ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿರಕ್ತತೋಂಟದಾರ್ಯ

ವರಭಕ್ತಿರಾಗದೆಂದೆಂಬ ಮೂಡಣಕೆಂಪು | ಕರಮೆಸೆಯೆ ಚಿತ್ಸೂರ್ಯನುದಿಸಿದಂ ಪರಮಸದ್ಗುರುವೆ ನೀನುಪ್ಪವಡಿಸಾ ||

2 ಪಾಲ್ಕುರಿಕೆ ಸೋಮೇಶ್ವರಪುರಾಣ ಇದೂ ವಾರ್ಧಕಷಟ್ಪದಿಯಲ್ಲಿ ಬರೆದಿದೆ, ಸಂಥಿ 15, ಪದ್ಯ 1456° ಇದರಲ್ಲಿ ಭೃಂಗಿಯ ಅಪರಾವತಾರವಾದ ಪಾಲ್ಕುರಿಕೆ ಸೋಮೇಶ್ವರನ ಚರಿತವು ವರ್ಣಿಸಿದೆ. ಈ ಗ್ರಂಥವನ್ನು ಗೂಳೂರಸಿದ್ದವೀರೇಶ್ವರನ ಆ ಜ್ಞಾನುಸಾರವಾಗಿ ಬರೆದಂತೆ ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ನಿರಂಜನಲಿಂಗಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ವೀರಭದ್ರ ಇವರನ್ನು ಸ್ತುತಿಸಿ ಅನಂತರ ಬಸವನಿಂದ ಗೂಳೂರಸಿದ್ದವೀರೇಶ್ವರನವರೆಗೆ 2 ಗುರುಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದರಿಸಿ ಬರೆಯುತ್ತೇವೆ___

               ತೆಂಗು 

ಪಿಂಗದೆ ವಿಬುಧರೆನಿಸಿ ಗುರುಪತ್ನಿಗಳುಪಿ ಲೋ | ಕಂಗಳೊಳ್ ಕ್ಷಯರೋಗಿಯಾಭನಂಗದ ರುಚಿಯ ನಂಗವಿಪರೇ ನಿರ್ಜರತ್ವವೆಂತಪ್ಪುದೆಂದವನಿಸತಿ ತಾನೊಲವಿನಿಂ | ಕಂಗೊಳಿಪ ದಿವ್ಯರುಚಿಯಮೃತಮಂ ಪೊನ್ನಕಳ | ಸಂಗಳೊಳ್ ತುಂಬಿ ಪಲಕೈಗಳಿ೦ ಸುರರ್ಗೆಯು | ತ್ತುಂಗತರದಿಂದೆತ್ತಿ ಕೊಡುತಿರ್ದಪಳೊ ಎನಲ್ ತೆಂಗುಗಳ್ಶೋಭಿಸಿದುವು |

              ಕೌಂಗು

ದೆಸೆದೆಸೆಗೆ ಪೊಸಕಂಪು ಪಸರಿಸಲ್ ಮಕರಂದ | ರಸಮೊಸರುತಿರೆ ನಾಡೆ ನಸುವಿರಿದೊಡೆದು ಪೊಚ್ಛ | ಪೊಸತಾದ ಪೊಂಬಾಳೆ ಮಿಾನಂತಿರಸೆಯೆ ನಳನಳಿಸುತಾಗಸಮನೆಯ್ದೆ || ಒಸೆದಳ್ಳಿರೆಯುತುಂ ಬೆಳೆದಮರಂ ಕಣೆಯಂತೆ || 1, Vol I, 229, 2 ಬಸವ, ಚೆನ್ನಬಸವ ಪ್ರಭುದೇವ, ಮಹಾದೇವಿಯಕ್ಕ, ಪಂಡಿತಾರಾಧ್ಯ, ಶಿವ ಲೆಂಕಮಂಚಣ್ಣ, ಶ್ರೀಪತಿಪಂಡಿತ, ಮಗ್ಗೆಯ ಮಾಯಿದೇವ, ಸಪ್ಪೆಯಾರ್ಯ, 'ತೋಂಟಿದಸಿದ್ದಲಿಂಗದೇಶಿಕನ ಶಿಷ್ಯ ಬೋಳಒಸವಾರ್ಯ, ಗೂಳೂರ ಸಿದ್ದವೀರಾಚಾರ್ಯ.