ಶತಮಾನ ಪರಮಭಕ್ತ. $4 ವೀರಭದ್ರಸಾಂಗತ್ಯ ಸಂಧಿ 5, ಸದ್ಯ 515, ಆರಂಭದಲ್ಲಿ ಹಲಗೂರಲಿಂಗದ ವಂದನೆ ಇದೆ. - ಹೊಸಲೂರ ವೀರೇಶ್ವರನ ಕರುಣದಿಂದ | ಎಸಗಿ ಪೇಟೆದೆನೀಕೃತಿಯ | ಎಂದು ಕವಿ ಹೇಳುತ್ತಾನೆ. ಪರಮಭಕ್ಕೆ ಸು 17೧೦ ಅವನು ಘೋರಾಸುರಯುದ್ಧವನ್ನು ಬರೆದಿದ್ದಾನೆ ಈತನು ವೀರ ಶೈವಕವಿ, ತನ್ನ ಹೆಸರನ್ನು ಪ್ರಸ್ಯವಾಗಿ ಹೇಳಿಕೊಂಡಿಲ್ಲ, ಕೊನೆಯ ಪದದಲ್ಲಿ -ಧರೆಯೊಳೀಕಥೆಯನಿರಗೋದಿಯಾಲಿಪ ಜನರ ಕರುಣದಿಂ ಪಾರ್ವತೀಶನು ಪಾಲಿಪನು ಎಂದು ಪರಮಭಕ್ತನು ಅವಿರಳಸಿದ್ದಲಿಂಗೇಶ ನಾಣತಿಯೋಳ್ ವರ್ಣಿಸಿದನು-ಎಂದು ಹೇಳಿರುವುದರಿಂದ ಇವನ ಹೆಸರನ್ನು ವರಮಭಕ್ತ ಎಂದು ಮೇಲೆ ಬರೆದಿದ್ದೇವೆ. ಇವನು ಸುಮಾರು 1700 ರಲ್ಲಿ ಇದ್ದಿರಬಹುದು. ಇವನ ಗ್ರಂಧ ಸೌರಾಸುರಯುದ್ಧ ಇದು ವಾರ್ಧಕಸಮ್ಪದಿಯಲ್ಲಿ ಬರೆದಿದೆ; ಸಂಧಿ 8, ಪದ್ಯ 617 ಕಥಾ ಗರ್ಭವೃತ್ರನನ್ನು ನಿಂJನ ಕೊಲ್ಲಲು ತ್ವಷ್ಟ ಎಗೆ ಕೋಪ ಬಂದು ತನಗೆ ಇಂದ್ರನನ್ನು ಕೊಲ್ಲುವ ಮಗನಾಗಬೇಕೆಂದು ಮಾರಣಕೃತ್ಯದಲ್ಲಿ ಹೋ ಮಿಸಲು ಘೋರಾಸಿರನು ಹುಟ್ಟಿದನು. ಇವನನ್ನು ಮಣಿಪುರದ ಕುಲಿಶಭುಜನೆಂಬ ಶಿವಭಕ್ತನು ನಾರ್ರನ ಉಪದೇಶದಿಂದ ಜಯಿಸಿದನು, ಈ ಕಥೆಯನ್ನು ಕೈಲಾಸದಲ್ಲಿ ಶಿವನ ಆಜ್ಞಾನುಸಾರವಾಗಿ ನಿರಂಜನ ಮುನಿ ಪಾರ್ವತಿಗೆ ಹೇಳಿದನು, ಆದನ್ನು ಕವಿ ಪುಲಿಯೂರ ಸೋಮೇಶನ ಕರುಣದಿಂದ ಕನ್ನಡದಲ್ಲಿ ರಚಿಸಿದಂತೆ ಹೇಳುತ್ತಾನೆ. ಸಂಧಿಗಳ ಕೊನೆ ಯಲ್ಲಿ ಅವಿರಳ ರಸಿದ್ಧಲಿಂಗೇಶನ ಅಂಕಿತವಿದೆ, ಗ್ರಂಧಾವತಾರದಲ್ಲಿ ಗಣೇ ಶ, ಸರಸ್ವತಿ ಇವರುಗಳ ಸ್ತುತಿ ಆದೆ. ಈ ಗ್ರಂಥದಿಂದ ಒಂದು ಪದ್ಯ ವನ್ನು ತೆಗೆದು ಬರೆಯುತ್ತೇವೆ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೪
ಗೋಚರ