ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ]. ಸಿಂಹರಾಜ, 421


ಆಳುಂ ಪೆಂಡಿರ್ ಸುತರುಂ | ಮೇಳದವರ್ ನಂಟರಿಷ್ಟರೊಡಹುಟ್ಟಿದರುಂ | ಕಾಲಾಳುಮಶ್ವಚಯಮುಂ | ಜಾಳಿಸುವುವೆ ಜವನ ಮುಳಿಸ ಜಿನಮನಿತನಯಾ | ಕಾಲೊಳ್ ಮುಳ್ಳಿರದೆನಿತುಂ | ಕೀಲಿಸಿದೂಡೆ ನೊಂದ ನೋವ ತಿಳಿಯುತುಂ ದು | ಶ್ರೀಲರ್‌ ನಿರ್ದಯದಿಂದಂ | ಕೊಲುವರ್ ತಮ್ಮಂತೆಯಲ್ತೆ ಜಿನಮುನಿತನಯಾ ||

            ಸಿಂಹರಾಜ. ಸು. 1650                         ಈತನು ಚಿನ್ಮಯಚಿಂತಾಮಣಿ ಎಂಬ ಗ್ರಂಧವನ್ನು ಬರೆದಿದ್ದಾನೆ. ಈ ಗ್ರಂಥವು ಕಲ್ಯಾಣಕೀರ್ತಿಕೃತವೆಂದು ಕೆಲವರು ಹೇಳುತ್ತಾರೆ, ನಮಗೆ ದೊರೆತ ಒಂದು ಪ್ರತಿಯಲ್ಲಿರುವ 99 ನೆಯದಾದ

ಪರಮಜಿನಪಾದಭಕ್ತಂ | ನಿಗುತಂ ಹುಲಿಗೆರೆಯ ಸಿಂಹರಾಜಂ ಪೇರ್ದಂ | - ವರನೀತಿಯನಾದರದಿಂ | ಪರಮ ಪರಂಜ್ಯೋತಿಗಳೆ ಬುದ್ದಿಯನಿನಿಸಂ || ಎಂಬ ಪದದಿಂದ ಗ್ರಂಥಕರ್ತನು ಸಿಂಹರಾಜನೆಂದೂ ಪುಲಿಗೆರೆಯವನೆಂದೂ ಜೈನನೆಂದೂ ತಿಳಿಯುತ್ತದೆ. ಇವನ ಕಾಲವು ಸುಮಾರು [6೦0 ಆಗಿರಬಹುದೆಂದು ಊಹಿಸುತ್ತೇವೆ.] ಇವನ ಗ್ರಂಥ

              - ಚಿನ್ಮಯಚಿಂತಾಮಣಿ. -         ಇದು ಕಂದದಲ್ಲಿ ಬರೆದಿದೆ; ಪದ್ಯ 100. ಇದಕ್ಕೆ ಹರದನೀತಿ ಎಂಬ ಹೆಸರೂ ಉಂಟು. ಚಂಪಕಾಪುರದ ಚಂದ್ರಕೀರ್ತಿ ಎಂಬ ವರ್ತಕನು ಸೂರಸೇನನೆಂಬ ತನ್ನ ಮಗನಿಗೆ ಉಪದೇಶಿಸಿದ ನೀತಿ ಇದರಲ್ಲಿ ಉಕ್ತ ವಾಗಿದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ--

ಕಯ್ವಾರವರನ್ನೊಲ್ಲದೆ | ಬಯ್ವವರಂ ಶೂನ್ಯ ಹೃದಯರಂ ನಿರ್ದಯರಂ || ಮಯ್ವಾಂತು ಕೂಡಿ ನಡೆಯಲ್ | ನಾಯ್ವಾಲಂಬಿಡಿದು ತೊರೆಯನೀಸುವ

                ‌‌‌‌‌‌‌                   ಮಾರ್ಗಂ||                               ಎರಡು ಮೊರಂ ಬರಿಸಂ | ಕೆರೆತುಂಬಿದ ಮಣ್ಣನಿಕ್ಕಿ ಬೆಳೆವುದು ಪುತ್ತಂ| ಮರುಳಾಗಿ ಕೈಯ ನೋಡದೆ | ನೆರಎಯ ನಡುವಿರ್ದ ಕೈಯ ಬೆಳಸಾದವುದೇ || ಅಲ್ಲದ ಸತಿಯೊಡನಾಟಂ | ತಲ್ಲಣಿಸುವ ಭಯದ ಬಟ್ಟೆ ಕಳ್ಳರ ಸಂಗಂ | ಬಲ್ಲಿದರೊಡನೆ ವಿರೋಧಂ | ಕೊಲ್ಲದೆ ಮಾಣ್ಣಪುದೆ ಸುಕವಿಕರ್ಣಾಭರಣಾ ||