ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ವೀರಭದ್ರರಾಜ. 217
ತಳೆದಿರ್ಪರಾದ್ವಿಜರ್ ನೆಲದಮರ್ದ್ದುಣಿವೆಸರ |
ನುೞುದರಸುಮಗನರನಗಂಗೆ ಹೆಸರಾಪಸುಬೆ |
ವಳನೆಂದು ವೈಶ್ಯನುಂ ಕುಡಿಯೆನಲ್ಕೊಕ್ಕಲಿಗನೆಂದಿಳೆಗೆ ಸಿದ್ಧಾಂತವು ||
___ ___ ___
ವೀರಭದ್ರರಾಜ ಸು 1530
ಈತನು ವೀರಭದ್ರವಿಜಯವನ್ನೂ, ಪಾರ್ವತೀವಲ್ಲಭಶತಕ, ಉಮಾ ಮಹೇಶ್ವರಶತಕ, ಪ್ರಾಣನಾಥಶತಕ, ಶ್ರೀಕಂಠಸೋಮೇಶ್ವರಕತಕ, ಕಂದ ಶತಕ ಎಂಬ 5 ಶತಕಗಳನ್ನೂ ಬರೆದಿದ್ದಾನೆ.
ಇವನು ವೀರಶೈವಕವಿ; ರಾಜವಂಶಕ್ಕೆ ಸೇರಿದವನು.ತನ್ನ ವಂ ಶಾವಳಿಯನ್ನು ಹೀಗೆ ಹೇಳಿಕೊಂಡಿದ್ದಾನೆ ___ಶ್ರೀಕಂಠವಂಶವಾರಿಧಿಚಂದ್ರ ನಾದ ಚಿಕ್ಕವಿರುಪರಾಜ; ಮಗ ಕಾಮನೃಪ, ಇವನ ಹೆಂಡತಿ ವೀರ ಮಾಂಬೆ; ಅವರ ಮಗ ವಿರೂಪಾಕ್ಷನೃಪ; ಮಗ ಕವಿ ವೀರಭದ್ರರಾಜ. ಈತನ ತಂದೆಯಾದ ವಿರುವರಾಜನು 1519 ರಲ್ಲಿ ತ್ರಿಭುವನತಿಲಕವನ್ನು ಬರದುದಾಗಿ ಆ ಗ್ರಂಥದಿಂದ ತಿಳಿವುದರಿಂದ ಇವನ ಕಾಲವು ಸುಮಾರು 1530 ಆಗಬಹುದು.
ಪೂರ್ವಕವಿಗಳನ್ನು
ಬಾಣನ ಬೆಡಂಗು ಕನ್ನಡ |ಜಾಣಂ ಹಂಪೆಯಹರೀಶ್ವರನ ಬಗೆ ಸುಕವಿ |
ಪ್ರಾಣ೦ ಮಯೂರನೊಳ್ನುಡಿ | ಮಾಣದೆ ನೆಲಸಿಕೆ ಮತ್ಕೃತಿಯೊಳೊಳ್ಬಿಂದಂ||
ಘನಕವಿಕಾಳಿದಾಸನಡಿಗಳ್ಗೆ ಹಲಾಯುಧನಂಘ್ರಗಳ್ಗ ಭೋ |
ಜನ ಚರಣಕ್ಕೆ ಮಲ್ಹಣನ ಪಾದಪಯೋಜಕೆ ನಾಡೆ ಕೇಶಿರಾ |
ಜನ ಚರಣಕ್ಕೆ ಯುದ್ಭಟಮಹೀರಮಣಕ್ರಮಕೆಯ್ದೆ ಸಂತತಂ |
ವಿನಮಿತನಾಗಿ ಪೇಱೈನೊಲವಿಂ ಬುಧಸೇವ್ಯಮೆನಿಪ್ಪ ಕಾವ್ಯಮಂ ||
ಎಂಬ ಪದ್ಯಗಳಲ್ಲಿ ಸ್ಮರಿಸುತ್ತಾನೆ, ತನ್ನ ಗುಣಗಳನ್ನು ಈ ಪದ್ಯದಲ್ಲಿ ಹೇಳಿಕೊಂಡಿದ್ದಾನೆ__
ಮನಸಿಜಮಾನಭಂಜನಪದಾಂಬುಜವಲ್ಲದೆ ಮಿಕ್ಕ ದೇವರಂ !
ನೆನೆದಱುಯಂ ಸಮಂತು ಪರಕಾಮಿನಿಯರ್ಕಳ ಸಂಗಮಂ ವಲಂ ||
1, 199ನೆಯ ಪುಟವನ್ನು ನೋಡಿ
28