ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$ ಕರ್ಣಾಟಕ ಕವಿಚರಿತೆ [17 ನೆಯು ಕೃಷ್ಣ ಶರ್ಮ, ಸು. 1700 ಈತನು ಸರಜಾಹನುಮೇಂದ್ರಚರಿಕೆಯನ್ನು ಬರೆದಿದ್ದಾನೆ. ಈ ಗ್ರಂಥಕ್ಕೆ ಸರಚಾಹನುಮೇಂದ್ರಯಶೋವಿಲಾಸ ಎಂಬ ಹೆಸರೂ ಉಂಟು. ಇವನು ಬ್ರಾಹ್ಮಣಕವಿ; ಭಾರದ್ವಾಜಗೋತ್ರದವನು; ಯಜುಶ್ಚಾಖಾ ಧ್ಯಾಯ, ಇವನ ಪಿತಾಮಹನು ಅಪ್ಪಾಜಿ, ತಂದೆ ಪಟ್ಟಿ ತಿಮಾರ್, ತಾಯಿ ತಿರುಮಲಾಂಬೆ. “ ಮಧುರಾವಿಾನಾಕ್ರೀಚರಣಕೋಕನದಮಕರಂದಾಸ ಕ್ರಭ್ರಮರ, ಮಹೀಶೂರರಾಗ್ಗೇಹದ್ವಾರಾಧ್ಯಕ್ಷ, ಆಚ್ಚಿನಂಗ್ಯಪುರಲ ಕಾರ್ ಖಡ ಕವಿತ್ವಕರಣಿಕ ಕಕಾರಚಾತುರ್ವಿಧ ಕ್ರಮಾಚಾರಧುರ, ಲಕ್ಷ ಇಕವಿ, ಕುಕವಿನೀರ್ದೇರುಪ್ರಚಂಡಜಂಝಮಾರುತ, ಆಶುಕವಿ ” ಎಂದು ತನ್ನನ್ನು ವಿಶೇವಿಸಿ ಹೇಳಿಕೊಂಡಿದ್ದಾನೆ. ಇದರಿಂದ ಇವನು ಮೈಸೂರು ರಾಜರ ಅರಮನೆಯಲ್ಲಿ ಬಾಗಿಲು ಅದ್ದಿ ಕವನ್ನು ಮಾಡುತ್ತಿದ್ದ ನೆಂದೂ ಮಧುರಾವಿಾನಾಹಿಯ ಭಕ್ತನೆಂದೂ ಕವಿತೆಯಲ್ಲಿ ಪ್ರವೀಣನೆಂದೂ ತಿಳಿಯುತ್ತದೆ. ಕಥಾನಾಯಕನ ತಂದೆಯಾದ ಸೀತಾರಾಮಪ್ಪನಾಯಕನ 1681 ರಲ್ಲಿ ಆಳುತ್ತಿದ್ದಂತೆ ಶಾಸನಗಳಿಂದ ತಿಳಿವುದರಿಂದ ಅವನ ಕಾಲವು ಸುಮಾರು 1700 ಆಗಬಹುದು, ಕವಿಯ ಕಾಲವೂ ಅದೇ. ಇವನ ಗ್ರಂಥ ಸರಜಹನುಮೇಂದ್ರಚರಿತ ಇದು ಚಂಪೂರೂಪವಾಗಿದೆ; 5 ಆಶ್ವಾಸಗಳಾಗಿ ಭಾಗಿಸಲ್ಪಟ್ಟಿದೆ. ಅಲ್ಲಲ್ಲಿ ಸಾಂಗತ್ಯಗಳೂ ಪಟ್ಟದಿಗಳೂ ಸಹ ಇವೆ. ಇದರಲ್ಲಿ ಸೂರಕ' ಲೋದ್ಭವನಾದ ಸೀತಾರಾಮನ ಮಗ ತರೀಕೆರೆಪ್ರಭು ಸರಜಹನುಮೇಂ ದ್ರನ ಚರಿತವು ಹೇಳಿದೆ. ಗ್ರಂಥಾವತಾರದಲ್ಲಿ ಪಾರ್ವತೀಸುತಿ ಇದೆ. ಬಳಿ ಕ ಕವಿ ವಿಷ್ಣು, ಜಾನಕಿ, ಶಿವ, ಮೀನಾಕ್ಷಿ, ಗಣಪತಿ, ಸರಸ್ವತಿ ಇವ ರುಗಳನ್ನು ಹೊಗಳಿದ್ದಾನೆ. ಕಥಾನಾಯಕನ ಪರಂಪರೆಯನ್ನು ಹೀಗೆ ಹೇಳಿದ್ದಾನೆ - ವಿಷ್ಣುವಿನ ನಾಭಿಯಲ್ಲಿ ಬ್ರಹ್ಮನು ಹುಟ್ಟಿದನು; ಅವನ ಮಗ ಕಶ್ಯಪ; ಅವನ ಮಗ ಸೂಕ್ಷ್ಯ; ಇವನಿಂದ ಕ್ಷತ್ರಿಯರು ಹುಟ್ಟಿದರು, ಪೂಎನಗೆಣೆಯನ (ಸೂರನ) ವಂಶದಲ್ಲಿ ಜನಿಸಿದುದರಿಂದ ಪೂವಲಕುಲವೆಂಬ ನಾಮವಾಯಿತು, ಈ ಕುಲದಲ್ಲಿ ಕುಮಾರಸರೇಂದ್ರನು ಕುಟ್ಟಿ ಸಂತೆಬೆನ್ನುರವನು (ಸಂತೆಬೆನ್ನೂರನ್ನು ಆಳಿದನು.