ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

420 ಕರ್ಣಾಟಕ ಕವಿಚರಿತೆ. Fi1 ನು ಸತ್ತಾಗ ಹೆತ್ತಾಗ ಸೂತಕವಾದಾಗ | ಮತ್ತೆ ಸ್ನಾನವ ಮಾಡಬೇಡಿ | ಒತ್ತಿನೊಲೆಯ ಭಸ್ಮವ ಪಣೆಯೊಳಗಿಡಿ ನಿಮಗೆ | ಹತ್ತಿದ ಕರ್ಮ ಹರಿವುದು ||

            ನೂತನಾಗಚಂದ್ರ ಸು 1650.                    ಈತನು ಜಿನಮುನಿತನಯ ಎಂಬ ಗ್ರಂಥವನ್ನು ಬರೆದಿದ್ದಾನೆ ಇವನು ಜೈನಕವಿ ರಾಮಚಂದ್ರಚರಿತಪುರಾಣ, ಮಲ್ಲಿನಾಧಪುರಾಣ ಇವು ಗಳನ್ನು ಬರೆದ ಪ್ರಸಿದ್ಧನಾದ ನಾಗಚಂದ್ರಕವಿಗೆ ತಾನು ಎರಡನೆಯವನು ಎಂಬ ಭಾವದಿಂದ “ನೂತನಾಗಚಂದ್ರ” ಅಥವಾ “ಅಭಿನವನಾಗಚಂದ್ರ” ಎಂದು ಹೆಸರಿಟ್ಟು ಕೊಂಡಂತೆ ಕಾಣುತ್ತದೆ. ಅಚ್ಚಾಗಿರುವ ಒಂದು ಪುಸ್ತಕ ದಲ್ಲಿ ಕವಿನೂತನಾಗಚಂದ್ರ ಎಂಬುದನ್ನು ಕವಿವಿನುತನಾಗಚಂದ್ರ ಎಂದು ತಿದ್ದಿದ್ದಾರೆ. ಇದರಿಂದ ಪ್ರಸಿದ್ಧನಾದ ನಾಗಚಂದ್ರನೇ ಈ ಗ್ರಂಧವನ್ನು ಬರೆದಿರಬಹುದು ಎಂಬ ಭ್ರಮೆಗೆ ಅವಕಾಶವಾಯಿತು. ನಾಗಚಂದ್ರನ ಶೈಲಿಗೂ ಇವನ ಶೈಲಿಗೂ ಸಂಬಂಧವೇ ಇಲ್ಲ, ಇವನು ಆಧುನಿಕಕವಿ, ಸುಮಾರು 1650 ರಲ್ಲಿ ಇದ್ದಿರಬಹುದು,

ಈತನ ಗ್ರಂಥ. ಜಿನಮುನಿತನಯ ಇದು ಕಂದದಲ್ಲಿ ಬರೆದಿದೆ; 106 ಪದ್ಯಗಳಿವೆ, ಪ್ರತಿಪದ್ಯವೂ 'ಜಿನ ಮುನಿತನಯಾ' ಎಂದು ಮುಗಿವುದರಿಂದ ಗ್ರಂಥಕ್ಕೆ ಈ ಹೆಸರು ಬಂದಿದೆ' ಇದು ಜಿನಧರ್ಮಬೋಧಕವಾಗಿಯೂ ನೀತಿ ಧೈರ್ಯಶಕ್ತಿಯೂ ಇದೆ. ಗಂಧಾವತಾರದಲ್ಲಿ ಜಿನಸ್ತುತಿ ಇದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-- ಭಾವಿಸುತಿರ್ಪಾವಸುರ್ವುು | ಭಾವನೆಯಿ೦ ಕೂಡಿ ತಾನೆ ಕಡದರುವಾಯ್ತನೆ| ಭಾವನೆಯಿಂದಪ್ಪದು ಧಾಳಿ ತದ್ಭವತಿಯಲ್ತೆ ಜಿನಮುನಿತನಯಾ | ತನು ಕುಸಿಯದೆ ತಲೆ ನೆನೆವುದು | ನೆನಸು ಅರಿಯದೆ ಧೈರ್ಯಶಕ್ತಿ ಕುಂದದಮುನ್ನಂ | ಚಿನಮಯನನು ತನ್ನನರಿತು ನೆನೆವುದು ತಾಂ ತನ್ನನರಿತು ಜಿನಮುನಿತನೆಯಾ|| ಮತಿಗೆಡಿಸುವ ಗತಿಗೆಡಿಸುವ ಧೃತಿಗೆಡಿಸುವ ಬಲ್ಪುಗೆಡಿಸುವಂತಹ ಕಳ್ಳಂ | ಕ್ಷಿತಿಯೊಳ• ಕುಡಿವರ್‌ ಕುಡಿಲ್ಕ ಲ್ಕತಿದನಮಂ ಜಿನಮುನಿತನಯಾ!