ಪುಟ:ಕರ್ನಾಟಕ ಗತವೈಭವ.djvu/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೦೫
೧೩ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು

the temples are the same; every convolution of every scroll is different. No two canopies in the whole building are alike; and every part exhibits joyous exuberance of fancy scorning every mechanical restraint.”

ಸಾರಾಂಶ:- ಮಾನವಕ್ರತಿಗಳಲ್ಲಿ ಇದೊಂದು ಆಶ್ಚರ್ಯಜನಕವಾದ ಕೃತಿಯೆಂದೇ ಹೇಳಬಹುದು. ಗುಡಿಗಳಲ್ಲಿ, ಒಂದು ಚಿತ್ರದ ಮೇಲ್ಮೈಯಂತೆ, ಮತ್ತೊಂದು ಚಿತ್ರದ ಮೇಲ್ಮೈಯಿರುವುದಿಲ್ಲ; ಪ್ರತಿಯೊಂದು ಸುಳುವಿನ ತಿರಸುಗಳು ಬೇರೆ ಬೇರೆ ಇರುತ್ತವೆ; ಒಂದರಂತೆ ಒಂದು ಗುಮಟವಿಲ್ಲ; ಕೈವಾಡದವರು ಪ್ರತಿಯೊಂದು ಕಡೆಗೂ ಕೈ ಬಿಗಿಹಿಡಿಯದೆ ಕೆಲಸಮಾಡಿರುವುದರಿಂದ ಎಲ್ಲಿ ನೋಡಿದರೂ ಸುಂದರವಾದ ಶಿಲ್ಪ ಕಲೆಯ ಸುಗ್ಗಿಯೇ ದೃಷ್ಟಿಗೋಚರವಾಗುತ್ತದೆ.” ಎಂದು ಮುಂತಾಗಿ ಮಾಡಿದ ವರ್ಣನೆಯನ್ನು ಕನ್ನಡಿಗರು ಮರೆಯುವುದು ಹೇಗೆ ?
ಳೇಬೀಡಿನ ಹೊಯ್ಸಳೇಶ್ವರನ ಮತ್ತು ಕೇದಾರೇಶ್ವರನ ಗುಡಿಗಳ ವಿಷಯವಾಗಿ ಅವನು ಮತ್ತೂ ಬರೆದಿರುವುದೇನೆಂದರೆ-
The great temple, had it been completed, is one of the buildings on which the advocate of Hindu architecture would desire to take his stand...and if carried out with the richness of detail exhibited in the Kedareshwar, would have made up a whole, which it would be difficult to rival any where. The Kedareshwar temple is "one of the most exquisite specimens of Chalukyan architecture in existence, and one of the most typical.”

ಸಾರಾಂಶ:- ಈ ಗುಡಿಯು ಪೂರ್ಣವಾಗಿ ಕಟ್ಟಲ್ಪಟ್ಟಿದ್ದರೆ, ಹಿಂದೂ ಶಿಲ್ಪಕಲೆಯ ಪುರಸ್ಕರ್ತರು ಆಧಾರಭೂತವಾಗಿ ತೆಗೆದುಕೊಳ್ಳುವ ಗುಡಿಗಳಲ್ಲಿ ಇದು ಒಂದಾಗುತ್ತಿತ್ತು..... ಮತ್ತು ಕೇದಾರೇಶ್ವರ ಗುಡಿಯಲ್ಲಿಯಂತೆ ಇಲ್ಲಿಯೂ