ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



   422                   ಕರ್ನಾಟಕ ಕವಿಚರಿತೆ              [17 ನೆಯ 

ಆರಂಭದಲ್ಲಿ ಕವಿ ಗುರುಲಿಂಗಜಂಗಮಕ್ಕೆ ವಂದಿಸುತ್ತಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ.

    ಬಾಳೆಯಕಾಯಂಗೆ ಕೈಯ ಬೆರಳಭಾವ | ಜೋಲುದುಟಿಯ ಮೆಳ್ಳೆಗಣ್ಣು | 
    ಹೇಳಿ ಮಾಡಿದಹಾಗೆ ಮೂಗು ಸೊಲಗೆಯಂತೆ | ಜೋಲುವ ಮೊಲೆ ಹನಿಗಣ್ಣು ||
    ಹೊಳಹಲ್ಲು ಉಳುಗುಮುಖವು ಬಾಗಿದ ಬೆನ್ನು | ತರಟುದಲೆಯು ಮೂಳಗಿ 
                                                ವಿಯು |}
    ಪಳಿಹೊಟ್ಟೆ ಮೊರಗಿವಿ ಬಾಯ ಬಾನೆಯ ಚೆಲ್ವೆ | ಒರಲಿ ಹೇಳಿದಳು ಊ
                                                ರೊಳಗೆ ||
    ಮತ್ತೊಬ್ಬನ ಕೂಡಿ ಹತ್ತು ತಿಂಗಳು ಇದ್ದ | ಸತ್ತನು ನನ್ನ ಕಾಟದಲಿ | 
    ಬತ್ತದೋಗರಹಾಲುದೋಸೆಗಳನು ಮೆದ್ದು | ಅತ್ತತ್ತು ಅವಗೆ ಬೇಸತ್ತೆ ||
    ಅಂಬಲಿಯಲ್ಲದೆ ಉಂಬರೆ ಕೂಳೆಲ್ಲ | ಕಂಬಳಿಗಳ ಹೊದ್ದಿಹೆವು | 
    ತಿಂಒರೆ ಬಾಯಿಗೊಂದೆಲೆಯಡಕೆಕಾಣೆವು | ತೊಂಬರೆ ಬದುಕು ಕೇಳ್ ನಮಗೆ ||


                    ಚೆನ್ನಣ, ಸ, 1650 
  ಈತನು ವೀರೇಶ್ವರಚರಿತೆಯನ್ನು ಬರೆದಿದ್ದಾನೆ. ಇವನು ವೀರಶೈವ ಕವಿ; ತನ್ನ ಪರಂಪರೆಯನ್ನು ಹೀಗೆ ಹೇಳುತ್ತಾನೆ: ವೀರಶೈವಾಚಾರ್ಯ ಮಾಹೇಶವಾದರಸ, ಮಗ ರಾಮೇಶಗುರು, ಮಗ ಸೋಮೇಶ್ವರ, ಮಗ ಚೆನ್ನಣಕವಿ, “ಸುವಿವೇಕಿ ರಸಿಕರದೇವ ಚೆನ್ನಣಸತ್ಕವಿರಾಯ”ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ಇವನು ಸುಮಾರು 165೦ ರಲ್ಲಿ ಇದ್ದಿರಬಹುದು.
       ಇವನ ಗ್ರಂಥ
                       ವಿರೇಶ್ವರಚರಿತ.
ಇದು ಸಾಂಗತ್ಯದಲ್ಲಿ ಬರೆದಿದೆ. ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ 3 ಸಂಧಿಗಳಿವೆ, ಕಥಾಗರ್ಭವನ್ನು ಈ ಪದ್ಯದಲ್ಲಿ ಸೂಚಿಸಿದ್ದಾನೆ
   ಹರ ವಿರಹಿತಯಾಗವ ಮಾಡೆ ದಕ್ಷನು ! ಪುರಮಧನನು ಕೋಪಿಸಲು!
   ವರವೀರಭದ್ರನು ಗೆದ್ದ ಕಧನವ ಎ | ಸ್ತರಿಪೆನು ಸುಚಿನರಾಲಿವುದು !