ಈ ಪುಟವನ್ನು ಪರಿಶೀಲಿಸಲಾಗಿದೆ
220 ಕರ್ಣಾಟಕ ಕವಿಚರಿತೆ. [16ನೆಯ ಎಂದು ಮುಗಿಯುತ್ತದೆ. ಈ ಶತಕದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ-
ಪಿರಿದುಂ ವೃತ್ತರಸಾಮೃತಂಗಳನೊಱಲ್ದಾಂತಿರ್ದು ಸಲ್ಲಕ್ಷಣೋ |
ದರಮಾಗಿರ್ದು ಕಲಾಪ್ರಪೂರ್ಣತೆಯನಾದಂ ತಾಳ್ದು ಚಂದ್ರಂಬೊಲಾ ||
ದರದಿಂದೀಶತಕಂ ವಿರಾಜಿಪುದಱುಂದೋರಂತೆ ನಿನ್ನುತ್ತಮಾ |
ಭರಣಾಧಿಕ್ಯಮದಾಗದಿರ್ಪುದೆ ಸದಾ ಶ್ರೀಪಾರ್ವತೀವಲ್ಲಭಾ ||
ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
ತನು ಮೇಘಾಕೃತಿ ಯೌವನಂ ಮಿಳಿರ್ವ ವಿದ್ಯುಲ್ಲೇಖೆ ಪುತ್ರರ್ಕ್ಕಳಿಂ |
ದ್ರನ ಚಾಪಂ ಸಿರಿ ಮಂಜು ಬಂಧುನಿಚಯಂ ನೀರಕ್ಕರಂ ನಾಡೆ ಸ ||
ಜ್ಜನಮಾಕಾಶದರಲ್ ನಿಜಾಯು ಕನಸೆಂದಾವೊಂ ವಿಚಾರಿಪ್ಪನಾ |
ತನೆ ಮುಕ್ತ್ಯಂಗನೆಯಾಣ್ಮನಪ್ಪನೊಲವಿಂ ಶ್ರೀಪಾರ್ವತೀವಲ್ಲಭಾ ||
ಬಗೆಯೊಳ್ ನಿನ್ನ ಪದಾಬ್ಜಭಕ್ತಿವಧು ಬಂದಪ್ಪಲ್ ಮನುಷ್ಯರ್ಗೆ ಮೋ |
ಹಗುಣಂ ಪೋದುದು ಕಾಮಮೞ್ದುದು ಮಹಾಸಂಸಾರಮೞ್ಗೆತ್ತುನೆ ||
ಟ್ಟಗೆ ರಾಗಂ ಬಿಡದೋಡಿದತ್ತು ವಿಪರೀತಂಬೆತ್ತು ಲೋಕಂಗಳೊಳ್ |
ಸೊಗಸಿತ್ತೂರ್ಜಿತವೇದಸನ್ನು ತಪದ ಶ್ರೀಪಾರ್ವತೀವಲ್ಲಭಾ ||
ಪಿರಿದುಂ ತನ್ನ ಕುಟುಂಬಚಿಂತೆಯೊಳಜಸ್ರಂ ಮಗ್ನರಾಗಿರ್ಪಮ |
ರ್ತ್ಯರ ಶಾಸ್ತ್ರಶ್ರವಣಂ ವಿವೇಕಮಧಿಕಾಚಾರಂ ವಿರಾಗಂ ಗುಣಂ ||
ಪರಮಜ್ಞಾನಮಿವೆಯ್ದೆ ರಂಧ್ರಘಟದೊಳ್ ತುಂಬಿರ್ದ ತೋಯಂಬೊಲ |
ಸ್ಥಿರಮಾಗಿರ್ಕುಮಜೇಯಮನ್ಮಧಹರ ಶ್ರೀಪಾರ್ವತೀವಲ್ಲಭಾ ||
ನಯಮಂ ನೀತಿಯನುನ್ನತಾಚರಣೆಯಂ ಸುಜ್ಞಾನಮಂ ಶಾಂತಿಯಂ |
ದಯೆಯಂ ದಾಂತಿಯನೆಯ್ದೆದಾನಗುಣಮಂ ಸದ್ಭಕ್ತಿಯಂ ಸೂಕ್ತಿಸಂ ||
ಚಯಮಂ ವಿದ್ಯೆಯನೆಲ್ಲಮಂ ಪಡೆವೋಡೀಲೋಕಂಗಳೊಳ್ ಸಜ್ಜನಾ |
ಳಿಯ ಸಂಗಂ ದೊರೆಕೊಳ್ಳದಪ್ಪುದೆ ಸದಾ ಶ್ರೀಪಾರ್ವತೀವಲ್ಲಭಾ ||
3 ಉಮಾಮಹೇಶ್ವರಶತಕ
ಇದರಲ್ಲಿ IOI ವೃತ್ತಗಳಿವೆ ; ಪ್ರತಿವೃತ್ತವೂ ಉಮಾಮಹೇಶ್ವರಾ ಎಂದು ಮುಗಿಯುತ್ತದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುವತ್ತೇವೆ-