ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ ತಿರುಮಲಾರ್ಯ. 443
ಸುಱುದು ಕುರುಳಳ್ಳೊಳ್ ತೊಳಗಿ ನುನ್ಬಣೆಯೊಳ್ ಕುಡಿಗೊಂಡು ಪುರ್ಬಿನೊಳ್|
ಪೊಳೆದೆಸೞಣನ್ಗಳೊಳ್ ಮುಗುಳು ಮೆಲ್ನಗೆಯೊಳ್ ಪೂಗರೇಯಿೞು ಗಲ್ಲದೊಳ್ ||
ಬಳೆದು ಕುಚೆಂಗಳೊಳ್ ನವೆದು ನಲ್ನಡುವಲಿ ಕಡುರಯ್ಯಮಾಗಿ ಕ |
ಣೊಳಿವುದು ನಲ್ನಳಾಕೃತಿಯುಮಿಕೃತಿಯುಂ ಪವನೊಂದಿದಂದದಿಂ ||
ಕಂದೇ ಕವಿಕೋಕಿಲಮಾ | ಕಂದಂ ಕೊಮಳವಿಕಾಸಿಕೃತಿಕಲ್ಪಲತಾ |
ಕಂದಂ ವಿಸೃಮರರಸದು | ಕಂದಂ ಚಿಕದೇವರಾಯಚಂದನ ಚಂದಂ ||
ಗ್ರಂಥಾವತಾರದಲ್ಲಿ ವಿಷ್ಣುಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ , ಸುದ
ರ್ಶನ, ಪಾಂಚಜನ್ಯ, ಸೂರಿಗಳು, ದಿವ್ಯಸೂರಿಗಳುಇವರುಗಳನ್ನು ಸ್ತುತಿಸಿ,
ಸತ್ಕವಿಸ್ತುತಿ ದುಷವಿನಿಂದೆಗಳನ್ನು ಮಾಡಿ ಗ್ರಂಧವನ್ನು ಆರಂಭಿಸಿದ್ದಾನೆ.
ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ -
ಇದು ಯದುಗಿರಿಶಿಖರಾಭರಣಶ್ರೀಮನ್ನಾರಾಯಣಚರಣಪರಿಚರಣಸರಾಯಣ
ಶರಣಾಗತರಕ್ಷಣವಿಚಕ್ಷಣ ಸಕಲಕಲಾಪ್ರವೀಣ ಬಿರುದೆಂತೆಂಬರಗಂಡ ಲೋಕೈಕವೀರ
ಭೂರಿತುರುಷ್ಕಶುಷ್ಕವನದಾವಾನಲ ಮರಾಟಝಾಟಮೇಘಚ್ಚಟಾವಿಘಟನನಿರಾಘಾಟ
ಪ್ರಳಯಕಾಲಜಂಝನಿಲ ಪಾಂಡ್ಯಮಂಡಲಾಧಿಪನೇತಂಡವಿಲುಂರನಕ೦ರರೀರವ ಮಲೆಪ
ನೃಸಮದಮರ್ದನ ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರಪ್ರೌಢವ್ರುತಾಪನವ್ರ
ತಿಮವೀರನರಸತಿ ಶ್ರೀಚಿಕದೇವಮಹಾರಾಜಕೃಪಾಪರಿಪಾಲಿತ ಶ್ರೀತಿರುಮಲೆಯಾರ್ಯವಿರ
ಚಿತಮಪ್ಪ ಚಿಕದೇವರಾಜವಿಜಯಮಹಾಪ್ರಬಂಧದೊಳ್.
ಈ ಗ್ರಂಥವು ಕಾವ್ಯಸರಣಿಯಲ್ಲಿ ಮೈಸೂರುಚರಿತ್ರೆಯನ್ನು ತಿಳಿಸು
ವುದರಿಂದ ಮೈಸೂರುಚರಿತ್ರವನ್ನು ಬರೆವವರಿಗೆ ಸಹಾಯಕವಾಗಿದೆ; ಬಂಧ
ವೂ ಪ್ರೌಢವಾಗಿದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆ
ಯುತ್ತೇವೆ-
ಕವಿಗಳ ಮಹಿಮೆ
ಕಡುಪಿ೦ ಕೂರಾನೆ ಕಾಱಚಡವಿಬಜಿಸಿಡಿಮಿಂಚೆಂಬಿವೆಲ್ಲ೦ |
ಪಡೆಗುಂ ನೋಳರ್ಗೆ ಮೇಣುಬ್ಬಿಗದೆದವನವೇ ಮತ್ತೆ ಮೊಳಬ್ಬದೊಳ್ ಬಂ ||
ದೊಡನೆಳ್ಳಂ ಪೆತ್ತುಮಾಱು೦ ಸಹೃದಯಹೃದಯಾಹ್ಲಾದಮಂ ನಾಡೆಯೆಂತಾ |
ದೊಡಮಳ್ಳೇಂ ಕಬ್ಬಿಗರ್ ತಾಮಘಟಿತಘಟನಾನೂತನಬ್ರಹ್ಮರಲ್ತೆ ||