ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ, ೪ ಸಹ ಶಂಕರದಾಸಿಮಯ್ಯನ ಚರಿತ್ರ ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ; ಸಂಧಿ 16, ಪದ್ಯ 1175, ಇದರಲ್ಲಿ ಚಿಪ್ಪಿಗರ ವಂಶಕ್ಕೆ ಗುರುವಾದ ಶಂಕರದಾಸಿಮಯ್ಯನೆಂಬ ಶಿವಭ ಕ್ಯನ ಚರಿತ್ರಪು ಹೇಳಿದೆ. " ಕಥಾಗರ್ಭ-ಕುಂತಳದೇಶದ ಸ್ಕಂದಶಿಲೆಯಲ್ಲಿ ಗೋವಿಂದದೇವನೆಂಬ ವೈಷ್ಣ ವನಿದ್ದನು, ಇವನ ಹೆಂಡತಿ ದುಮ್ಮವೈ, ಇವರು ಕಾಶಿಗೆ ಪ್ರಯಾಣಮಾಡಿ ದಾರಿ ಯಲ್ಲಿ ನವಿಲೆಗೆ ಬಂದು ಜಡೆ ಯಶಂಕರನ ದೇವಸ್ಥಾನವನ್ನು ಕಂಡಾಗ ಜಡೆಯಶಂಕರನು ಗುರುರೂಪಿಯಾಗಿ ಬಂದು ಗೋವಿಂದದೇವನಿಗೆ ವೀರಶೈವವನ್ನು ಬೋಧಿಸಿ ದೀಕ್ಷೆ ಯನ್ನು ಕೊಟ್ಟು ಶಂಕರದಾಸನೆಂದು ಅವನಿಗೂ ಶಿವದಾಸಿ ಎಂದು ಅವನ ಹೆಂಡತಿಗೂ, ಹೆಸರುಗಳನ್ನಿಟ್ಟು ಪೂಜೆಯ ಕಾಯಕವನ್ನು ನೇಮಿಸಿದನು. ಶಂಕರದಾಸಿಮಯ್ಯನು ಜಡೆಯಶಂಕರನಿಂದ ಭಾಳನೇತ್ರವನ್ನು ಪಡೆದ, ಮುದನೂರ ದೇವದಾಸಿಮಯ್ಯನ ತವನಿಧಿಯನ್ನು ಬಯಲುಮಾಡಿ ಪುನಃ ಕೊಟ್ಟು, ಕಲ್ಯಾಣದ ಜಯಸಿಂಹರಾಯನ ಕೊಟ್ಟಣವನ್ನು ಮರಿಯರ ಕೈಯಲ್ಲಿ ಕುಟ್ಟಿ ಸಿ, ನಯನಶಿವಿಯಿಂದ ನರಹರಿಯ ಮ ರ್ತಿಯನ್ನು ರುಪಿ, ಮೈಲಾರದೇವರಿಂದ ಕೊಡೆ ಹಿಡಿಸಿಕೊಂಡು, ಉದ್ವಿನಿಯ ಮಹಾಕಾ ಳೆಯಿಂದ ಕಾಳಂಜಿಹಿಡಿಸಿಕೊಂಡು, ಜೋಗಿಗಳನ್ನು ಗೆದ್ದು, ನವಿಲೆಗೆ ಮರಳಿ ಬಂದು ಜಡೆಯಶಂಕರನಲ್ಲಿ ಐಕ್ಯವಾದನು. ನಮಗೆ ದೊರೆತ ಪ್ರತಿಯಲ್ಲಿ ಮೊದಲು 73 ಪದ್ಯಗಳು ಇಲ್ಲದೆ ಇದ್ದು ದರಿಂದ ಆ ಭಾಗದಲ್ಲಿ ಉಕ್ತವಾದ ವಿಷಯಗಳನ್ನು ತಿಳಿಸಲು ಅವಕಾಶವಿ ಲ್ಲದೆ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯು

  • ಗರ್ಹಣ ಅತ್ತಿ ಪೂವಾದಾಗ ವಾರಿಧಿ 1 ಬತ್ತಿ ಬಯಲಾದಾಗ ಪಶ್ಚಿಮ | ದತ್ತಣಿಂ ಚಂದ್ರಾರ್ಕರಿಂದ್ರನ ದೆಸೆಗೆ ನಡೆದಾಗ || ಮುತ್ತು ಮೃದುವಾದಾಗ ಹೇಸರ | ಗತ್ತೆ ನಾರುವನಾದಕಾಲಕೆ | ಚಿತ್ರ ನಿರ್ಮಲವಹುದು ಸತಿಯರಿಗೆಂಬುದರಿದರಿದು |

ಶ್ರೀಗಹರ್ಣ ಸಿರಿಯ ಬಯಸುವುದಧಿಕಕಾಮಂ | ಸಿರಿಯನಪಹರಿಸುವುದು ಕೂಧಂ |