ಈ ಪುಟವನ್ನು ಪರಿಶೀಲಿಸಲಾಗಿಲ್ಲ.
218 ಕರ್ಣಾಟಕ ಕವಿಚರಿತ. [16 ನೆಯ
ಕನಸಿನೊಳಾದೊಡಂ ಮಱೆದು ಕಂಡಱುಯಂ ವಿರುಪೇಂದ್ರಸೂನುವೆಂ | ದೆನಿಸುವ ವೀರಭದ್ರನೆನುತುರ್ವರೆಯೆದ್ದು ಪೊಗಱುದಾತನಂ | ಇವನ ಗ್ರಂಥಗಳಲ್ಲಿ 1 ವೀರಭದ್ರವಿಜಯ ಇದು ಚಂಪೂಗ್ರಂಥ, ಇದರಲ್ಲಿ ವಿರೇಶನ ಚರಿತವು ಹೇಳಿದೆ ವರ್ಣ ನಾಭಾಗನವೇ ಹೆಚ್ಚಾಗಿದೆ. ಈ ಗ್ರಂಥದ ಉತ್ಕೃಸ್ವತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ___ ಘನರಸದಿಂ ವಿಚಿತ್ರಪದದಿಂದೆ ನಭೋಂಗಣದಂತೆ ನಾಡೆ ರಂ | ಜನೆವಡೆದಿರ್ಪ ಲಕ್ಷಣದಿನುನ್ನ ತಸತ್ಕಳೆಯಿಂದ ಪೂರ್ಣಚಂ | ದ್ರನ ಸಿರಿಯಂತನಂತಪರಿರಾಜದಲಂಕೃತಿಯಿಂ ಗುಣಂಗಳಿಂ | ಮನಸಿಜವೈರಿಯಂತೆಸೆವುದೀಕೃತಿ ಬಿತ್ತೆಗರೊಲ್ದು ಭಾವಿಸಲ್ || ಗುರುಪದವಿಭಕ್ತಿಯಿಂ ಬಂ | ಧುರಲಿಂಗತ್ರಯದೆ ಸ ತಿ ಯಾನ್ವಿತದಿಂದಂ || ವರರೀತಿಭಾವದಿಂ ಶಂ | ಕರಭಕ್ತರತೆಱದಿನೆಸವುದೀಸತ್ಕಾವ್ಯಂ || ಇದು ಲಕ್ಕಣದಾಡುಂಬೊಲ | ನಿದು ಸಕ್ಕದದೇೞ್ಗೈ ಗಾಡಿ ನೆಲಸಿದ ನಾಡಿಂ | ತಿದು ದೇಶೀಯದ ಬೀಡೆನಿ / ಫುದು ನವರಸಭರಿತನವ್ಯಕಾವ್ಯಂ ದಿವ್ಯಂ || ಗ್ರಂಥಾವತಾರದಲ್ಲಿ ವಿಶ್ವನಾಥಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ವೀರಭದ್ರ, ನಂದಿ, ಭ್ರಂಗಿ, ಗಣೇಶ, ಪಣ್ಮುಖ, ಸರಸ್ವತಿ ಇವರುಗ ಳನ್ನು ಕ್ರಮವಾಗಿ ಸ್ತುತಿಸಿದ್ದಾನೆ. ಆಶ್ವಾಸಾಂತ್ಯದಲ್ಲಿ ಈ ಗದ್ಯವಿದೆ___ ಇದು ಸಮಸ್ತಬ್ರಹ್ಮಾಂಡಸಾರ್ವಭೌಮ ಸಕಲಸುರಮಕುಟಮಣಿವಿರಾಜಿತ ಪಾದಪದ್ಮ ಶ್ರೀಕಾಶೀಪುರಾಧೀಶ್ವರವಿಶ್ವನಾಧಪಾದಪಂಕೇಜಮಕರಂದಮಧುಕರಾಯ ಮಾನ ಶ್ರೀಕಂರವಂಶಾರ್ಣವಪೂರ್ಣಚಂದ್ರನೆನಿಪ ಸತ್ಯವೇಶ್ವರ ವೀರಭದ್ರನೃಪಾಲವಿ ರಚಿತಮಪ್ಪ ಶ್ರೀವೀರಭದ್ರವಿಜಯಮಹಾಪ್ರಬಂಧದೊಳ್ ಇವನ ಬಂಧವು ಲಲಿತವಾಗಿಯೂ ಹೃದಯಂಗಮವಾಗಿಯೂ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ___ ಸಮುದ್ರ ಅನಿಮಿಷವೃಂದದಿಂ ಸುರನಿವಾಸದವೋಲ್ ಸಲೆ ವಿದ್ರುಮಂಗಳಿಂ | ವನದವೊಲಾಸರಸ್ವತಿಯ ಮೇಳದಿನಬ್ಬ ಜನಂತೆ ಸಂತತಂ ||