ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


446 ಕರ್ಣಾಟಕ ಕವಿಚರಿತ [17ನೆಯ ಕೊರಗಿವುದೇ ತಪಂ ಪೆಜರ ಜೀವಿತಮಂ ಪರಿದಿಕ್ಕುನಂದಮೇ || ಪರತರಶೀಲ ಮಾದರಿಸಿ ಲೋಗರವರ್ಮಮನೆಯ್ದೆ ಭೇದಿರ್ವೊ | ದಿರವೆ ಪೊರ ಬ್ದಿ ಚಾನಮೆನೆ ದುರ್ಜನತಾಪಸನೇಂ ಕೃತಾರ್ಧನೋ || ೧, ಬಸವರಾಜವಿಜಯ ಇದೂ ಚಂಪೂಗ್ರಂಥ; ಆಶ್ವಾಸ 42. ಇದಕ್ಕೆ ವೃಷಭೇಂದ್ರವಿಜಯ ಎಂಬ ಹೆಸರು ರೂಢಿಯಾಗಿದೆ, ಇದರಲ್ಲಿ ಬಸವನ ಚರಿತ್ರವು ವರ್ಣಿ ವಾಗಿದೆ. ಈ ಚರಿತ್ರವನ್ನು ಮೊದಲು ಪಾಲ್ಕುರಿಕೆ ಸೋಮನಾಥನು ತ೦೨ ಗಿನಲ್ಲಿ ಬರೆದನು; ಅದನ್ನು ಭೀಮಕವಿ ಕನ್ನಡದಲ್ಲಿ ವರ್ಣಕಗ್ರಂಥವಾಗಿ ಮಾಡಿದನು; ಶಂಕರಕವಿ ಸಂಸ್ಕೃತಕ್ಕೆ ಪರಿವರ್ತಿಸಿದನು; ಆ ಕಥಯನ್ನೇ ತಾನು ಕನ್ನಡದಲ್ಲಿ ಚಂಪೂರೂಪವಾಗಿ ರಚಿಸಿದಂತೆ ಕವಿ ಹೇಳುತ್ತಾನೆ. ಈ ಕಾವ್ಯದ ಉತ್ಕೃಷ್ಟತೆಯನ್ನು ಈ ಪದ್ಯದಲ್ಲಿ ತಿಳಿಸಿದ್ದಾನೆ:- ಸರಸತರಂ ಪ್ರಸನ್ನವದನಂ ಬುಧಸನ್ನು ತಸಾರವೃತ್ತವಿ | ಸ್ಫುರಿತಮುದಾತ್ತ ಸಾರಗಣಮನ್ವಿತಲಕ್ಷಣಲಕ್ಷಿತಂ ಸುಭಾ | ವರುಚಿನಿರಸ್ತ್ರ ರೋಷವಿರಪಂ ಶಿವತಾಯುತ ಮರ್ಧದಾಯಿ ಬಂ | ಧರಬಸವೇಶನಂತೆಸೆವುದೀನವಕಾವ್ಯಮಿಳಾತಳಾಗ್ರಗೊಳ್ ||. ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇಶ, ಷಣ್ಮುಖ, ವೀರಭದ್ರ ಇವರುಗಳನ್ನು ಹೊಗಳಿ ಅನಂತರ ಬಸ ವನೇ ಮೊದಲಾದ ಗುರುಗಳನ್ನು ಸ್ತುತಿಸಿದ್ದಾನೆ, ಆಶ್ವಾಸಗಳ ಕೊನೆಯಲ್ಲಿ ಈ ಗದ್ಯವಿದೆ:- ಇದು ವಿನಮದಖಿಳಸುರಾಸುರೇಂದ್ರಮಕುಟತಟಘಟಿತಮಣಿಗಣಾಗಣಿತರುಚಿನಿ ಚಯತರುಣಾರುಣಾತಪಪರಿಸಿತಪರಮ ಶಿವಲಿಂಗಪಾದಾರವಿಂದಪರಾಗಭಸಿತಭಾಸುರಲ ಲಾಟಪಟ್ಟ ಸರಸಜನಮಾನಿತೋಭಯ ಕವಿತಾ ವಿಶಾರದ ಶ್ರೀಷಡಕ್ಷರದೇವಭಕ್ತಿವಿರಚಿತ ಶ್ರೀಮದ್ಭಸವರಾಜವಿಜಯಮಹಾ ಪುರಾಣದೊಳ್. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:_- 1, Vol, 1, 142, 2 ಬಸವ, ಚೆನ್ನಬಸವ, ಪ್ರಭುದೇವ, ರೇಣುಕ, ಚತುರಾಚಾರ್ಯರು, ಪ್ಂಡಿತತ್ರಯ, ಸಿದ್ಢರಾಮ ಮಾದೇವಿ, ಭೈಂಗಿ, ತೋಂಟದಗುರು, ಅರವತ್ತುಮೂವರು, ಪುರಾತನರು.