ಶತಮಾನ] ಪಂಡಿತಮಲ್ಲಿಕಾರ್ಜುನ, 611 ೪ ಸಂತವಿಸಿದ ಸಣ್ಣಮಗಳು' ಎಂಬುದರಿಂದ ಮೈಸೂರು ರಾಜನಾದ ಚಿಕ್ಕ ದೇವರಾಜನ (1672-1704) ಪೋಸ್ವರ್ಗಕ್ಕೆ ಸೇರಿದವಳಂದು ತಿಳಿಯು ಇದೆ. ಆದುದರಿಂದ ಇವಳ ಕಾಲವು ಸುಮಾರು 1685 ಆಗಬಹುದು. ಇವಳ ಗ್ರಂಥ ಪದ್ಮನೀಕಲ್ಯಾಣ ಇದು ಸಾಂಗತ್ಯದಲ್ಲಿ ಬರೆದಿದೆ; ಪದ್ಯ 189. ಇದರಲ್ಲಿ ತಿರುಪತಿ ಶ್ರೀನಿವಾಸದೇವರಿಗೂ ಪದ್ಮನಿಗೂ ನಡೆದ ವಿವಾಹವು ವರ್ಣಿಸಿದೆ. ಆದ ರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ; ಫನ್ನಿನಿ ಪದ್ಮವ ಪೋಲುವ ಕರಚರಣಂಗಳು / ಪದ್ಯ ದೆಸಳ ಪೋಲ್ವ ನಯನ | ಪದ್ಮದಂದದೆ ಮುಖವುಳ್ಳ ಕಾರಣದಿಂದೆ 1 ಸದ್ವಿನಿಯೆಂದು ಕರೆದರು || ಪುಟ್ಟ ಕೈಯಲಿ ತಪ್ಪಾಳೆಯನಿಕ್ಕುವಳು ತಪ್ಪು | ದಟ್ಟಡಿಯಿಟ್ಟು ನಡೆವಳು | ಬಟ್ಟಮುಖದ ಬಾಲೆಯ ನುಡಿಗಳು | ಸೃಷ್ಟಿಯ ಜನವು ಮೋಹಿಸಿತು || ನುಡಿವರು ಗಿಳಿಯಂತೆ ಸಖಿಯರೊಂದಾಗಿ ವೆ | ಅಡಿಯಿಡುವರು ಹಂಸೆಯಂತೆ | ಬೆಡಗಿಂದ ನವಿಲಂತೆ ನಲಿಯುತ್ತಿದ್ದರು ಮುದ್ದು ! ಕಡುಚಪಳೆಯರೊಂದುಗೂಡಿ ! - ಪಂಡಿತಮಲ್ಲಿಕಾರ್ಜುನ, 1687 ಅವನು ಶಂಕರದಾಸಿಮಯ್ಯನ ಚರಿತ್ರೆಯನ್ನು ಬರೆದಿದ್ದಾನೆ. ಈತ ನು ವೀರಶೈವಕವಿ; ಪೊಳಲ್ಕುಂದಾಪುರದವನು, “ಕರಣನಿಧಿ ನಾಗರಿಕ ವಂಶೋದ್ಧರಣ ಚೆನ್ನವೀರಯತನುಜ ಚಿಪ್ಪಿಗರ ಶಿರೋಮಣಿ” ಸಂಗಿಸಿ ಟ್ಟಿಯ ಪ್ರಾರ್ಥನೆಯಿಂದ ಕವಿ ಈ ಗ್ರಂಥವನ್ನು ಚಿಕ್ಕವೀರಕಾಂತೇಶ್ವರನ ಮನೆಯಲ್ಲಿ ರಚಿಸಿದಂತೆ ತಿಳಿಯುತ್ತದೆ. ಗ್ರಂಥಾಂತ್ಯದಲ್ಲಿ ಪ್ರಭವಸಂವತ್ ರದ ಪುಸ್ಯ ಬಹುಳ ದ್ವಾದಶಿಯ ದಿವಸ ಗ್ರಂಧವು ಮುಗಿದಹಾಗೆ ಹೇಳಿದೆ ಇದು ಆವ ಪ್ರಭವವರ್ಷವೋ ತಿಳಿಯದು. [687 ಕ್ಕೆ ಸರಿಯಾದ ಪ್ರಭ ವವರ್ಷವಾಗಿರಬಹುದೆಂದು ಊಹಿಸುತ್ತೇವೆ. ಪೂರ್ವಕಗಳಲ್ಲಿ ಕಾಳಿದಾಸ. ಪಂಡಿತ ಇವರ ಹೆಸರುಗಳು ಹೇಳಿವೆ. ಇವನ ಗ್ರಂಥ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೨
ಗೋಚರ