ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ಶತಮಾನ           ಕವಿಮಾದಣ್ಣ.                        ೪೩೮


                   ವೀರಣಾರ್ಯ ಸು. 1650 
    ಈತನು ಪ್ರಸಾದಚಾರಿತ್ರವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ; ತನ್ನ ವಂಶಪರಂಪರೆಯನ್ನು ಹೀಗೆ ಹೇಳುತ್ತಾನೆ-ಕೊಲ್ಲಿಪಾಕಿಯ ಸೋಮೇಶ್ವರ, ಮಗ ರೇಣುಕ, ಮಗ ದೇವಣಾರಾಧ್ಯ, ಇವನ ತಮ್ಮ ಶಾಂತೇಶ್ವರ, ಇವನ ಮಗ ಕವಿ ವೀರಣಾರ್ಯ, ಇವನ ಕಾಲವು ಸುಮಾರು 1650 ಆಗಿರಬಹುದು ಪೂರ್ವಕವಿಗಳಲ್ಲಿ ಹರಿಹರ, ರಾಘವಾಂಕ, ಪದ್ಮ ರಸ, ಉದ್ಭಟ, ಸೋಮನಾಥ ಇವರುಗಳನ್ನು ಸ್ತುತಿಸಿದ್ದಾನೆ.
   ಇವನ ಗ್ರಂಥ
                  ಪ್ರಸಾದಚಾರಿತ್ರ
   ಇದು ಸಾಂಗತ್ಯದಲ್ಲಿ ಬರೆದಿದೆ. ಇದರಲ್ಲಿ ಪ್ರತಿಪಾದಿತವಾದ ವಿಷಯವನ್ನು ಕವಿ ಈ ಪದ್ಯದಲ್ಲಿ ಸೂಚಿಸಿದ್ದಾನೆ.
   ಈಮಹಾಕೃತಿಯಾವುದೆನೆ ಚರಲಿಂಗದು | ದ್ದಾಮಪ್ರಸಾದ ಶಂಕರಗೆ |
   ಪ್ರೇಮದೆ ಕುಡಬಹುದೆಂದು ವೇದಾಗಮ | ಸ್ತೋಮ ರಾಜಿಪ ಚಾರುಚರಿತಿ ||


                        ಕವಿಮಾದಣ್ಣ, ಸು 1650
    ಇವನು ನನ್ನಯ್ಯಗಳ ಚಾರಿತ್ರವನ್ನು ಬರೆದಿದ್ದಾನೆ, ಈತನು ವೀರಶೈವಕವಿ; ಭಾರದ್ವಾಜ ಗೋತ್ರದವನು. ಇವನ ಗುರು ರಾಮನಾಥ, ತಂದೆ ಅಲ್ಲಪ, ತಾಯಿ ಮಲ್ಲಿಯಕ್ಕ, ಸ್ಥಳ ವಾಮತಿರಪುರ, ಇವನು ಸುಮಾರು 1650ರಲ್ಲಿ ಇದ್ದಿರಬಹುದೆಂದು ತೋರುತ್ತದೆ.
  ಇವನ ಗ್ರಂಥ
                 ನನ್ನಯ್ಯಗಳ ಚಾರಿತ್ರ 
  ಇದು ಚಂಪೂರೂಪವಾಗಿದೆ ; ಸಂಧಿ 5, ಇದರಲ್ಲಿ ಬಸವನ ಸಮ ಕಾಲದವನಾದ ನನ್ನಯ್ಯ ಎಂಬ ಶಿವಭಕ್ತನ ಚರಿತವು ಹೇಳಿದೆ.
      ಕಥಾಸಾರ-ಒಡ್ಡಿಯದೇಶದ ಕರ್ಣಿಕಾಪುರವಾಸಿಯಾದ ನನ್ನಯ್ಯನು ತನ್ನ ಗುರುವಾದ ಸುಜ್ಞಾನಿಯ ತಲೆ ಹೋಯಿತೆಂದು ಭ್ರಮಿಸಿ ತನ್ನ ತಲೆಯನ್ನು ಕತ್ತರಿಸಿ ಕೊಳ್ಳುವುದಕ್ಕೆ ಪ್ರಯತ್ನಿಸಿದಾಗ ಇವನ ಗುರುಭಕ್ತಿಗೆ ಮೆಚ್ಚಿ ಶಿವನು ಇವನನ್ನು ಕೈಲಾಸಕ್ಕೊಯ್ದನು.
      ತನ್ನ ಗ್ರಂಥದವಿಷಯವಾಗಿ ಕವಿ ಹೀಗೆ ಹೇಳುತ್ತಾನೆ.
      ೬೫