ಶತಮಾನ] ವೀರಭದ್ರರಾಜ. 219 ಜನನುತಮಾಗಿ ತೋರ್ಪ ಕಮಲಾಸ್ಪದದಿಂ ವನಜಾಕ್ಷನಂತೆವೋಲ್ | ವನನಿಧಿ ತಾಂ ಮನಂಗೊಳಿಸಿ ಕಣ್ಗೆಸೆದಿರ್ದುದಿಳಾತಳಾಗ್ರದೊಳ್ ||
ಗಂಗೆ
ಬಗೆಯಲೊಱಲ್ದಧೋಗತಿಗೆ ತಾನೆಡೆಯಾಗುತೆ ಸೇವಿಸರ್ಗೆಯೂ | ರ್ಧ್ವಗತಿಯನೀಯುತುಂ ಬಹುಲಭಂಗಕೆ ತಾನೊಡಲಾಗಿ ತನ್ನ ಪೊ || ರ್ದುಗೆವಿಡಿದಿರ್ಪ ಮಾನವರ್ಗಭಂಗತೆಯಂ ನೆಱೆ ಮಾಡುತಿಂತು ಸೆ | ರ್ಮೆಗೆ ನೆಲೆಯಾಗಿ ಕಾಶಿಗೆಣೆಯಾಗೆಸೆದಿರ್ಪಳಿದೇಂ ವಿಚಿತ್ರಮೋ ||
ಮುತ್ತಿನ ಅಂಗಡಿ
ಗಗನಮದಾವಗಂ ಬಿಡದೆ ದೋಷದೊಳಾಚರಿಸಿರ್ಪ ಸೋಮನಿಂ | ದಗಲದೆ ರಂಜಿಸಿರ್ಪುದದು ದೋಷವಿವರ್ಜಿತಸೋಮನಿಂದಮೋ || ನಗರಿಯದೆಯ್ದೆ ರಂಜಿಪುದದಿಂತಿದೆ ಸುಸ್ಥಳಮೆಂದು ತಾರೆಗಳ್ | ಮಿಗೆ ನೆಲಸಿರ್ಪ ಪಾಂಗೊ ಎನೆ ಮೌಕ್ತಿಕಪಣ್ಯಮನಂತಮೊಪ್ಪುಗುಂ ||
ಕಿರಾತಸ್ತ್ರೀಯರು
ನಡೆಗರಸಂಜೆಯಂ ಸರಕೆ ಕೋಕಿಲಮಂ ಬಗೆವೆತ್ತು ತೋರ್ಪ ಮೆ | ಲ್ನುಡಿಗೆ ಶುಕಂಗಳಂ ಕುಚಯುಗಂಗಳ ಪೆರ್ಮೆಗೆ ಜಕ್ಕವಕ್ಕಿಯಂ || ಮುಡಿಗೆ ನವಿಲ್ಗಳಂದವನೆ ಪೋಲ್ತು ಕಿರಾತನಿತಂಬಿನೀಜನಂ | ಬಿಡದೆ ವಿಜಾತಿಯೆಂಬುದದು ಸಾರ್ಧಕಮಾಗೆಸೆದಿರ್ಪುದಾವಗಂ ||
ಕರ್ಣಿಕಾರ
ಮಿಸುನಿಯ ತನಿವಿತ್ತುಗಳಂ | ಕುಸುಮಶರಂ ಬಿತ್ತಿ ಬೆಳೆದು ರಂಜಿಸುತಿರ್ಪಾ | ಪೊಸಬೆಳೆಗಳಿವೆಂಬಿನೆಗಂ | ಕೊಸಗಿನ ಕಮ್ಮರಲ್ಗಳೆಸೆದುವಾನಂದನದೊಳ್ |
ಶಿವಸ್ತುತಿ
ಕುಲಗೋತ್ರಜಮರ್ಧಾಂಗಂ | ಕುಲಗೋತ್ರವಿಹೀನಮಾಗಿಯುಱೆದರ್ಧಾಂಗಂ | ನೆಲಸಿತ್ತಾವಂಗಾಪು | ಷ್ಕಲರೂಪಂ ಕರುಣದಿಂದೆ ರಕ್ಷಿಪುದೆಮ್ಮಂ ||
ಇವನ 5 ಶತಕಗಳು ಶಿವಸ್ತುತಿರೂಪವಾಗಿಯೂ ವೀರಶೈವಸಿದ್ಧಾಂ
ತಬೋಧಕವಾಗಿಯೂ ನೀತಿವೈರಾಗ್ಯಪ್ರತಿಪಾದಕವಾಗಿಯೂ ಇವೆ. ಇವು ಗಳಲ್ಲಿ
2 ಪಾರ್ವತೀವಲ್ಲಭಶತಕ ಇದರಲ್ಲಿ IOI ವೃತ್ತಗಳಿವೆ ; ಪ್ರತಿವೃತ್ತವೂ ಶ್ರೀಪಾರ್ವತೀವಲ್ಲಭಾ