ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಷಡಕ್ಷರದೇವ
ಕೈಲಾಸ ಸಸಿಗದಿರಂ ಕಾಳಲ್ಟಿ ಶಶಿಕಾಂತದ ಕಾಂತಿಯನೀಳ್ದುಕೊಂಡು ಬೆ | ಳ್ಫಸದಳಮಾದ ಶಾರದೆಯ ಮೆಯ್ವೆಳಗಂ ತೆಗೆದಿಂಗಡಲ್ಗೆ ರಂ || ಜಿಸುವ ಸಿತದ್ಯುತಿಪ್ರಸರಮಂ ಕವರ್ದೊಂದ ನೆಮಾಡಿ ಬೊಮ್ಮನೊ ! ಲ್ದೆಸಗಿದ ಶೈಲಮೋ ಎನಿಸಿ ಪಜ್ಜಳಿಸಿರ್ದುದು ತಾರಭೂಧರಂ || ಮಾವಿನ ಮರ ಅಳಿಕುಳಮಿಂದ್ರನೀಲಮಣಿರಾತಿ ಪಸುರ್ಮಿಡಿ ಪಚ್ಛೆ ಪಲ್ಲವಾ | ವಳಿ ಪವಳಂಗಳೊರ್ಬುಳಿ ಮಡಲ್ತೆಳಮಲ್ಲಿಗೆಯಚ್ಚಮೊಗ್ಗೆ ಪ || ಜ್ಜಳಿಸುವ ಮುತ್ತು ಕೆಂಬೊಗರನಾಲ್ದ ಪಳಂ ಪೊಸರನ್ನ ಮಾಗೆ ಮ౦ ಚುಳತಗಪಂಚರತ್ನ ಗೃಹಮಾದುದು ಕಾಮನ್ನಪಂಗೆ ಮಾಮರಂ || ಗಂಗಾಂಬಿಕೆ ಕುಂದುವ ಮೊಲ್ಲೆಯ ಮುಗುಳಂ | ಕುಂದದ ಮುಗುಳೆಂದು ನುಡಿವುದನುಚಿತಮಿ ಳೆಯೊಳ್ | ಕುಂದದ ಚಂದದ ದಶನಂ | ಕುಂದದ ಮುಗುಳಲ್ತೆ ತನ್ಮృದುಸ್ಮಿ ತಲತೆಯಾ || ಚಂದ್ರ
ಮಿಸುಗುವ ಸಂಜೆಗೆಂಪು ತಳಿರಂತಿರೆ ತಾರಗೆ ಪುಷ್ಪದಂತೆ ರಂ | ಜಿಸೆ ಪೊಸಮರ್ಬದರ್ಕೆ ರಗಿದಾರಡಿಯಂತಿರೆ ತಾರಕಾದ್ವಮೆಂ || ಬಸದೃಶವೃಕ್ಷದೊಳ್ ಪವಳವಣ್ಣ ಮನಾಳ್ದಿನಿವಣ್ಣಿದೆಂಬ ಪೆ೦ |
ಪಸದಳಮಾಗೆ ತಾಂ ಕ್ರಮದೆ ಕಾಣಿಸುತಿರ್ದುದು ಚಂದ್ರಮಂಡಲಂ || ಸೂಳೆ ಕ್ಷಣರುಚಿ ಜಲಲಿಪಿ ಮುಗಿಲೋ| ಡ್ಡಣೆಯ ನೆಳಲ್ ಕರಕಮಿಂದ್ರಚಾಪಂ ಸಂಧ್ಯಾ। ರುಣರುಚಿ ಚಿರಮಾದೊಡಮೀ | ಗಣಿಕಾಸಂಪ್ರೀತಿಯೊರ್ಮೆ ಚಿರಮಾದವುದೆ || ಭಕ್ತಿ ಶರನಿಧಿ ಜಾನುದಘ್ನ ಮುರಿವಗ್ನಿ ಹಿಮಂ ಘನಮೃತ್ಯು ತೊಳ್ತು ಭೀ | ಕರತರಮೇಘವಹ್ನಿ ಕುಸುಮಂ ಗರಳಂ ಸುಥೆ ಕರ್ಮಪಾಶಮಂ ||
ಬುರುಹಗುಣಂ ಸರೋಜಭವದುರ್ಲಿಪಿ ವಾರ್ಲಿಪಿ ಕಾಯಜಂ ತೃಣಾಂ |
ಕುರಮಣಿಮಾಡಿಸಿದ್ದಿ ಯಣುವುವಪ್ಪುದು ಭಕ್ತಿರತ೦ಗೆ ಲೋಕದೋಳ್ ||