ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಷಡಕ್ಷರದೇವ

                                                           ಕೈಲಾಸ
ಸಸಿಗದಿರಂ ಕಾಳಲ್ಟಿ ಶಶಿಕಾಂತದ ಕಾಂತಿಯನೀಳ್ದುಕೊಂಡು ಬೆ |
ಳ್ಫಸದಳಮಾದ ಶಾರದೆಯ ಮೆಯ್ವೆಳಗಂ ತೆಗೆದಿಂಗಡಲ್ಗೆ ರಂ ||
ಜಿಸುವ ಸಿತದ್ಯುತಿಪ್ರಸರಮಂ ಕವರ್ದೊಂದ ನೆಮಾಡಿ ಬೊಮ್ಮನೊ !
ಲ್ದೆಸಗಿದ ಶೈಲಮೋ ಎನಿಸಿ ಪಜ್ಜಳಿಸಿರ್ದುದು ತಾರಭೂಧರಂ ||
                                                     ಮಾವಿನ ಮರ
ಅಳಿಕುಳಮಿಂದ್ರನೀಲಮಣಿರಾತಿ ಪಸುರ್ಮಿಡಿ ಪಚ್ಛೆ ಪಲ್ಲವಾ |
ವಳಿ ಪವಳಂಗಳೊರ್ಬುಳಿ ಮಡಲ್ತೆಳಮಲ್ಲಿಗೆಯಚ್ಚಮೊಗ್ಗೆ ಪ ||
ಜ್ಜಳಿಸುವ ಮುತ್ತು ಕೆಂಬೊಗರನಾಲ್ದ ಪಳಂ ಪೊಸರನ್ನ ಮಾಗೆ ಮ౦
ಚುಳತಗಪಂಚರತ್ನ ಗೃಹಮಾದುದು ಕಾಮನ್ನಪಂಗೆ ಮಾಮರಂ ||
                                                     ಗಂಗಾಂಬಿಕೆ
ಕುಂದುವ ಮೊಲ್ಲೆಯ ಮುಗುಳಂ | ಕುಂದದ ಮುಗುಳೆಂದು ನುಡಿವುದನುಚಿತಮಿ
                                                                                                     ಳೆಯೊಳ್ |
ಕುಂದದ ಚಂದದ ದಶನಂ | ಕುಂದದ ಮುಗುಳಲ್ತೆ ತನ್ಮృದುಸ್ಮಿ ತಲತೆಯಾ ||
                                                       ಚಂದ್ರ

ಮಿಸುಗುವ ಸಂಜೆಗೆಂಪು ತಳಿರಂತಿರೆ ತಾರಗೆ ಪುಷ್ಪದಂತೆ ರಂ | ಜಿಸೆ ಪೊಸಮರ್ಬದರ್ಕೆ ರಗಿದಾರಡಿಯಂತಿರೆ ತಾರಕಾದ್ವಮೆಂ || ಬಸದೃಶವೃಕ್ಷದೊಳ್ ಪವಳವಣ್ಣ ಮನಾಳ್ದಿನಿವಣ್ಣಿದೆಂಬ ಪೆ೦ |

ಪಸದಳಮಾಗೆ ತಾಂ ಕ್ರಮದೆ ಕಾಣಿಸುತಿರ್ದುದು ಚಂದ್ರಮಂಡಲಂ ||
                                                               ಸೂಳೆ
ಕ್ಷಣರುಚಿ ಜಲಲಿಪಿ ಮುಗಿಲೋ| ಡ್ಡಣೆಯ ನೆಳಲ್ ಕರಕಮಿಂದ್ರಚಾಪಂ ಸಂಧ್ಯಾ।
ರುಣರುಚಿ ಚಿರಮಾದೊಡಮೀ | ಗಣಿಕಾಸಂಪ್ರೀತಿಯೊರ್ಮೆ ಚಿರಮಾದವುದೆ ||
                                                                 ಭಕ್ತಿ
ಶರನಿಧಿ ಜಾನುದಘ್ನ ಮುರಿವಗ್ನಿ ಹಿಮಂ ಘನಮೃತ್ಯು ತೊಳ್ತು ಭೀ |
ಕರತರಮೇಘವಹ್ನಿ ಕುಸುಮಂ ಗರಳಂ ಸುಥೆ ಕರ್ಮಪಾಶಮಂ || 

ಬುರುಹಗುಣಂ ಸರೋಜಭವದುರ್ಲಿಪಿ ವಾರ್ಲಿಪಿ ಕಾಯಜಂ ತೃಣಾಂ |

ಕುರಮಣಿಮಾಡಿಸಿದ್ದಿ ಯಣುವುವಪ್ಪುದು ಭಕ್ತಿರತ೦ಗೆ ಲೋಕದೋಳ್ ||