ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ]           ಮಲ್ಲು                 431

                  
                  ವನ

ವಸುಧೆಗೆ ಹೊಸಬಿಲ್ಲು ಎಸೆವರೆ ಹೊನ್ನಂಬು | ಮಸೆದಲಗಿನ ಈಟಿ ಸುರಗಿ | ಎಸೆವ ಮುಕ್ಕಣ್ಣ ಡೆಂಕಣಿಯ ಗುಂಡುಗಳಿ೦ದ | ವೊಸವನ ರಾಜಿಸುತಿಹುದು ||

                 ಬೇಡರು

ಉಟ್ಟ ಕಾಗಿನ ದಟ್ಟಿ ಮೆಟ್ಟಿದ ಎಕ್ಕಡ | ಇಟ್ಟು ಕೊಲ್ಲುವ ಬಡಿಕೋಲು | ಇಟ್ಟಿ ಸಬಳ ಬಿಲ್ಲಂಬು ಸುರಗಿಸಹ | ದಿಟ್ಟ ಶಬರರೊದಗಿದರು ||

             ಹೊಲತಿಯರ ಮಾತು 

ಹೊಲೆಯಿಂದ ಜನಿಸಿದ ಮಾನವರಲ್ಲದೆ | ಹೊಲೆಯಿಲ್ಲದಾರು ಹುಟ್ಟಿದರು | ಹೊಲಸಿನೊಳಗೆ ನವಮಾಸ ಬೆಳೆದು ಬಂದು | ಕುಲಕೆ ಹಾರುವರೆ ಬಲ್ಲವರು ||

             ಮಲ್ಲು. ಸು 1650 

ಈತನು ಪ್ರಸಾದಸಾಂಗತ್ಯವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ. ಇವನಿಗೆ ಮಲ್ಲಿಕಾರ್ಜುನ ಎಂಬ ಹೆಸರೂ ಉಂಟು. “ಕಡೆ ಮೊದಲಕ್ಷರವಡಿಪ್ರಸುಗಳೆಂಬ ಅಡಿವಜ್ಜೆಯ ಬೆಂಬಷಯ ಗೊಡವೆಯನ ಜಯ ಬಲ್ಲುದ ಮೃಡಶರಣರ ಕರುಣದಿ ಪೇಟೆ” ಎನ್ನುತ್ತಾನೆ. ಇವನ ಕಾಲವು ಸುಮಾರು 1650 ಆಗಿರಬಹುದೆಂದು ತೋರುತ್ತದೆ.

  ಇವನ ಗ್ರಂಥ
             ಪ್ರಸಾದಸಾಂಗತ್ಯ 

ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ 180 ಪದ್ಯಗಳಿವೆ. ಈ ಗ್ರಂ ಥದಲ್ಲಿ 'ಶರಣರು ಪಿಡಿದ ಪ್ರಸಾದಮಹಾತ್ತ್ಯ್ಮವ ವಿರಾಕಿಸುವೆನು' ಎಂದು ಕವಿ ಹೇಳುತ್ತಾನೆ. ಕಥಾಸಾರ – ಬೆಚವಾಡಿಯಲ್ಲಿ ಒಬ್ಬ ಗೌಡನ ಮನೆಯಲ್ಲಿ ಶಾಪದಿಂದ ಹಂದಿಯಾಗಿದ್ದ ಒಬ್ಬ ಗಂಧರ್ವನು ಜಂಗಮಪ್ರಸಾದವನ್ನು ತಿಂದುದರಿಂದ ಪೂರ್ವದೇಹವನ್ನು ಪಡೆದು ಕೈಲಾಸಕ್ಕೆ ಹೋದನು. ಮತ್ತೊಬ್ಬಗೌಡನ ಮನೆಗೆ ಒಬ್ಬ ಜಂಗ ಮಯ್ಯನು ಬಂದು ಹಿಟ್ಟನ್ನು ಎಂಜಲುಮಾಡಿ ಬಿಟ್ಟು ಹೋಗಲು ಗೌಡನ ಹೆಂಡತಿ ರೇಗಿ ಗಂಡನನ್ನು ಬೈದು ಊರಹೆಂಗಸರನ್ನೆಲ್ಲಾ ಕರೆದು ರಚ್ಚೆ ಮಾಡುತ್ತಾಳೆ. ಕವಿ ಇದನ್ನೆಲ್ಲಾ ಹಾಸ್ಯರಸಪ್ರಧಾನವಾಗಿ ಹಳ್ಳಿಯವರ ಮಾತಿನಲ್ಲಿ ಬರೆದಿದ್ದಾನೆ.