ಈ ಪುಟವನ್ನು ಪರಿಶೀಲಿಸಲಾಗಿಲ್ಲ.
469 ಕರ್ಣಾಟಕ ಕವಿಚರಿತೆ [17ನೆಯ
ತಿರುಮಲೆಯಾರ್ಯ೦” ಎಂಬುದರಿಂದ ಈತನು ಚಿಕ್ಕದೇವರಾಜನ ವಿಶೇಷ ಪ್ರೀತಿಗೆ ಪಾತ್ರನಾಗಿದ್ದಂತ ತಿಳಿಯುತ್ತದೆ. ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸ, ಶುಕ ಇವರುಗಳನ್ನು ಸ್ಮರಿ ಸಿದ್ದಾನೆ. ಇವನ ತಮ್ಮನಾದ ನಿಂಗರಾರ್ಯನು ತನ್ನ ಮಿತ್ರವಿಂದಾಗೋವಿಂದ ದಲ್ಲಿ ಈತನ ಪಾಂಡಿತ್ಯವನ್ನು ಹೀಗೆ ಸ್ತುತಿಸಿದ್ದಾನೆ- ಫಣಿಪತಿಭಾಷ್ಯದಾಗರುಡಿಯೊಳ್ ಪದಚಾರಿಗೆರೂಢಿಗೆಯ್ದಣಂ | ಕಣಚರಣೋಕ್ಕಿಜೈಮಿನಿಯವಾಣಿಗಳಿ೦ ಮಿಗೆ ತಾಳಿಜಾಣೆಯಂ || ಪ್ರಣುತಿಸೆ ಭಾವುಕರ್ ತಿರುಮಲಾರ್ಯಸರಸ್ವತಿ ಸಾರ್ಚಿ ಚಿತ್ತಮ೦ | ತಣಿಯದೆ ರಂಗನಾಧನೊಳೆ ನರ್ತಿಸುಗುಂ ಶ್ರುತಿಮೌಳಿರಂಗದೊಳ್ || ಪಿರಿದುಂ ಪ್ರೌಢತ್ವಮಂ ಪೆರ್ಕಳಿಕೆ ಕವಿವರರ್ ಕಬ್ಬದೊಳ ಶಾಸ್ತ್ರದೊಳ್ ಮೇಣ್ | ಕರಾಸಾಹಿತ್ಯದೊಳ್ ಬಿತ್ತರಿಪೊಡೆ ರಸಮಂ ತಿರ್ಮಲಾರ್ಯರ್ಗೆ ಸಲ್ಲು೦ || ತರಇನ್ನೊತಂಗಳೇನಾಡವೆ ವಿಧುಮಣಿಯಲಿ ಖೆಳ್ ನೈದಿಲೊಳ್ ಮತ್ತವಂ ತಾಂ | ಕರಗಿಪ್ಪಂ ಬಿರ್ಚುವಂ ಚಂದಿರನೆ ಉಳಿದವರ್ಗೆ೦ತೊಸಗ್ಗ೯೦ ಮಲಗ್ಗು೯೦ || ದೇವಚಂದ್ರನ ರಾಜಾವಳೀಕಥೆಯಲ್ಲಿ (1838) ಚಿಕ್ಕದೇವರಾಜ, ಅವನ ಕಾಲದಲ್ಲಿದ್ದ ಕೆಲರು ಪಂಡಿತರು ಇವರುಗಳ ವಿಷಯವಾಗಿ ಹೀಗೆ ಬರೆದಿದೆ- ಚಿಕದೇವರಾಜರಸಂ ಕೋಎದಶಿಖಾಮಣಿಯೆನಿಸಿದಂ ; ತಿರುಮಲಾರ್ಯ೦ ವಿದ್ಯಾ ವಿಶಾರದನೆನಿಸಿದಂ ; ವಿಶಾಲಾಕ್ಷಂ ಸಾಹಿತ್ಯಭಾರತಿಯೆನಿಸಿದಂ ; ಷಡಕ್ಷರಿ ಕವಿಶೇಖ ರನನಿಸಿದಂ, ಇವನ ಗ್ರಂಥಗಳಲ್ಲಿ 1 ಚಿಕದೇವರಾಜವಿಜಯ ಇದು ಚಂಪೂರೂಪವಾಗಿದೆ; ಅಲ್ಲಲ್ಲಿ ಕೆಲವು ತ್ರಿಪದಿಗಳ ಸಂಗ ತ್ಯಗಳೂ ಹಾಡುಗಳೂ ಇವೆ. ಮುದ್ರಿತವಾಗಿರುವ ಪುಸ್ತಕದಲ್ಲಿ 6 ಆಶ್ವಾ ಸಗಳಿವೆ. ಗ್ರಂಥ ಅಸಮಗ್ರ. ಇದರಲ್ಲಿ ಮೈಸೂರು ಮಹಾರಾಜರುಗಳ ಚರಿತ್ರವು ಚಿಕ್ಕದೇವರಾಜನವರೆಗೆ ಹೇಳಿದೆ. ತನ್ನ ಗ್ರಂಥದ ಉತ್ಕ್ರುಶ್ತತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿ ಕೊಂಡಿದ್ದಾನೆ-