419 ಶತಮಾನ] ಧರಣಿಪಂಡಿತ. ಒಂದಾನೊಂದು ಕಾಲದಲ್ಲಿ ಇದಿರುಬೀಳಲು ದೊರೆ ಅವನನ್ನು ಸೋಲಿಸಿದಾಗ ಅವನು ಮಡುವಿನಲ್ಲಿ ಬಿದ್ದನು, ದೊರೆ ಅವನನ್ನು ಹೊರಕ್ಕೆ ತೆಗೆಯಿಸಿ ಅವನ ಅಪರಾಧವನ್ನು ಕ್ಷಮಿಸಿ ಪುನಃ ಪದವಿಯನ್ನು ಕೊಟ್ಟನು. ತಾನು ಕಳುಹಿಸಿದ ವಿಷದಮಾವಿನಹಣ್ಣ ನ್ನು ಮೂಸಿ ಬಿಜ್ಜಳನು ಸಾಯಲು ಬಸವನು ಹೆದರಿ ಓಡಿಹೋಗಿ ಕಡಲತಡಿಯ ವೃಷಭ ಪುರದಲ್ಲಿಯ ಒಂದು ಭಾವಿಯಲ್ಲಿ ಮುಳುಗಿ ಸತ್ತನು. “ ಉರೆವೆನೆಂದು ಪೊಕ್ಕು ಸತ್ಯುದರೆಂ” ಆ ಊರಿಗೆ ಉಳಿವೆ ಎಂದು ಹೆಸರಾಯ್ತು. ಈ ಗ್ರಂಥದ ಸರಸರಚನೆಯನ್ನು ಕುರಿತು ಹೀಗೆ ಬರೆದಿದ್ದಾನೆ. ಮೊದಲು ಪದವನಿಟ್ಟು ಮುಂದಕೆ ಪ್ರಾಸಿನ | ಹದನ ಕಾಣದೆ ಹುಡುಕಾಡಿ | ಹೊದಕುಳಿಗೊಂಡು ಪೇರುದ ಸಂಗತಿಯಲ್ಲ | ಚದುರರು ಕೇಳಿ ಮುದ್ದಿ ಪರು | ಅಚ್ಚಗನ್ನಡದೆ ಪಿಸುಗಳರುವಂದದಿ ) ಪೊಚ್ಚಮುತ್ತಿನೊಳು ಸವಳವ | ಮೆಚ್ಚುವಂದದಿ ಸರಗೊಳಿಸಿದೆ ಬಲ್ಲವರು | ನಿಚ್ಚ ಧರಿಸಿಯಿರೆ ಕೈಯದೆ || ಗ್ರಂಧಾವತಾರದಲ್ಲಿ ಆದಿಜಿನಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಬಿಜ್ಜಳ ಸತ್ಯದ ಜಲನಿಧಿ ಯುಕ್ತಿಯ ಸುರನಗ ಬತ್ತೀಸಾಯುಧವಿದ್ಯಾಚಾರ್ಯ || ಮತ್ತಗಜತುರಗಸಾಧಕ ಸರ್ವಜ್ಞ { ಚಿತ್ತಜರೂಪ ಬಿಜ್ಜಳನು || ವೀರಶೈವಮತಹೇಳನ ಹೊಲೆ ಯನೆನಿಸುವಂತೆಯೆಲುಮಾಲೆ ಕೊರಲೊಳು/ ಹುಲಿದೊಗಲನುಟ್ಟು ಮೈಯೊಳ್ | ಬಲುರುಂಡಮಾಲೆಯ ಧರಿಸಿದ ಶಿವನನು | ಕುಲಜರು ಪೂಜೆಗೈಯುವರೇ || ಸತ್ತ ಹೆಣನ ಮುಟ್ಟಿ ಮನೆಗಳೊಳಗೆ ಹೂರೆ | ಮತ್ತದ್ರ ಹಡಕೆಯನು || ನಿತ್ಯದಿ ಕುಡಿದು ಹೇಸದೆ ಕೂಟ ತಿಂಬುದು ) ಎತ್ತಲಿರ್ಪ್ಪುದು ಹೊಲಗೇರಿ || ಬಡವರ ತಿರುಕರ ನೀಚಕುಲದವರ | ತಡೆಯದೆಯೂಕ್ಷಣ ಕರಸಿ | ಒಡವೆಗಳನು ಕೊಟ್ಟು ಕೊರಲಿಗೆ ಲಿಂಗನ | ಬಡಜನರ್ಗೆಲ್ಲಾ ಕಟ್ಟಿಸಿದ || ಕುಂಟರು ಕುರುಚರು ಗಂಟೆಯಚೋರರು ( ಕೊಂಟರು ಕೊನ್ನರು ತುಡುಗರು | ಗಂಟುಕಳ್ಳರು ಕೂಡಿ ಹಣವಿನಾಸೆಗೆ ತಮ್ಮ | ಕಂರದಿ ಲಿಂಗಕಟ್ಟಿದರು | 1, Vol, I 143,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೦೪
ಗೋಚರ