಳ್ಳಿಯ ರಾಯಣರಾಜನು ವಿಜಯನಗರದ ಅಚ್ಯುತರಾಯನ (1530-1542) ಸಾಮಂತನಾಗಿದ್ದನೆಂದು ಹೇಳಿದೆ. ಈತನೇ ಕವಿ ಹೇಳುವ ನುಗ್ಗೆಹಳ್ಳಿಯ ರಾಯಭೂವರನು. ಇವನ ಕಾಲವು ಸುಮಾರು 1530 ಆಗಬಹುದು ಕವಿಯಕಾಲವೂ ಅದೇ.
        ಕವಿ ತನ್ನ ಗುಣಾದಿಗಳನ್ನು ಈ ಪದ್ಯಭಾಗಗಳಲ್ಲಿ ಹೇಳಿಕೊಂಡಿದ್ದಾನೆ___
  ಶಿವಚರಣಯುಗಸಮಾಕಲಿತಾಂತರಂಗ ಶಿವ|
  ಕವಿನಿಕರಪಾದಪಂಕೇಜಾತಭೃಂಗ ಸ|
  ದ್ವಿವಿಧಮೃದುಶಬ್ದ ಸಾಹಿತ್ಯಪೀಯೂಷಾಬ್ಧಿಲಲಿತಲಹರೀತರಂಗ || 
  ಅವಿರಳಾನಂದಯೋಗಿವ್ರಾತಸಂಗ ದು|ಷ್ಕ ವಿನಿಚಯಹೃದಯಾಂಧಕಾರದೂರಪತಂಗ| 
  ನವಮದನರೂಪ ವಿರೂಪಾಲಿಂಗ.
  ಧುರಧೀರನುಗ್ಗೆಹಳ್ಳಿಯರಾಯಭೂವರನ |ಪರಮಪ್ರಧಾನಸುಕಲಾಪ್ರವೀಣಂಕೀರ್ತಿ| 
  ಭರಿತದಿಗ್ವಳಯಂ ವಿರೂಪಾಕ್ಷಪಾದಾರವಿಂದಮಕರಂದಭೃಂಗಂ ||
  ಸರಸಸಂಗೀತನಿಪುಣಂ ಬಹುಲಿಪಿಜ್ಞ ಭೂ |
  ಸುರವರವಿರೂಪಾಕ್ಷಸುತ ಲಿಂಗಮಂತ್ರಿಪಂ.