ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಸೋಮಶೇಖರಶಿವಯೋಗಿ 54 ದರಿಂದ ಈ ಕವಿಗೆ ಸಂಬಂಧಪಟ್ಟ ಇತರವಿಷಯಗಳನ್ನು ಹೇಳುವುದ ಸ್ನಾಗಲಿ ಅವನ ಬಂಧವನ್ನು ಉದಾಹರಿಸಿ ತೋರಿಸುವುದಕ್ಕಾಗಲಿ ಅವಕಾ ರವಿಲ್ಲದೆ ಇರುವುದಕ್ಕಾಗಿ ವಿಪಾದಿಸಬೇಕಾಗಿದೆ | ಸೋಮಶೇಖರಶಿವಯೋಗಿ, ಸು 1700 ಇವನು ಬಸವನ ಸಟ್ಟಲದ ಬೆಡಗಿನವಚನದ ಟೀಕೆ, ತೋಂ&'ದ ಸಿದ್ದಲಿಂಗನ ಪಟ್ಟಅಜ್ಞಾನಸಾರಾಮೃತದ ವಚನದ ಟೀಕೆ, ಇವುಗಳನ್ನು ಬರೆದಿದ್ದಾನೆ. ಈತನು ವೀರಶೈವಕವಿ; ಶ್ರೀಸಚ್ಚಿದಾನಂದನಿತ್ಯ ಪರಿಷ ರ್ಣ ಅವಿರಳ ಪರಂಜ್ಯೋತಿಲೀಲಾವಿಗ್ರಹಮೂರ್ತಿಯಾದ ಶ್ರೀಸೋಮಶೇಖ ರಲಿಂಗಚರಣಾರವಿಂದಮಕರಂದ ರಸಪಾನಮತ್ತಮಧುಕರಾಯವಾಣ' ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ತೋಂಟದಸಿದ್ದಲಿಏ ಗನ ಪಟ್ಟ ಅಜ್ಞಾನಸಾರಾಮೃತದ ಟೀಕೆಯ ಆರಂಭದಲ್ಲಿ ತೋಂಟದ ಸಿದ್ಧಲಿಂಗೇಶ್ವರನ ಕರುಣಾಪ್ರಸಾದಪಾತ್ರನಾದ ಬೋಳಬಸವೇಶ್ವರ; ಅವನ ಕರುಣಾಪ್ರಸಾದರ ಇತ್ರ ದ ಗೂಳೂರು, ಸಿದ್ಧಲಿಂಗಯ್ಯ; ಅವನ ಕೃಪಾಪಾತ್ರ ಗುಮ್ಮಳಾಪುರದ ಸಿದ್ಧವೀರಯ್ಯ; ಅವನ ಕರುಣಾಪಾತ್ರ ಗಗನದಯ್ಯ; ಅವನ ಕೃಪಾ ಪಾತ್ರ ಕಟ್ಟಿಗೆಹಳ್ಳಿ ಸಿದ್ದಲಿಂಗೇಶ್ವರ; ಅವನ ಕೃಪಾಪಾತ್ರ ಮುರಿಗೆ ಶಾಂತವೀರೇಶ್ವರ; ಅವನಿಂದನುಗ್ರಹವ ಪಡೆದ ಮುರಿಗೆ ಗುರುಸಿದ್ದೇಶ್ವರ, ಹೀಂಗೆ ಮರುಸಂಪ್ರದಾಯವಿ ಡಿದು ಬಂದು ಬಸವಾದಿ ಮಧಗಣಂಗಳ ವಚನಾನುಭಾವವನ್ನು ಬೆಸಗೊಂಡ ಸೋಮು ಶೇಖರಶಿವಯೋಗಿ ನವರತ್ನಂಗಳ ಸಮೂಹವನು ತರವಿದು ಸರಂಗೊಳಿಸುವಹಾಂಗ ಆ ಗುರುಮುಖದಿಂದ ಬೆಸಗೊಂಡ ಮಹಾನುಭಾವದ ವಾಕ್ಯಂಗಳನು ಕ್ರೋಡೀಕರಿಸಿ ಲೇಖನಂಗ್ಯದಲ್ಲಿ ಮೊದಲು ಸಿದ್ದೇಶ್ವರಸ್ವಾಮಿಗಳ ಷಟ್ಟಲಜ್ಞಾನಸಾರಾಮೃತವೆ ವಚನದಲ್ಲಿ (ಇತ್ಯಾದಿ) ಎಂದಿರುವುದರಿಂದ ಕವಿ ತೋಂಟದಸಿದ್ದಲಿಂಗನ (ಸು. 1470) ಶಿಷ್ಯ ಪರಂಪ ರೆಯಲ್ಲಿ 8 ನೆಯವನಾಗಿದ್ದಂತೆ ತೋರುವುದರಿಂದ ಇವನಕಾಲವು ಸುನಕು 1700 ಆಗಬಹುದು, ಮೇಲೆ ಹೇಳಿದ ಎರಡು ಗ್ರಂಥಗಳಲ್ಲಿರುವ ಬೆಡಗಿನವಚನಗm ಎಂದರೆ ಕಠಿನವಾದ ವಚನಗಳಿಗೆ ಕವಿ ಟೀಕೆಯನ್ನು ಬರೆದಿದ್ದಾನೆ.