ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಚಿಕ್ಕು ಪಾಧ್ಯಾಯ. 479 ಗ್ರಂಧಾವತಾರದಲ್ಲಿ ರಂಗನಾಥಸ್ತುತಿ ಇದೆ. ಬಳಿಕ ಕವಿ ರಂಗ ನಾಯಕಿ; ಶಂಖ, ಚಕ್ರ, ಗದೆ, ಖಡ್ಗ, ಶಾರ್ಟ್ಸ್, ಕೌಸ್ತುಭ, ವೈಜಯಂತಿ, ಅನಂತ, ಗರುಡ, ವಿಷ್ವಕ್ಸನ, ಸನ್ನಿರ್ವರು ಆಳ್ವಾರುಗಳು, ಭಾಷ್ಯಕಾರ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ. ಆಶ್ವಾಸಗಳ ಕೊನೆಯಲ್ಲಿ ಈ ಗದ್ಯವಿದೆ... ಇದು ..... ರಂಗವಿಭುಚರಣಯುಗಳನಖಮಯಖಸುಧಾವೂರವಿಹಾರಮ ದಮರಾಳೀಕೃತ ... ... .. ಶ್ರೀಚಿಕದೇವರಾಯನ ಹಾರಾಜಪ್ರ ಸಾದಪರಿಪೂಣ೯ಸ ಚಿವನಿಚಯತಿಲಕ ಶ್ರೀಚಿಕುಪಾಧ್ಯಾಯವಿರಚಿತಮಪ್ಪ ದಿವ್ಯಸೂರಿಚರಿತ್ರಮಹಾಪ್ರಬಂ ಧದೊಳ್.

      ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ---
                      ಲಕ್ಷ್ಮೀಸ್ತುತಿ
ಆವಳಪಾಂಗಕಾಂತಿ ಮುನಿಚಿತ್ತ  ಮರಕ್ಕೆ ದುಗ್ಗಮಾಯ್ತು ಮ | 

ತ್ಯಾವಳ ದಂತಶೋಭೆ ಹರಿನೇತ್ರಚಕೊರಕೆ ಜೊನ್ನ ಮಾದುದಿಂ ||

ತಾವಳೊಡಲ್ಗೊಗ‌ರ್ ಭಜಕಚಕ್ರಕೆ ಪೊಂಬಿಸಿಲಂತೆ ತೋರ್ಕು ಮಾ | 

ಪಾವನಮೂರ್ತಿ ರಂಗವಿಭುವಲ್ಲಭೆಯಿಗೆಮಗಿಷ್ಟಸಿದ್ಧಿಯಂ ||

                          ಚಕ್ರ
ಸುರರಿಪುವಿಚ್ಛಿನ್ನಗಳ | ಚ್ಪುರಿತಮಮಹಾರಕ್ತಧಾರೆಯಿಂ ತೋದುದಿತಾಂ || ಬುರುಹಸಖವೆಂಬರು ಚಿವಿ | ಸ್ಪುರಿತಂ ಕುಡುಗೆಮಗೆ ವಿಷ್ಣು ಚರಂ ನಲವಂ ||
                        ದುರ್ಜನನಿಂದೆ
ಸುರನದಿಯೊಳ್ ಮುಲುಂಗಿಸಿಯೊಡಲ್ಗ  ಸುಗಂಧಮನಣ್ವಗೆಯ್ದ ಭಾ | ಸುರಮಣಿಭೂಷಣಂದುಡಿಸಿ ಪಾಲೆಟೆದೊಯ್ಯನೆ ಸಂತವಿಟ್ಟು ಮೇಣ್ ||. ಉರುಚತುರಂತಯಾನದೊಳಮರ್ಜಿದೊಡಂ ಮಲದಾಸೆ ಪೋಗಿ ಕು || 

ಕ್ಕುರಮಿರದಳ್ಳುದಂ ಬಿಡುವುದೇ ಕಡುನೇಹದೆ ಬೇಡಿಕೊಂಡೊಡಂ |

        1 ಪೊಯ್ಕೆಲ್ಲಯಾಳ್ವಾರು, ಪೂದತ್ತಾಳ್ಳಾರು, ಪೇಯಾಳ್ವಾರು, ತಿರುವಳಿ ಶೈಯಾಳ್ವಾರು, ನಮ್ಮಾಳ್ವಾರು, ಮಧುರಕವಿಯಾಳ್ವಾರು, ಕುಲಶೇಖರಳ್ಳಾರು, ಪೆರಿಯಾಳ್ವಾರು, ಗೋದಾದೇವಿ, ಭಕ್ತಾಂಘ್ರ ರೇಣು, ತಿರುಪ್ಪಾಣಾಳ್ಳಾರು, ತಿರು ಮಂಗೈಯಾಳ್ವಾರು