ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ]       ವೀರಣಾರಾಧ್ಯ              499     ತೊಳೆಗುವ ಫಣಿಕುಂಡಲಮಣಿಕಿರಣದ | ತೆಳುಗದಪಿನ         ನಗೆಮೊಗದತಿಸೊಬಗನೆ | ವಿಳಸಿತಚಂಪಕನಾಸಿಕಕುಡಿವುರ್ದಿನ ಸೊಗಸೊಪ್ಪುವನೆ ||       ಧಳಧಳಿಸುವ ಸಿತಭಸಿತಲಲಾಟನೆ | ಸೆಳೆಮಿಂಚೆನೆ           ಮಿಸುಗುವ ಜಡೆಮುಡಿಯೊಳು | ಫೋರುವೆಣ್ಣಾಳ್ವನೆ ರತಿಪತಿಕೋಟಿಯ ಪರವತಿಸೌಂದರನೆ | ಪರಮಪವಿತ್ರೆಗೆ ನಿರಘಚರಿತ್ರೆಗೆ | ಸುರರಿಪುಶಮನೆಗೆ           ಕರಿರಿಸುಗಮನೆಗೆ | ಶರಣಾಗತರಕ್ಷೆಗೆ ನಿರಪೇಕ್ಷೆಗೆ ಸರಸಿರುಹಾಂಬಕೆಗೆ ||           ಪರತರಶಕ್ತಿಗೆ ವರನಿಗಮೋಕ್ತಿಗೆ | ಸುರುಚಿವಿಶಾಲೆಗೆ ಶುಭ       ಗುಣಶೀಲೆಗೆ | ತರುಣಾರುಣರುಚಿಕಾಂತೆಗೆ ಶಾಂತೆಗೆ           ನಮಿಸುವೆ ಪಾರ್ವತಿಗೆ ||


            ಚೆನ್ನವೀರಣ್ಣಡೆಯ. ಸು. 1650       ಈತನು ಚೆನ್ನಬಸವನ ಮಿಶ್ರಪಟ್ಸ ಲದವಚನಗಳನ್ನು   ಸೇರಿಸಿದ್ದಾನೆ. ಇವನು ವೀರಶೈವಕವಿ; ಸುಮಾರು 1650ರಲ್ಲಿ     ಇದ್ದಿರಬಹುದೆಂದುತೋರುತ್ತದೆ.       ಇವನಿಂದ ಸಂಕಲಿತವಾದ ಗ್ರಂಥ           ಚನ್ನಬಸವನ ಮಿಶ್ರಷಟ್ಸ ಲದವಚನ.         ಇದರಲ್ಲಿ 250 ವಚನಗಳಿವೆ; ಒಂದೊಂದೂ ಪ್ರಾಯಿಕವಾಗಿ   ಕೂಡಲಚನ್ನಸಂಗಮದೇವ ಎಂದು ಮುಗಿಯುತ್ತದೆ. ಒಂದು     ವಚನವನ್ನು ಉದಾಹರಿಸುತ್ತೇವೆ-     ವೃಕ್ಷಾಶ್ರಮದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು ?     ಉಟ್ಟುದನ್ನುರ'ದು ಬತ್ತಲೆಯಿದ್ದರೇನು ? ಕಾಲರಹಿತನಾದರೇನ?   ಕರ್ಮರಹಿತನಾದರೇನು? ಕೂಡಲಚೆನ್ನಸಂಗಮನ             ಅನುಭಾವವಜಯದವರು ಏಸುಕಾಲವಿದ್ದರೇನು ವ್ಯರ್ಧ         ಕಾಣಿರೋ.

        ವೀರಣಾರಾಧ್ಯ ಸು. 650   ಈತನು ದಶಗ್ರಂಥಿಗೆ ಕನ್ನಡವ್ಯಾಖ್ಯಾನವನ್ನು ಬರೆದಿದ್ದಾನೆ.       ಇವನು ವೀರಶೈವಕವಿ, ವಿಶ್ವನಾಥಾಚಾರ್ಯನ ಮಗನು.         ಮೂಲವು ಇವನ ತಂದೆಯಿಂದ ರಚಿತವಾದುದು. ಇವನ       ವ್ಯಾಖ್ಯಾನಕ್ಕೆ ಶಿವಜ್ಞಾನಪ್ರದೀಪಿಕೆ ಎಂದು ಹೆಸರು. ಇವನು     ಸುಮಾರು 650   ರಲ್ಲಿ ಇದ್ದಿರಬಹುದು. ವ್ಯಾ