ಈ ಪುಟವನ್ನು ಪರಿಶೀಲಿಸಲಾಗಿದೆ
889 ಕರ್ಣಾಟಕ ಕವಿಚರಿತೆ. [16 ನೆಯ
ಕನಕಾಪೇಕ್ಷೆಯಿನೂಲ್ದು ವಿಷ್ಣು ಪೊದೆದಂ ಪೀತಾಂಬರಕ್ಕೆಯ್ದೆ ತ | ತ್ಕನಕಾಪೇಕ್ಷೆಯಿನಂತು ವೊಂಬಸಿಳಾನಾದಂ ಬ್ರಹ್ಮನೆಂದಿಂತು ನೀಂ || ಕನಕಾಪೇಕ್ಷೆಯನಾಂತು ಧೂರ್ತಕುಸುಮಕ್ಕೊಲ್ದೆ ಬಳಾಕ್ಕಕ್ಕಟಾ | ನಿನಗೆಂದುಂ ಮರುಳಾಟವೇ ಬಿಡದಲಾ ಶ್ರೀಕಂಠಸೋಮೇಶ್ವರಾ || ತಲೆ ನೀಡುಂ ಜಡಯುಕ್ತಮಾಗಿದೆ ಶರೀರಂ ನೋಡೆ ವಾತಕ್ಕೆ ತಾಂ || ನೆಲೆಗೊಂಡಿರ್ದಬಲಾಂಗಮಾಯ್ತು ಪಸಿವಿಲ್ಲೆಂದುಂ ಜಲಾಪೇಕ್ಷೆಯು || ಜ್ವಲಿಸುತ್ತಿರ್ದಪುದಾವಗಂ ನಿನಗೆ ನಿನ್ನ೦ ಜಾನಿಸುತ್ತಿರ್ಪರೀ | ನೆಲದೊಳ್ ನಿರ್ಗದರಪ್ಪರಿಂತರಿದಲಾ ಶ್ರೀಕಂರಸೋಮೇಶ್ವರಾ || 6 ಕಂದಶತಕ ಇದರಲ್ಲಿ 115 ಕಂದಗಳಿವೆ ;ಪ್ರತಿಯೊಂದು ಕಂದವೂ ಅಂಬಿಕೆಯ ರಸಾ ಎಂದು ಮುಗಿಯುತ್ತದೆ. ಇದರಿಂದ ಕೆಲವು ಪದ್ಯಗಳನ್ನು ಉದ್ದ ರಿಸಿ ಬರೆಯುತ್ತೇವೆ-- ಭವದೀಯಶರಕ್ಕಾತ್ಮೂ | ದ್ಭವನ ಶರಂ ಕಣ್ಣದಾಗಿ ಸೊಗಸುತ್ತಿದೆ ಮ | ತ್ತವನಂ ನೀಂ ಗೆಲ್ದಂದಂ | ಭುವನದೊಳಿದು ಚಿತ್ರಮಲ್ತೆಯಂಬಿಕೆಯರಸಾ || ಮಡದಿಗೆ ಮೆಚ್ಚಿದವರ್ ಪೊಂ | ದೊಡವಂ ರತ್ನಂಗಳಂ ನವೀನಾಂಬರಮಂ | ಕೊಡುವರ್ ನಿನ್ನ೦ದದೊಳರೆ | ಯೊಡಲಂ ಕೊಟ್ಟವರ ಕಾಣೆನಂಬಿಕೆಯರಸಾ|| ಪಸುಪತಿಪಟ್ಟವನುಳಾ ಕ | ಟ್ಟಿಸಿಕೊಂಡಒಳಾಕ್ಕೆ ಪಸುವೆನಿಪ್ಪೆನ್ನಂ ರ | ಕ್ಷಿಸದೂಡೆ ನಿನ್ನಾ ನಾಮಂ | ನುಸುಳ್ವುದಲಾ ಭವಭಯಾರಿಯಂಬಿಕೆಯರಸಾ || ಚಾಟುವಿರಲನಾಥ ಸು I530 ಈತನು ಭಾಗವತ, ಭಾರತದಲ್ಲಿ ಸ್ವಲ್ಪಭಾಗ ಇವುಗಳನ್ನು ಬರೆದಿ ದ್ದಾನೆ. ಇವನು ಬ್ರಾಹ್ಮಣಕವಿ, “ ಇದು ಸದಾನಂದಾಖ್ಯಯೋಗಿಯ ತೊದಲುನುಡಿ, ” “ ಗೋಪಿನಾಥನು ಮಂಗಳವನೀವನು ಸದಾನಂದಾಖ್ಯ
ಮುನಿವರಗೆ ”, “ ಯೋಗೀಂದ್ರನಖಿಳೂದಿತಸದಾನಂದ ಮುದದೊಳಭಿ ವರ್ಣಿಸಿದಂ ” ಎಂಬ ಪದ್ಯಭಾಗಗಳಿಂದ ಕವಿಯ ನಿಜವಾದ ಹೆಸರು ಸದಾ ನಂದಯೋಗಿ ಎಂದು ತಿಳಿಯುತ್ತದೆ. ಇವನ ಗ್ರಂಥಗಳಲ್ಲಿ ನಿತ್ಯಾತ್ಮ ಎಂ ಬ ಅಂಕಿತವು ಉಪಯೋಗಿಸಲ್ಪಟ್ಟಿದೆ . ಇವನ ಗುರು ಅಚ್ಯುತಾರಣ್ಯಯತಿ. ಈ ಗುರುವಿನ ಅನುಗ್ರಹದಿಂದ ಭಾಗವತವನ್ನು ಬರೆದಂತೆ ಕವಿ ಈ ಪದ್ಯ ಗಳಲ್ಲಿ ಸೂಚಿಸಿದ್ದಾನೆ---.