ಪುಟ:ಕರ್ನಾಟಕ ಗತವೈಭವ.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೦೬
ಕರ್ನಾಟಕ ಗತವೈಭವ

ಅತ್ಯಂತ ಸೂಕ್ಷವಾದ ಕೆಲಸವು ಮಾಡಲ್ಪಟ್ಟಿದ್ದರಂತೂ ಈ ಗುಡಿಯಂಥ ಸುಂದರವಾದ ಮತ್ತೊಂದು ಗುಡಿಯನ್ನು ಜಗತ್ತಿನಲ್ಲಿ ಕಾಣುವುದೇ ದುರ್ಲಭವಾಗುತ್ತಿತ್ತು. ಕೇದಾರೇಶ್ವರ ಗುಡಿಯು ಚಾಲುಕ್ಯ ಪದ್ಧತಿಯ ಗುಡಿಗಳಲ್ಲಿ ಅತ್ಯಂತ ಸುಂದರವಾದುದೆಂದು ಆಗಿರುತ್ತದೆ.

ಹೊಯ್ಸಳೇಶ್ವರ ಗುಡಿಯನ್ನು ಕಟ್ಟುವ ಕೆಲಸವು ೮೬ ವರ್ಷಗಳವರೆಗೆ ಒಂದೇ ಸಮವಾಗಿ ನಡೆದಿತ್ತಂತೆ! ಆದರೂ ಅದು ಮುಗಿದಿರುವುದಿಲ್ಲ. ಈ ಗುಡಿಯು ಮುಗಿದಿದ್ದರೆ, ಇಂಥ ಗುಡಿಯು ಜಗತ್ತಿನಲ್ಲಿ ಮತ್ತೊಂದು ಇರುತ್ತಿರಲಿಲ್ಲವೆಂದು ನಿರ್ವಿವಾದವಾಗಿ ಹೇಳಬಹುದಾಗಿತ್ತು. ಕರ್ನಾಟಕರೆ! ಈ ನಿಮ್ಮ ಪೂರ್ವಜರ ವೈಭವವನ್ನು ಕೇಳಿ ನಿಮಗೆ ಆನಂದವುಂಟಾಗದೊ? ಇಂಥ ಮಹತ್ಕೃತ್ಯಳು ಶಾಂತತೆಯಿಲ್ಲದೆ ಜರಗುವವೇನು? ಆದರೂ ಬ್ರಿಟಿಶ ರಾಜರು ಬರುವ ಮೊದಲು ದೇಶದಲ್ಲಿ ಶಾಂತತೆಯಿರಲಿಲ್ಲ, ಎಲ್ಲಿ ನೋಡಿದರೂ ಅರಾಜಕತೆಯಿತ್ತೆಂದು ನಮಗೆ ಆಗದವರು ಹೇಳುತ್ತಾರೆ, ನಾವು ಬಾಯಿ ಮುಚ್ಚಿಕೊಂಡು ಕೇಳುತ್ತೇವೆ; ಇಂಥ ದುರ್ಬಲತನಕ್ಕೇ್ಕೆನನ್ನ ಬೇಕು?

ಬಗೆಯಾಗಿ, ಹಳೆಯ ಚಾಲುಕ್ಯ, ರಾಷ್ಟ್ರಕೂಟ, ಹೊಸ ಚಾಲುಕ್ಯ ಹೊಯ್ಸಳ ಮುಂತಾದ ಅರಸರ ಕಾಲದ ಒಂದೊಂದೇ ವರ್ಣನೆಯನ್ನು ಕೊಟ್ಟಿದ್ದಾಯಿತು. ಇನ್ನು ಕೊನೆಯ ವಂಶವಾದ ವಿಜಯನಗರದ ಕಾಲದಲ್ಲಿಯ ಕಟ್ಟಡವೊಂದನ್ನು ಕುರಿತು ತುಸ ಹೇಳಿ ಈ ಬೆಳೆದ ಪ್ರಕರಣವನ್ನು ಮುಗಿಸುವೆವು.

ಹಂಪೆ ಅಥವಾ ವಿಜಯನಗರವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು, ಅಲ್ಲಿ ಸುಮಾರು ೨೦೦೦ ಗುಡಿಗಳಿದ್ದುವಂತೆ ! ಆ ಪಟ್ಟಣದೊಳಗಿನ ಅತ್ಯಂತ ಪ್ರಸಿದ್ಧವಾದ ವಿಜಯ ವಿಠಲ ಗುಡಿಯೊಂದನ್ನೇ ಇಲ್ಲಿ ವರ್ಣಿಸುವೆವು. ಈ ಗುಡಿಯು ವೇರಳದ ಕೈಲಾಸ ಗುಡಿಯನ್ನು ಹೋಲುತ್ತದೆ. ಈ ದೇವಾಲಯವನ್ನು ಕಟ್ಟುವ ಕೆಲಸವು ಕೃಷ್ಣ ದೇವರಾಯನ ಕಾಲಕ್ಕೆ ಪ್ರಾರಂಭವಾಯಿತು. ಮುಂದೆ ಅಚ್ಯುತರಾಯ ಮತ್ತು ಸದಾಶಿವರಾಯನ ಕಾಲದಲ್ಲಿಯೂ ಆ ಕಟ್ಟಡದ ಕೆಲಸವು ನಡೆಯುತ್ತಲೇ ಇತ್ತು. ಆದರೆ ೧೫೬೫ ನೆಯ ಇಸವಿಯಲ್ಲಿ ತಾಳೀಕೋಟೆಯ ಕಾಳಗವಾದುದರಿಂದ ಗುಡಿಯ ಕಟ್ಟುವಿಕೆಯು ಅಲ್ಲಿಗೆ ನಿಂತುಹೋಯಿತು. ಮದ್ರಾಸ್ ಆರ್ಕಿಯಾಲಾಜಿಕಲ್ ಸರ್ವೆಯ ಸುಪರಿಂಟೆಂಡೆಂಟರಾದ ಮಿ|ರೇ ಎಂಬ