ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

478 ಕರ್ಣಾಟಕ ಕವಿಚರಿತ. [17 ನೆಯ

                       ಉದ್ಯಾನ
ಎಳಲತೆ ತೀವಿ ತೋರ್ಪ ಪೊನಮಲ್ಲಿಗೆ ಮಲ್ಲಿಗೆಹೌಸವಕ್ಕೆ ಮಂ |
ಡಳಿಸುವ ತುಂಬಿ ತಂಬಿಗಳನೊಬೈಳಗಾಳಿ ಗಾಳಿಯಿಂ || 

ಬಳಸಿದ ತಣೊಳಂ ಕೊಳದೊಳುಳ್ಳಲವ್ಮಂಬುಮಂಬುಜಂಗಳಂ | ಕಳುವದಿಂ ಕರ್ದುಂಕುವರಸಂಜೆಗಳೊಪ್ಪು ಗುವೂವನಾಂತದೊಳ್|

                           ಕಬ್ಬು

ನಳಿನಶರಂ ಸುಧೆಯಂ ಪೊಂ | ಗೊಳವಿಗಳೊಳ್ ತೀವಿ ಬೆಳ್ಳಿಯಿಂ ಬಿಗಿದು ಶುಕಂ।

ಗಳ ಕಾಪನಿಟ್ಟ ವೋಲ್‌ ಕ | ಣೊಳಿಕುಂ ಪುಂಡೋರ್ಕ್ಷು ದಂಡತತಿ ಗರ್ದೆಗಳೊಳ್ ||
                             ಚಕ್ರ
ಪರತರಪಣ್ಯಜನೋತ್ಸವ | ಸರಮಾಗಿ ಸುದರ್ಶನಂ ಸದಾ ಹರಿಕರಭಾ |
ಸುರವಾಗಿ ಚಕ್ರಮೆನಿಸಿದ | ಸರಸರಥಾಂಗಂ ಪ್ರಸನ್ನ ಮಕ್ಕೆ ಮಗಂದುಂ ||
                           ಅನಂತ 

ನವನೀಲೋತ್ಪಲರಾಜಿ | ಚ್ಚವಿರಂಜಿತಫೆನರಾಶಿಯೆನೆ ಶಯಿತರಮಾ | ಧವತನುಕಾಂತಿಶಿಷ್ಟಂ | ಸವಿಲಾಸವನಂತವೀಗೆ ಮದ್ಯಾಂಛಿತಮಂ ||

       5 ಇದೇ ವಿಷ್ಣು ಪುರಾಣವನ್ನು ಕವಿ ಗದ್ಯರೂಪವಾಗಿಯೂ ಬರೆ ದಿದ್ದಾನೆ.
                     6 ದಿವ್ಯಸೂರಿಚರಿತೆ
      ಇದೂ ಚಂಪೂಗ್ರಂಥ; ಆಶ್ವಾಸ 14, ಗದ್ಯಪದ್ಯಸಹ 828. ಇದರಲ್ಲಿ ವಿಷ್ಣು ಭಕ್ತರಾದ ಪನ್ನಿರ್ವರು ಆಳ್ವಾರುಗಳ ಚರಿತೆ ಹೇಳಿದೆ. ದ್ರಾವಿಡಭಾಷೆಯಲ್ಲಿದ್ದ ಈ.ಕರಿತೆಯನ್ನು ಚಿಕ್ಕದೇವರಾಜನ ಇಷ್ಟನುಸಾರವಾಗಿ ಕನ್ನ ಡಿಸಿದಂತೆ ಕವಿ ಹೇಳುತ್ತಾನೆ ಈ ಗ್ರಂಧದ ಉತ್ಮತೆಯನ್ನು ಈ ಪದ್ಯದಲ್ಲಿ ಹೇಳಿದ್ದಾನೆ___

ಚೆಂದಳಿಜೊಂಪದಂತೆ ಫೋನಲ್ಲಿಗೆ ತೂವಿನ ಕಂಪಿನಂತೆ ಮಾ |

ಕಂದದ ಗುಂಪಿನಂತೆ ವಿಕಚಾಂಬುಜರಾಜೆಯಲಂಪಿನಂತೆ ಶ್ರೀ || ನಚದದಣ್ಣಿನಂತೆ ಮಲಯಾನಿಲನೊವುವ ತಣ್ಣಿನಂತೆ ಸೈ ||
ಪಿಂದೆ ರಸಜ್ಞ ಚಿತ್ತ ಕತಿಮೋದಮನೀಕೃತಿಯಿಾವುದಾವಗಂ |