ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

624 ಶತಮಾನ]. ಲಕ್ಷ್ಮೀಶ ಕೊಂಡರೆ ಒಂದುವೇಳೆ ಕಾಲವು ಸರಿಹೋಗಬಹುದೆಂದೂ ಮೆ||ರೈಸ್ ಹೇಳು ತಾರೆ,ಈ ಗ್ರಂಥವು 1691 ರಲ್ಲಿ ಹುಟ್ಟಿದುದಾಗಿ ಹೇಳುವ ಇತಿಹಾಸವನ್ನು ಪ್ರಥಮಸಂಪುಟದಲ್ಲಿ ತಿಳಿಸಿದ್ದೇವೆ. ಲಕ್ಷಕವಿ (1724), ಕೋನಯ್ಯ (ಸ. 1740), ಬೊಟ್ಟೂರುರಂಗ (ಸು. 1760) ಇವರುಗಳು ಆತನನ್ನು ಸ್ತುತಿಸುವುದರಿಂದ ಮೇಲಣ ಇತಿಹಾಸದಲ್ಲಿ ಉಕ್ತವಾದ ಕಾಲವು ನಿಜವಾ ಗಿದ್ದರೂ ಇರಬಹುದು. ಅಂತೂ ಇತನು ಸುಮಾರು 1700 ರು ಈ ಚಿಯವನಲ್ಲವೆಂದು ತೋರುತ್ತದೆ. ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಚೆನ್ನಬಸವ ಪುರಾಣವನ್ನು (1584) ಅನುಸರಿಸಿರುವಂತೆ ತೋರುತ್ತದೆ. ಈತನಿಗೆ ಕರ್ಣಾಟಕವಿಚೂತವನಚೈತ್ರ ಎಂಬ ಬಿರುದಿದ್ದಂತ ತಿಳಿ ಯುತ್ತದೆ. ತನ್ನ ಕವಿತಾಚಾತುರಿಯನ್ನು ಈ ಪದ್ಯದಲ್ಲಿ ಹೇಳಿಕೊಂ ಡಿದ್ದಾನೆ'- ಫಾರದೆ ಸರಾರ್ಧಮಂ ವರಯತಿಗೆ ಭಂಗವುಂ | ತಾರದೆ ನಿಜಾನ್ವಯಕ್ರಿಯೆಗಳೆ ದೂಷಣಂ | ಬಾರದೆ ಶೇಷಗುಣಗಣಕಲಾಗೌರವ ತೀರದೆ ದುರುಗಣ್ಣಿ || ಸೇರದೆ ಸುಮಾರ್ಗದೊಳ್ ನಡೆವ ಸತ್ಪುರುಷನ ಗ | ಭೀರದಶ್ಯಂ ಪೋಲ್ವ ಕಾವ್ಯ ಪ್ರಬಂಧಮಂ | ಶಾರದೆಯ ಕರುಣದಿಂ ಪೇಳ್ವೆನಾಂ ದೋಷಮಂ ತೊಳೆದೆಲ್ಲರುಂ ಕೇಳ್ವುದು || ಇವನ ಗ್ರಂಥ ಜೈಮಿನಿಭಾರತ ಇದು ವಾರ್ಧಕಸಮ್ಪದಿಯಲ್ಲಿ ಬರೆದಿದೆ; ಸಂಧಿ 34, ಪದ್ಯ 1907, ಸಂ ಸ್ಕೃತ ಜೈಮಿನಿಭಾರತದ ಆಶ್ವಮೇಧಿಕಪರ್ವದ ಆಧಾರದಮೇಲೆ ಕವಿ ಈ ಗ್ರಂಥವನ್ನು ರಚಿಸಿದ್ದಾನೆ ಇದರ ಉತ್ಕೃಷ್ಟತೆಯನ್ನು ಈ ಪದ್ಯಗ ಳಲ್ಲಿ ಹೇಳಿದ್ದಾನೆ:- ವರವಣ೪ ದಿಂದ ಶೋಭಿತವಾಗಿ ರೂಪವ | ಸ್ವರದಿಂದೆ ಚೆಲ್ವಾಗಿ ಮಧುರತರನವರಸೋ || ದರಭರಿತದಿಂದೆ ವಿಲಸಿತಮಗಿ ಸುಮನೊನುರಾಗho ಪ್ರಚುರವಾಗಿ | 1, ಶಬ್ದಾನುಶಾಸನದ ಉಪೋದ್ಘಾತ, ಪುಟ 46, 2, ಪುಟ 210,